ಮತಗಳನ್ನು, ಮಗಳನ್ನು ಅಯೋಗ್ಯರಿಗೆ ಕೊಡಬಾರದು

KannadaprabhaNewsNetwork | Published : Apr 20, 2024 1:05 AM

ಸಾರಾಂಶ

ಚುನಾವಣೆಗಳಲ್ಲಿ ಅಮೂಲ್ಯವಾದ ಮತಗಳನ್ನು ಮತ್ತು ಹಿರಿಯರ ಬಗ್ಗೆ ಗೌರವ ನೀಡುವ ಮಗಳನ್ನು ಆಯೋಗ್ಯರಿಗೆ ಕೊಡಬಾರದು ಎಂದು ರೈತ, ಜನಜಾಗೃತಿ ವೇದಿಕೆ ಸದಸ್ಯ ವೆಂಕಟರಾಮಾಂಜನೇಯ ಮಲೇಬೆನ್ನೂರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಜನಜಾಗೃತಿ ವೇದಿಕೆ ಸದಸ್ಯ ವೆಂಕಟರಾಮಾಂಜನೇಯ ಸಲಹೆ । ಮತದಾನ ಜಾಗೃತಿ ಕರಪತ್ರ ಬಿಡುಗಡೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಚುನಾವಣೆಗಳಲ್ಲಿ ಅಮೂಲ್ಯವಾದ ಮತಗಳನ್ನು ಮತ್ತು ಹಿರಿಯರ ಬಗ್ಗೆ ಗೌರವ ನೀಡುವ ಮಗಳನ್ನು ಆಯೋಗ್ಯರಿಗೆ ಕೊಡಬಾರದು ಎಂದು ರೈತ, ಜನಜಾಗೃತಿ ವೇದಿಕೆ ಸದಸ್ಯ ವೆಂಕಟರಾಮಾಂಜನೇಯ ಅಭಿಪ್ರಾಯಪಟ್ಟರು.

ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕರಪತ್ರ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಮತದಾರು ಚುನಾವಣೆಗಳಲ್ಲಿ ಮತಕ್ಕೆ ₹೨೦೦೦ ಗಳಿಗೆ ಮತಗಳನ್ನು ಮಾರಾಟ ಮಾಡಿಕೊಳ್ಳುವ ಪದ್ಧತಿ ಸಾಮಾನ್ಯವಾಗಿದೆ. ತಂದೆ-ತಾಯಿ ನೋಡಿಕೊಳ್ಳದೇ, ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ ಎಂದು ವಿಷಾದಿಸಿದರು.

ಯೋಜನಾಧಿಕಾರಿ ವಸಂತ ದೇವಾಡಿಗ ಮಾತನಾಡಿ, ಕಳೆದ ವರ್ಷದಲ್ಲಿ ಎಲ್ಲ ಸೂಚನೆಯಂತೆ ದೇವಾಲಯ, ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಸಾಲದ ವಿಚಾರದಲ್ಲಿ ಕಂತು ಬಾಕಿ ಇಲ್ಲದಿರುವುದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ವಾರ್ಷಿಕ ಕ್ರಿಯಾ ಪ್ರಕಾರ ಯೋಜನೆಯಲ್ಲಿ ೧೫ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ೨ ನವಜೀವನ ಉತ್ಸವ, ೨ ಮದ್ಯಪಾನ ವಿರೋಧಿ ದಿನಾಚರಣೆ, ೪ ನವಜೀವನ ಸಂಘಗಳು ಮತ್ತು ಕಿರುಚಿತ್ರಗಳ ಪ್ರದರ್ಶನ ಮಾಡಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ ಮಾತನಾಡಿ, ನಮ್ಮ ಕೋರಿಕೆ ಮೇರೆಗೆ ೨೦೨೪-೨೫ನೇ ಸಾಲಿನಲ್ಲಿ ಯೋಜನಾ ವ್ಯಾಪ್ತಿಯ ಕೃಷಿ ವಿಭಾಗದಲ್ಲಿ ನೀರು ಸಂರಕ್ಷಣೆ ಮತ್ತು ಮಣ್ಣು ಫಲವತ್ತತೆ ಕುರಿತ ಕಾರ್ಯಕ್ರಮ ಆಯೋಜಿಸಲು ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ.ಮಂಜುನಾಥ್ ಮಾತನಾಡಿ, ಮಧ್ಯ ಕರ್ನಾಟಕದ ಚುನಾವಣೆಗಳಲ್ಲಿ ಮಧ್ಯ ಹಂಚದೇ ಚುನಾವಣೆಗಳು ನಡೆಯುತ್ತಿರುವುದು ಸಮಾಧಾನ ತಂದಿದೆ. ಆದರೂ ವಾರ್ಷಿಕ ಯೋಜನೆಗಳ ಯಶಸ್ಸಿಗೆ ಬೆಂಬಲ ಇದೆ ಎಂದರು.

ಮಕ್ಕಳ ವೈದ್ಯ ಡಾ.ಶ್ರೀವಾಸ್ ಮಾತನಾಡಿ, ವಿದ್ಯಾವಂತರೇ ಹೆಚ್ಚು ಆಮಿಶಕ್ಕೆ ಒಳಗಾಗುತ್ತಿರುವುದು ಖೇದದ ಸಂಗತಿ, ಪಕ್ಷಗಳು ಯುವಜನರಿಗೆ ಉದ್ಯೋಗ ನೀಡಲು ಕಾರ್ಖಾನೆ ಸ್ಥಾಪಿಸಬೇಕಿದೆ. ಮಕ್ಕಳಿಗೆ ಮತದಾನ ಕುರಿತು ಪಠ್ಯ ಪುಸ್ತಕಗಳಲ್ಲಿ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಜನಜಾಗೃತಿ ಸಮಿತಿ ಸದಸ್ಯರಾದ ಎನ್‌.ಎಲ್. ಪ್ರಕಾಶ್, ಹನುಮಂತರಾಯ, ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಕಲಾಲ್ ಹಾಗೂ ಮೇಲ್ವಿಚಾರಕರು ಭಾಗವಹಿಸಿದ್ದರು.

- - - -ಚಿತ್ರ೧:

ಮಲೇಬೆನ್ನೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮತದಾನ ಕರಪತ್ರ ಬಿಡುಗಡೆ ಮಾಡಲಾಯಿತು.

Share this article