ರಾಜಕಾರಣದ ಮೌಲ್ಯ ಕುಸಿತಕ್ಕೆ ಮತದಾರರು ಹೊಣೆಗಾರರು

KannadaprabhaNewsNetwork |  
Published : Jun 14, 2024, 01:07 AM IST
53 | Kannada Prabha

ಸಾರಾಂಶ

ಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತ ಹೊಸದೇನೂ ಅಲ್ಲ. ಪುರಾತನ ಭಾರತದ ವೈಶಾಲಿ. ಲಿಚ್ಛವಿ, ಕುಶಾನ ಮುಂತಾದ ಗಣರಾಜ್ಯಗಳು ಪ್ರಜಾಪ್ರಭುತ್ವದ ರೂಪುರೇಷೆಗಳನ್ನು ಜಗತ್ತಿಗೆ ಪರಿಚಯಿಸಿದ್ದವು. ಆದರೆ, ಆಧುನಿಕ ಪ್ರಜಾಪ್ರಭುತ್ವವು ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಚುನಾವಣಾ ಅಕ್ರಮ ಮುಂತಾದ ಕಲುಷಿತ ಮಾರ್ಗದಿಂದ ಅರ್ಥ ಕಳೆದುಕೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ರಾಜಕಾರಣ ತನ್ನ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ತಪ್ಪು ದಾರಿಯಲ್ಲಿ ಸಾಗಲು ರಾಜಕಾರಣಿಗಳಷ್ಟೇ ಮತದಾರರೂ ಸಹ ಹೊಣೆಗಾರರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತ ಹೊಸದೇನೂ ಅಲ್ಲ. ಪುರಾತನ ಭಾರತದ ವೈಶಾಲಿ. ಲಿಚ್ಛವಿ, ಕುಶಾನ ಮುಂತಾದ ಗಣರಾಜ್ಯಗಳು ಪ್ರಜಾಪ್ರಭುತ್ವದ ರೂಪುರೇಷೆಗಳನ್ನು ಜಗತ್ತಿಗೆ ಪರಿಚಯಿಸಿದ್ದವು. ಗ್ರೀಕ್ ದೇಶದ ಅಥೆನ್ಸ್ಹಾಗೂ ಸ್ಪಾರ್ಟಾಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದಂತೆ ಭಾರತದ ಗಣರಾಜ್ಯಗಳೂ ಪ್ರಜಾಪ್ರಭುತ್ವಕ್ಕೆ ಖ್ಯಾತವಾಗಿದ್ದವು.

ಆದರೆ, ಆಧುನಿಕ ಪ್ರಜಾಪ್ರಭುತ್ವವು ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಚುನಾವಣಾ ಅಕ್ರಮ ಮುಂತಾದ ಕಲುಷಿತ ಮಾರ್ಗದಿಂದ ಅರ್ಥ ಕಳೆದುಕೊಳ್ಳುತ್ತಿದೆ. ಇದಕ್ಕೆ ಮತದಾರರೂ ಪರೋಕ್ಷವಾಗಿ ಸಹಕರಿಸುತ್ತಾ ಪ್ರಜಾಸತ್ತಾತ್ಮಕ ಮೌಲ್ಯಗಳ ಅವಸಾನಕ್ಕೆ ಕಾರಣರಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಮತ್ತೊಬ್ಬ ಅತಿಥಿ ಮೈಸೂರಿನ ಪೊಲೀಸ್ ಕಂಟ್ರೋಲ್ ರೂಂನ ಎಸ್ಐ ಮಹೇಶ್ ಮಾತನಾಡಿ, ಸೈಬರ್ ವಂಚನೆಗಳು ಅತಿಯಾಗಿ ನಡೆಯುತ್ತಿದ್ದು, ಬ್ಯಾಂಕ್ ವಂಚನೆ ಮುಂತಾದ ಸಾಮಾಜಿಕ ಅಪರಾಧಗಳನ್ನು ತಡೆಗಟ್ಟಲು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ನೆರವು ನೀಡಬೇಕು ಎಂದರು.

ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಕೆ.ವಿ. ಬಿಂದು ಎಲಿಜಬೆತ್ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿ, ಮಂತ್ರಿಗಳು, ಸದನದ ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರಿಗೆ ಅಧಿಕಾರ ಮತ್ತು ಶಿಸ್ತಿನ ಪ್ರಮಾಣ ವಚನವನ್ನು ಅವರು ಬೋಧಿಸಿದರು. ಸಂತ ಜೋಸೆಫರ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತ ಡಿಸೋಜ, ಹುಣಸೂರಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಡೈಸಿ ಡಿಕೋಸ್ತ, ಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಇದ್ದರು.ಇಂದು ಮೈಸೂರಿಗೆ ಸಿಎಂ ಸಿದ್ದರಾಮಯ್ಯಮೈಸೂರು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಜೂ.14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅಂದು ಸಂಜೆ 4 ಗಂಟೆಗೆ ಆಗಮಿಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಅವರು, ಜೂ. 15 ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ರಾಜೀವ್ ಸ್ನೇಹ ಬಳಗವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜಿಸಿರುವ ಲಕ್ಷ ವೃಕ್ಷ ಯೋಜನೆ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 7.30ಕ್ಕೆ ಅರವಿಂದನಗರದ ಆರ್.ಸಿ. ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಿರುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾತ್ರಿ 8 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗುವರು.

PREV

Recommended Stories

ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ ನಾಳೆ
ಅಧಿಕಾರಿಗಳಿಗೆ ಮಕ್ಕಳ ನರಕಯಾತನೆ ದರ್ಶನ