ವೃಕ್ಷಥಾನ್ ಹೆರಿಟೇಜ್ ರನ್: 1600 ಓಟಗಾರರು ಭಾಗಿ

KannadaprabhaNewsNetwork |  
Published : Dec 06, 2025, 03:30 AM IST

ಸಾರಾಂಶ

ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಓಟಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 1600 ಓಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಓಟಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 1600 ಓಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗ್ಗೆ 8ಕ್ಕೆ ಪ್ರಾರಂಭವಾದ ನಾನಾ ವಿಭಾಗಗಳ ಓಟಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ವೃಕ್ಷಥಾನ್ ಧ್ವಜ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬೆಳಗ್ಗೆ 7ರಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ ಎಲ್.ಕೆ.ಜಿ, ಯುಕೆಜಿ, ಮತ್ತು 1ರಿಂದ 5ನೇ ತರಗತಿ ವರೆಗಿನ ಮಕ್ಕಳು, ವಾಕ್ ಮತ್ತು ಶ್ರವಣ ದೋಷ ಮಕ್ಕಳು ಅತ್ಯುತ್ಸಾಹದಿಂದ ಓಟದಲ್ಲಿ ಪಾಲ್ಗೊಂಡರು. ಓಡುತ್ತಿದ್ದ ಮಕ್ಕಳಿಗೆ ಚಪ್ಪಾಳೆ, ಘೋಷಣೆ ಹಾಕುವ ಮೂಲಕ ಹುರುದುಂಬಿಸಿದರು. ವಾಕ್ ಮತ್ತು ಶ್ರವಣದೋಷ ಮಕ್ಕಳು ಓಟದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪತ್ರಕರ್ತರೂ ಕೂಡ ತಮ್ಮ ದೈನಂದಿನ ಜಂಜಾಟದಿಂದ ಸ್ವಲ್ಪ ವಿರಾಮ ಪಡೆದು ಓಟದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

30ಕ್ಕೂ ಹೆಚ್ಚು ಜನ ದೈಹಿಕ ಶಿಕ್ಷಕರು ಓಟ ನಿರ್ವಹಿಸಿದರು. ವೃಕ್ಷಥಾನ್ ಹೆರಿಟೆಜ್ ರನ್-2025 ಸಮಿತಿಯ ಡಾ.ಮಹಾಂತೇಶ ಬಿರಾದಾರ, ಸಂಕೇತ ಬಗಲಿ, ಶಿವು ಕುಂಬಾರ, ರಮೇಶ ಬಿರಾದಾರ, ಅಮೀತ ಬಿರಾದಾರ, ಅಸ್ಪಾಕ ಮನಗೂಳಿ ಉಸ್ತುವಾರಿಗಳಾಗಿ ನಿಭಾಯಿಸಿದರು.

ನರ್ಸರಿ, ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಆಯೋಜಿಸಲಾಗಿದ್ದ 50 ಮೀ. ಓಟ ವೃಕ್ಷ ಕಿಡ್ಸ್ ರನ್‌ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ ಸಿಂಗೆ‌ ಪ್ರಥಮ, ಭುವನೇಶ್ವರಿ ಅಂಗಡಿ‌ ದ್ವಿತೀಯ, ಪೂರ್ವಾ ಪಾಟೀಲ ತೃತೀಯ ಹಾಗೂ ಹಿಬಾಫಾತಿಮಾ ಹೆಬ್ಬಾಳ, ಸುದೀಕ್ಷಾ ಸಂಬಣ್ಣಿ ಸಮಾಧಾನಕರ ಬಹುಮಾನ ಪಡೆದರು. ಬಾಲಕರ ವಿಭಾಗದಲ್ಲಿ ಪ್ರೇಮಕುಮಾರ ಅಂಬಿ ಪ್ರಥಮ, ಅಫ್ತಾಬ್ ಜೈನಾಪುರ ದ್ವಿತೀಯ, ಪ್ರೀತಂ ರಾಠೋಡ ತೃತೀಯ, ಹಾಗೂ ವಿರಾಜ ರಾಠೋಡ, ಜೈದೇವ ಹೇರಲಗಿ, ಮೊನೇಶ ಝಿಂಗಾಡೆ ಸಮಾಧಾನಕರ ಬಹುಮಾನ ಪಡೆದರು.

