ಹರಿಹರ: ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉಪನ್ಯಾಸಕಿ ಈ. ಉಷಾ ಹೇಳಿದರು.
ನಗರದ ಕಾಳಿದಾಸ ವಿದ್ಯಾಸಂಸ್ಥೆಯಲ್ಲಿ ಚಿಂತನ ಪ್ರತಿಷ್ಠಾನ ಮತ್ತು ಶ್ರೀ ನೀಲಕಂಠೇಶ್ವರ ಸ್ನೇಹ ಬಳಗದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಕಾರ್ಯ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ, ಭಯ, ಆತಂಕಪಡದೇ ಯೋಗ್ಯರಿಗೆ ಮತ ಚಲಾಯಿಸಬೇಕು ಎಂದರು.ನಿವೃತ್ತ ಶಿಕ್ಷಕಿ ಸುನಂದ ಮಕ್ಕಿಮನಿ ಮಾತನಾಡಿ, ಹಿಂದೆ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾಳೆ. ಪುರುಷರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿದರೆ ಮಹಿಳೆಯರು ಹೆಚ್ಚಿನ ಸಾಧನೆ ಮಾಡಬಹುದಾಗಿದೆ ಎಂದ ಅವರು, ಮತದಾನದ ದಿನ ಯಾವುದೇ ಸಬೂಬು ಹೇಳದೆ ಮತಗಟ್ಟೆಗೆ ತೆರಳಿ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಡಿ.ಎನ್. ಶಾಂಭವಿ ಕಾರ್ಯಕ್ರಮ ಉದ್ಘಾಟಿಸಿದರು. ಚಂದ್ರಮ್ಮ ಕೆ. ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ಸುಬ್ರಹ್ಮಣ್ಯ, ಕವಿತಾ, ಸರ್ವಮಂಗಳ, ಅಕ್ಕಮ್ಮ ಧೂಳ, ಸುಮುಖ, ವಿಜಯಲಕ್ಷಿ÷್ಮ ಬಸವರಾಜ್, ಸುಜಾತಾ ಮಂಜುನಾಥ್, ಭಾರತಿ ಶ್ರೀನಿವಾಸ್, ಕಾಮಾಕ್ಷಿ ವೀರಣ್ಣ, ಯಶೋಧ ಮಂಜುನಾಥ್, ರೇಖಾ ಪರಶುರಾಮ್, ಅನ್ನಪೂರ್ಣ ಶ್ರೀನಿವಾಸ್, ಸುಬ್ರಹ್ಮಣ್ಯ ನಾಡಿಗೇರ, ಕೊಟ್ರಪ್ಪ.ಎಚ್.ಕೆ, ವೀರಣ್ಣ ಅಗಡಿ, ಗಂಗಾಧರ್ ಕೊಟಗಿ, ಮಂಜುನಾಥ ಅಗಡಿ, ಗುಪ್ತ, ವಿನಯ್, ಹಾಲಪ್ಪ ಇದ್ದರು.- - -
-೩೦ಎಚ್‌ಆರ್‌ಆರ್೧:ಹರಿಹರದ ಕಾಳಿದಾಸ ವಿದ್ಯಾಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ, ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.