ಜಾಗತಿಕ ಯುಗದಲ್ಲಿ ಯುವಜನತೆ ರಕ್ತದಾನದ ಮಹತ್ವದ ಮನವರಿಕೆ ಮಾಡಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಬೇರೆ ಜೀವವನ್ನು ಉಳಿಸುವ ಜತೆಗೆ ನಮ್ಮ ಆರೋಗ್ಯದಲ್ಲೂ ಸಾಕಷ್ಟು ಸುಧಾರಣೆಯಾಗುತ್ತದೆ.
ಹುಬ್ಬಳ್ಳಿ:
ಸಮಾಜ ಸೇವಕ, ಸ್ವರ್ಣ ಗ್ರೂಪ್ ಆಪ್ ಕಂಪನೀಸ್‌ನ ಮಾಲೀಕ ಡಾ. ಸಿಎಚ್ ವಿಎಸ್‌ವಿ ಪ್ರಸಾದ ಅವರ ಜನ್ಮದಿನದಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು.ನೈಋತ್ಯ ರೈಲ್ವೆ ಗುತ್ತಿಗೆದಾರರ ಅಸೋಸಿಯೇಷನ್, ಭಗತ್‌ಸಿಂಗ್ ಸೇವಾ ಸಂಘ ಹಾಗೂ ವಿಎಸ್‌ವಿ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಸ್ವರ್ಣ ಸಿಟಿ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ 90 ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ವಿಎಸ್‌ವಿ ಪ್ರಸಾದ ದಂಪತಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಸಾದ, ಜಾಗತಿಕ ಯುಗದಲ್ಲಿ ಯುವಜನತೆ ರಕ್ತದಾನದ ಮಹತ್ವದ ಮನವರಿಕೆ ಮಾಡಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಬೇರೆ ಜೀವವನ್ನು ಉಳಿಸುವ ಜತೆಗೆ ನಮ್ಮ ಆರೋಗ್ಯದಲ್ಲೂ ಸಾಕಷ್ಟು ಸುಧಾರಣೆಯಾಗುತ್ತದೆ. ಹೀಗಾಗಿ ರಕ್ತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕು. ಈ ನಿಟ್ಟಿನಲ್ಲಿ ಸಂಘಗಳು ಕೆಲಸ ಮಾಡಬೇಕು ಎಂದರು.
ಇದಕ್ಕೂ ಮುನ್ನ ಮಂಟೂರ ರಸ್ತೆಯ ಕನ್ಯಾನಗರದಲ್ಲಿರುವ ಬಾಲಾಜಿ ದೇವಸ್ಥಾನದ ಗೋಶಾಲೆಗೆ ಮೇವು ವಿತರಣೆ, ಶ್ರೀಸಿದ್ಧಾರೂಢ ಮಠದಲ್ಲಿ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ಬಳಿಕ ಅಭಿನವನಗರದ ವಿಶ್ವ ಹಿಂದೂ ಪರಿಷತ್ ಗೋಶಾಲೆಯಲ್ಲಿ ಗೋಪೂಜೆ ಮಾಡಿ ಗೋವುಗಳಿಗೆ ಪ್ರಸಾದ ಅವರು ಮೇವು ತಿನ್ನಿಸಿದರು.
ಈ ವೇಳೆ ಮುಖಂಡರಾದ ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಹುಟಗಿ, ಲಕ್ಷ್ಮೀಕಾಂತ ಘೋಡಕೆ, ಡಾ. ರವೀಂದ್ರ ವೈ, ರಾಜು ಕೊರ್ಯಾಣಮಠ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.