ಕನ್ನಡಪ್ರಭ ವಾರ್ತೆ ಹುನಗುಂದ
ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು, ಬಿಲ್‌ಕೆರೂರ-ಅಡವಿಹಾಳದ ಸಿದ್ಧಲಿಂಗ ಶಿವಾಚಾರ್ಯರು ಸ್ವಾಮಿಗಳು, ನಿರಂತರ ಅನ್ನದಾಸೋಹ ಹಾಗೂ ಕಲಾ ಘೋಷಕರ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು, ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮಿಗಳು, ಬಾಗಲಕೋಟೆ-ಚಿತ್ರದುರ್ಗ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಾಗಲಕೋಟೆ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಶ್ರೀಗಳು, ಇಳಕಲ್ಲ-ಹುನಗುಂದದ ಹಜರತ್ ಸೈಯದಷಾ ಮುರ್ತುಜಾ ಖಾದ್ರಿ ಹುಸೈನಿ ಉರ್ಫಪೈಸಲ್ ಪಾಶಾ, ಅಮೀನಗಡ ಮಾಣಿಕೇಶ್ವರಿಮಠದ ಮಾತೇ ಮಾಣಿಕೇಶ್ವರಿ ಅಮ್ಮನವರು ಸಾನ್ನಿಧ್ಯ ವಹಿಸುವರು.ವಿ.ವಿ.ಕೆ.ಫೌಂಡೇಶನ್ ಸಂಸ್ಥಾಪಕರು, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿಸುವರು. ಉದ್ಘಾಟಕರಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಹುನಗುಂದ ಮತಕ್ಷೇತ್ರ ಶಾಸಕ ವಿಜಯಾನಂದ ಎಸ್.ಕಾಶಪ್ಪನವರ, ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಾನಪದ ಕಲಾವಿದೆ ಗೌರಮ್ಮ ಸಂಕೀನಮಠ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ರಾಜ್ಯ ಗೌರವಾಧ್ಯಕ್ಷೆ ಹಾಗೂ ಬಿಗ್ ಬಾಸ್‌ನ 2ನೇ ರನ್ನರ್ ಆಫ್ ವಿಜೇತೆ ಅಶ್ವಿನಿಗೌಡ ಆಗಮಿಸುವರು.ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ, ಎಸ್.ಬಿ.ವಿಸ್ಟಮ್ ಕರಿಯರ್ ಅಕಾಡೆಮಿದ ಗೌರವಾಧ್ಯಕ್ಷ ಶರಣಯ್ಯ ಭಂಡಾರಿಮಠ, ಸಾವಯವ ಕೃಷಿ ತಜ್ಞೆ ಕವಿತಾ ಮಿಶ್ರಾ, ಜಿ ಕನ್ನಡ ಸರಿಗಮಪ 21ನೇ ಸಿಜನ್ ವಿಜೇತರಾದ ಕು.ಹನಮಂತ ಲಮಾಣಿ, ಬೆಂಗಳೂರಿನ ಡಾ.ವಿಮುಕ್ತಾ ಅವಿನಾಶ, ಅಂತಾರಾಷ್ಟ್ರೀಯ ಅಥ್ಲಿಟ್ ಕು.ಭಾರತಿ ಬಿ.ಎಲ್, ಜಿ ಕನ್ನಡ ಸರಿಗಮಪ 21ನೇ ಸಿಜನ್ ಗಾಯಕಿ ಕು.ಅನಗಾ ಪಾಟೀಲ, ಬಾಗಲಕೋಟೆಯ ಡಾ.ಪ್ರೀತಿ ಅಸ್ಮಿ, ಜಾನಪದ ಖ್ಯಾತ ಗಾಯಕರಾದ ಮಾಳು ನಿಪನಾಳ, ಬಿಗ್‌ಬಾಸ್ ವಿನ್ನರ್ ಪ್ರಥಮ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ವೀಣಾ ವಿ.ಕಾಶಪ್ಪನವರ ಫೌಂಡೇಶನ್‌ನ ಸಂಸ್ಥಾಪಕಿ ವೀಣಾ ವಿಜಯಾನಂದ ಕಾಶಪ್ಪನವರು ಪ್ರಕಟಣೆಯಲ್ಲಿ ಕೋರಿದ್ದಾರೆ.