ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ

KannadaprabhaNewsNetwork |  
Published : Apr 21, 2024, 02:22 AM IST
ಕೊಡೇಕಲ್ ಗ್ರಾಮದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ದೇಶದ ಅಭಿವೃದ್ಧಿಗೆ ಶ್ರಮಿಸುವ ಸೂಕ್ತ ವ್ಯಕ್ತಿಗೆ ಮತ ನೀಡುವ ಮೂಲಕ ಸುಭಧ್ರವಾದ ಸರ್ಕಾರವನ್ನು ನೀಡವುದು ಮತದಾರರ ಕರ್ತವ್ಯ

ಕನ್ನಡಪ್ರಭ ವಾರ್ತೆ ಕೊಡೇಕಲ್

ದೇಶದ ಭವಿಷ್ಯ ರೂಪಿಸುವಲ್ಲಿ ಮತದಾರ ಪಾತ್ರ ಬಹುಮುಖ್ಯವಾಗಿದ್ದು, ಕುಕ್ಕರ್, ಲಿಕ್ಕರ್ ಸೇರಿ ಇನ್ನಿತರ ಆಸೆ ಆಮಿಷಗಳಿಗೆ ನಿಮ್ಮ ಅಮೂಲ್ಯ ಮತ ಮಾರಿಕೊಳ್ಳಬೇಡಿ ಎಂದು ಖ್ಯಾತ ಹಾಸ್ಯ ಕಲಾವಿದ ಹಾಗೂ ಜಿಲ್ಲಾ ಚುನಾವಣಾ ರಾಯಭಾರಿ ಬಸವರಾಜ ಮಹಾಮನಿ ಹೇಳಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆ ಮತ್ತು ಸುರಪೂರ ವಿಧಾನ ಸಭೆ ಉಪ ಚುನಾವಣೆ ಹಿನ್ನೆಲೆ ಕೊಡೇಕಲ್ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಸ್ವೀಪ್ ಸಮಿತಿ, ತಾಲೂಕಾಡಳಿತ, ಸ್ವಿಪ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಮತದಾನ ಹಕ್ಕನ್ನು ನೀಡಿದ್ದಾರೆ. ಈ ಒಂದು ಹಕ್ಕನ್ನು ದೇಶದ ಪ್ರತಿಯೊಬ್ಬ ಪ್ರಜೆ ಬಳಕೆ ಮಾಡಿಕೊಳ್ಳುವ ಮೂಲಕ ನೂರು ಬಾರಿ ಯೋಚನೆ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸುವ ಸೂಕ್ತ ವ್ಯಕ್ತಿಗೆ ಮತ ನೀಡುವ ಮೂಲಕ ಸುಭಧ್ರವಾದ ಸರ್ಕಾರವನ್ನು ನೀಡವುದು ಮತದಾರರ ಕರ್ತವ್ಯವಾಗಿದೆ ಎಂದರು.

ಮನೆಯಲ್ಲಿ ಮಕ್ಕಳ ಮದುವೆ ಮಾಡುವಾಗ ಯಾವ ರೀತಿಯಾಗಿ ಯೋಚಿಸಿ ಮದುವೆ ಮಾಡುತ್ತೆವೇಯೋ, ಅದರಂತೆ ಮತದಾರರು ಕೂಡ ತಮ್ಮ ಮತ ಮಾರಿಕೊಳ್ಳದೆ ಮತದಾನ ಮಾಡಬೇಕು ಎಂದು ಕೆಲವು ಹಾಸ್ಯ ಸಂಗತಿಗಳ ಮೂಲಕ ಮತದಾನದ ಜಾಗೃತಿ ಮೂಡಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ಮಾಯಾ ಎಸ್.ಆರ್. ನಾಯಕ ಮತ್ತು ಗಂಗಾಧರ ಹೊಟ್ಟಿ ಮಾತನಾಡಿ, ಮತದಾನಕ್ಕೆ ಯಾವುದೆ ಜಾತಿ, ಮತ, ಲಿಂಗ ಎನ್ನುವ ತಾರತಮ್ಯಗಳಿಲ್ಲ. ಯಾರು ದೇಶ, ರಾಜ್ಯ, ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಅವರಿಗೆ ನಿಮ್ಮ ಮತವನ್ನು ನೀಡಿ ಯಾವುದೆ ಕಾರಣಕ್ಕೂ ಮತದಾನದಿಂದ ವಂಚಿತರಾಗಬೇಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಗಂಗಾಧರ ಹೊಟ್ಟಿ ಅವರು ತಮ್ಮ ಸ್ವರಚಿತ ಹಾಡನ್ನು ಹಾಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಸಿ .ಗಂಗಾಧರ ದೊಡಮನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಸ್ವಾಮಿ ಹಿರೇಮಠ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದದ್ದರು.

ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೆಶಕರಾದ ರಾಜು ಭಾವಿ, ಪಿಡಿಒ ಸಂಗಣ್ಣ ನಾಗಬೇನಾಳ, ಶಿಕ್ಷಣ ಇಲಾಖೆ, ಅಂಗನವಾಡಿ ಮೇಲ್ವಿಚಾರಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

ಇದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು, ನಂತರ ಮಹಿಳೆಯರು ಮತ್ತು ಪುರುಷರಿಗೆ ವಿವಿಧ ಆಟೋಟಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ನೆಮ್ಮದಿ ಜೀವನಕ್ಕಾಗಿ ಗ್ಯಾರಂಟಿಯಲ್ಲಿ ಪ್ರಾಮುಖ್ಯತೆ: ಚಲುವರಾಯಸ್ವಾಮಿ
ರಂಗ ನಿರ್ದೇಶಕ ಕೆ.ಪಿ.ದೊಡ್ಡಿ ದೇವರಾಜುಗೆ ಬಂಗಾರದ ಕಡಗ ಸಮರ್ಪಣೆ