2ನೇ ಮತ್ತು 3ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ 200 ಮೀ. ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ಚಂದನಾ ಮಂಟೂರ ಪ್ರಥಮ, ಸ್ಪೂರ್ತಿ ಜಂಬಗಿ ದ್ವಿತೀಯ, ಆಯತ್ತ ರಾಠೋಡ ತೃತೀಯ ಹಾಗೂ ದೀಪಾ ಬೇತ, ಜೋಯಾ ಮುಲ್ಲಾ, ಶ್ರೀವಿದ್ಯಾ ಜೋಶಿ, ಸಮಾಧಾನಕರ ಬಹುಮಾನ ಪಡೆದರು. ಬಾಲಕರ ವಿಭಾಗದಲ್ಲಿ ಓಂಕಾರ ಮಣ್ಣೂರ‌ ಪ್ರಥಮ, ಸ್ಪರ್ಷ ಅಂಬಿಗೇರ ದ್ವಿತೀಯ, ವಿಷ್ಣು ಪರೀಟ ತೃತೀಯ ಹಾಗೂ ಪ್ರಥ್ವಿರಾಜ ಬಳ್ಳಾರಿ, ಕೇಶವ ಸಾತಿಹಾಳ, ಶ್ರೀವಾತ್ಸವ ಜೋಶಿ ಸಮಾಧಾನಕರ ಬಹುಮಾನ ಪಡೆದರು.

4ನೇ ಮತ್ತು 5ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ 400 ಮೀ. ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ಅಫ್ರೀನ್ ನದಾಫ ಪ್ರಥಮ, ಲಕ್ಷ್ಮಿ ಹೊಸಮನಿ ದ್ವಿತೀಯ, ಶೃದ್ದಾ ಪವಾರ ತೃತೀಯ ಹಾಗೂ ಸೃಷ್ಠಿ ಕುಂದರಗಿ, ಜಿತಾಂಕ್ಷಾ ಶಹಾ ಸಮಾಧಾನಕರ ಬಹುಮಾನ ಪಡೆದರು. ಬಾಲಕರ ವಿಭಾಗದಲ್ಲಿ ಅಮೀತ ಚವ್ಹಾಣ ಪ್ರಥಮ, ವಿವೇಕ ಬೈಚಬಾಳ‌ ದ್ವಿತೀಯ, ವಿಠ್ಠಲ ಹಾಲಳ್ಳಿ ತೃತೀಯ ಹಾಗೂ ಕೃಷ್ಣಕುಮಾರ, ಫಾರೂಖ ದಳವಾರ ಸಮಾಧಾನಕರ ಬಹುಮಾನ ಪಡೆದರು.

ವಾಕ್ ಮತ್ರು ಶ್ರವಣದೊಷ ಮಕ್ಕಳಿಗಾಗಿ 400 ಮೀ. ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ಅಕ್ಷತಾ ಗೊರಡ‌ ಪ್ರಥಮ, ಅನಸೂಯಾ ಚರಾಟೆ‌ ದ್ವಿತೀಯ, ಸಾವಿತ್ರಿ ಗರಸಂಗಿ ತೃತೀಯ ಹಾಗೂ ತೇಜಸ್ವಿನಿ ಕುಂಟೋಜಿ, ಸೃಷ್ಠಿ ಹಯ್ಯಾಳ ಸಮಾಧಾನಕರ ಬಹುಮಾನ ಪಡೆದರು. ಬಾಲಕರ ವಿಭಾಗದಲ್ಲಿ ಆದಿತ್ಯ ಹರಿಜನ‌ ಪ್ರಥಮ, ಮುತ್ತು ಎಮ್ಮಿ ದ್ವಿತೀಯ, ಹರೀಶ ಶೆತವಾಜ ತೃತೀಯ ಹಾಗೂ ವಿನೋದ ರಾಠೋಡ, ಸ್ವಯಂ ಅಂಬಿ ಸಮಾಧಾನಕರ ಬಹುಮಾನ ಪಡೆದರು. ಮಾಧ್ಯಮ ಪ್ರತಿನಿಧಿಗಳಿಗಾಗಿ 800 ಮೀ. ಹ್ಯಾಪಿ ರನ್‌ನಲ್ಲಿ ಹಣಮಂತ ಕಾರಕೂರ ಪ್ರಥಮ, ಸಿದ್ದಣ್ಣ ವಿಜಾಪುರ ದ್ವಿತೀಯ ಗುರು ಲೋಕುರಿ ತೃತೀಯ ಸ್ಥಾನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಗುರು ವೀರಘಂಟೆ ಮಡಿವಾಳೇಶ್ವರರ ಜಾತ್ರೋತ್ಸವ
ಕೃಷಿಕ ಪ್ರಶಸ್ತಿ, ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದು