ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಓಟ, ಅಂಬೇಡ್ಕರ್ ಚೌಕ್, ಗಾಂಧಿ ಚೌಕ್ ಮತ್ತು ಶಿವಾಜಿ ಚೌಕ್ ಮಾರ್ಗವಾಗಿ ಇಬ್ರಾಹಿಂ ರೋಜಾ ತಲುಪಿತು. ಅಲ್ಲಿ ಹೆರಿಟೇಜ್ ರನ್ ಪರ್ ಮತ್ತು ಹಸಿರು ವಿಜಯಪುರ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪರ ಘೋಷಣೆಗಳನ್ನು ಕೂಗಲಾಯಿತು.
ಈ ಓಟ ಇಬ್ರಾಹಿಂ ರೋಜಾದಿಂದ ಮರಳಿ ಕ್ರೀಡಾಂಗಣಕ್ಕೆ ಆಗಮಿಸಲಾಯಿತು.ಈ ವೇಳೆ ಮಾತನಾಡಿದ ಡಾ.ಮಹಾಂತೇಶ ಬಿರಾದಾರ, ಜಿಲ್ಲೆಯಲ್ಲಿ ಹೆರಿಟೇಜ್ ರನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 21 ಕಿ. ಮೀ ಓಟದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಓಟದಲ್ಲಿ ಸೈಕ್ಲಿಂಗ್ ಗ್ರುಪ್ ಸದಸ್ಯರು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಸೈಕ್ಲಿಂಗ್ ನಡೆಸಿದರೆ, ಇಂಡಿಯನ್ ಆರ್ಮಿ ಸಂಘಟನೆ, ಕಮಾಂಡೊ ಸಂಘಟನೆಯ ಓಟಗಾರರೂ ಪಾಲ್ಗೊಂಡರು.
ನೋಂದಣಿ:ಡಿ.22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜನ್ ರನ್-2024ಕ್ಕೆ ನೋಂದಣಿ ಭರದಿಂದ ಸಾಗಿದ್ದು, ನ.30 ನೋಂದಣಿ ಮಾಡಿಸಲು ಕೊನೆ ದಿನ. ಆಸಕ್ತ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಕೂಡಲೇ ನೋಂದಣಿ ಮಾಡಿಸಬೇಕು ಎಂದು ಕೋರ್ ಕಮಿಟಿಯ ಮುರುಗೇಶ ಪಟ್ಟಣಶೆಟ್ಟಿ ಮತ್ತು ಡಾ. ರಾಜು ಯಲಗೊಂಡ ತಿಳಿಸಿದರು.