ಕನ್ನಡಪ್ರಭ ವಾರ್ತೆ ಸುರಪುರ
ಮತದಾನದ ಮಹತ್ವದ ಕುರಿತಂತೆ ಮತದಾನ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸಿ ಎಂದು ರಂಗು ರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಪ್ರತಿಜ್ಞಾ ವಿಧಿ ಬೋಧಿಸಿ, ಅರಿವು ಮೂಡಿಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷ್ಯ ವಾಕ್ಯ ಹೇಳಲಾಯಿತು.
ನಂತರ ಚುನಾವಣಾಧಿಕಾರಿಗಳು ಮಾತನಾಡಿ, ಮತದಾನ ಪ್ರಜಾಪ್ರಭುತ್ವದ ಅಡಿಗಲ್ಲು ಮತ್ತು ಸಂವಿಧಾನಿಕ ಹಕ್ಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಮತ್ತು ಕರ್ತವ್ಯ ನಿಭಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸಿದರು.ಸಹಾಯಕ ಅಧಿಕಾರಿ ಕಾವ್ಯರಾಣಿ, ವಿಜಯಕುಮಾರ, ನಗರಸಭೆ ಕಮಿಷನರ್ ಮಂಜುನಾಥ ಶಿಡ್ಲಘಟ್ಟ, ತಾಪಂ ಅಧಿಕಾರಿ ಬಸವರಾಜ ಸಜ್ಜನ್, ಶಾಂತಪ್ಪ ಹೊಸೂರು, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಮಹೇಶ ಮಾಳಗಿ, ರತ್ನಮ್ಮ, ಸಂಗಮ್ಮ, ಗುರುಸ್ವಾಮಿ, ಹಣಮಂತ ಯಾದವ, ಮೋಹಿನುದ್ದೀನ್, ದುರ್ಗಪ್ಪ ನಾಯಕ, ತಿಪ್ಪಮ್ಮ ಬಿರಾದಾರ್ ಸೇರಿದಂತೆ ನಗರಸಭೆ ಅಧಿಕಾರಿಗಳು ಇದ್ದರು.