ಹುಬ್ಬಳ್ಳಿ: ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳ ಸಮನ್ವಯಕ್ಕೆ ಮಹತ್ವದ ವೇದಿಕೆಯಾಗಿದ್ದ 11ನೇ ವಿಶ್ವ ಆಯುರ್ವೇದ ಸಮ್ಮೇಳನದ (ಡಬ್ಲ್ಯೂಎಸಿ) ಉಪ ಸಮ್ಮೇಳನವು ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಮುಖ್ಯ ಪೋಷಕರಾದ ಗೋವಿಂದ ಜೋಶಿ ಹಾಗೂ ಪೋಷಕ ಸಂಜೀವ್ ಜೋಶಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರು ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಎ.ಎಸ್. ಪ್ರಶಾಂತ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಿತು.
ಸಂಘಟನಾ ಅಧ್ಯಕ್ಷರಾಗಿ ಡಾ. ಜೆ.ಆರ್. ಜೋಶಿ, ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ಮಂಜುನಾಥ ನಾಯಕ್ ಮತ್ತು ಡಾ. ಮಹೇಶ್ ಸಾಲಿಮಠ ಕಾರ್ಯನಿರ್ವಹಿಸಿದರು. ವರ್ಚುವಲ್ ವೈಜ್ಞಾನಿಕ ಸಮಿತಿಯ ಡಾ. ಎಸ್.ಎ. ಪಾಟೀಲ್, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಡಾ. ಪ್ರಮೋದ್ ಕಟ್ಟಿ ಹಾಗೂ ಡಾ. ಪ್ರದೀಪ್ ಅಗ್ನಿಹೋತ್ರಿ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಗೋವಾದ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯ ಡೀನ್ ಡಾ. ಸುಜಾತಾ ಕದಂ ಪಾಟೀಲ್, ಡಾ. ಮಾಧವ್ ದಿಗ್ಗಾವಿ, ಡಾ. ಸುರಜ್ ಕುಬಿಹಾಳ, ಡಾ. ಮಮತಾ ಕೆ.ವಿ, ಡಾ. ಸುಹಾಸಕುಮಾರ್ ಶೆಟ್ಟಿ, ಡಾ. ಮಮತಾ ಭಾಗವತ್, ಡಾ. ಗೋವಿಂದ ಮಿರಜ್ ಹಾಗೂ ಮೈಸೂರಿನ ಆಯುಷ್ ಸಂಶೋಧನಾ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ. ಎಲ್.ಎನ್. ಶೆಣೈ ಅವರು ವಿವಿಧ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು.