ಕುಷ್ಟಗಿ: ದೇಶದ ಪ್ರತಿಯೊಬ್ಬ ಮತದಾರರು ಮತದಾನ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವ ಮತದಾರರ ಅತ್ಯುನ್ನತ ಸ್ಥಾನದಲ್ಲಿದ್ದು, ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಚಿಂತಕ ಶರಣು ತೆಮ್ಮಿನಾಳ ಮಾತನಾಡಿ, ಸುಭದ್ರ ದೇಶದ ನಿರ್ಮಾಣಕ್ಕಾಗಿ ಮತದಾನ ಮಾಡುವದು ಅವಶ್ಯಕವಾಗಿದೆ. ಪ್ರತಿಯೊಬ್ಬರು ಅರ್ಹ ಮತದಾರರು ಮತದಾನ ಮಾಡಬೇಕು. ಮತದಾನದಿಂದ ವಂಚಿತರಾಗಬಾರದು ಎಂದ ಅವರು, ಪ್ರಜಾಪ್ರಭುತ್ವದ ಉಳಿವಿನಲ್ಲಿ ಯುವಕರ ಪಾತ್ರ, ದೇಶದ ಗೌರವ ವಿಷಯದ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ, ಪುರಸಭೆ ಮುಖ್ಯ ಅಧಿಕಾರಿ ವೆಂಕಪ್ಪ ಬೀಳಗಿ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ ಕೆಂಗಾರಿ, ಅಬ್ದುಲ್ ರಜಾಕ್, ಅಜಿತ್ ಜೋಷಿ, ಗೀತಾ ಅಯ್ಯಪ್ಪನವರು, ವೀಣಾ ಸೊನ್ನದ, ಬಸವರಾಜ ಚಳಗೇರಿ, ಬಿಎಲ್ಓ ಗಳು ವಿದ್ಯಾರ್ಥಿಗಳು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಇದ್ದರು. ಕಂದಾಯ ಇಲಾಖೆಯ ಸಿಬ್ಬಂದಿ ಶರಣು ಹುಡೇದ ಕಾರ್ಯಕ್ರಮ ನಿರೂಪಿಸಿದರು.