ವಿಶ್ವ ಹೃದಯ ದಿನಕ್ಕಾಗಿ ಕೊಪ್ಪಳದಲ್ಲಿ ವಾಕಥಾನ್‌

KannadaprabhaNewsNetwork |  
Published : Oct 04, 2026, 02:15 AM IST
ಪೋಟೊ3.21ಕೊಪ್ಪಳ ನಗರದ ಕೆ.ಎಸ್. ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ನಗರದಲ್ಲಿ ವಾಕಥಾನ್-2026 ಆಯೋಜಿಸಲಾಯಿತು. ಸಾವಿರಾರು ಜನರು ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದರು. | Kannada Prabha

ಸಾರಾಂಶ

ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಸ್. ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಶನಿವಾರ ನಗರದಲ್ಲಿ ವಾಕಥಾನ್-2026 ಆಯೋಜಿಸಲಾಯಿತು. ಸಾವಿರಾರು ಜನರು ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದರು.

ಕೊಪ್ಪಳ: ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಸ್. ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಶನಿವಾರ ನಗರದಲ್ಲಿ ವಾಕಥಾನ್-2026 ಆಯೋಜಿಸಲಾಯಿತು. ಸಾವಿರಾರು ಜನರು ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದರು.

ಕಾರ್ಯಕ್ರಮಕ್ಕೂ ಮುನ್ನ ಹೃದಯಾಘಾತ ಹಾಗೂ ಹೃದಯ ಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಸಿಪಿಆರ್ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಕೆ.ಎಸ್. ಆಸ್ಪತ್ರೆಯ ಕನ್ಸಲ್ಟೆಂಟ್ ಅನಸ್ತೇಶಿಯಾಲಜಿಸ್ಟ್ ಡಾ. ರವಿಕುಮಾರ್ ಎಂ. ಅವರು ಸಿಪಿಆರ್ ನೀಡುವ ವಿಧಾನ ಹಾಗೂ ಅದರ ಮಹತ್ವವನ್ನು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ವಿವರಿಸಿದರು.

ಕೆ.ಎಸ್. ಆಸ್ಪತ್ರೆಯ ಮುಖ್ಯಸ್ಥ ಹಾಗೂ ಕೀಲು-ಮೂಳೆ ತಜ್ಞ ಡಾ. ಬಸವರಾಜ್ ಎಸ್. ಕ್ಯಾವಟರ್ ಮಾತನಾಡಿ, ಒತ್ತಡದ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿದಿನ ನಡೆಯುವುದು, ವ್ಯಾಯಾಮ, ಸಮತೋಲಿತ ಆಹಾರ ಹಾಗೂ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ನೀಡುವ ಸಿಪಿಆರ್ ಜೀವ ಉಳಿಸಬಹುದು. ಸಾಮಾನ್ಯ ಜನರೂ ಸಿಪಿಆರ್ ಬಗ್ಗೆ ಮೂಲಭೂತ ಅರಿವು ಹೊಂದಬೇಕು ಎಂದರು.

ಗಣ್ಯರು ಧ್ವಜ ಬೀಸುವ ಮೂಲಕ ವಾಕಥಾನ್‌ಗೆ ಚಾಲನೆ ನೀಡಿದರು. ಅಶೋಕ ಸರ್ಕಲ್‌ನಿಂದ ಆರಂಭವಾದ ನಡಿಗೆ ಮಾರ್ಕೆಟ್ ರಸ್ತೆ, ಗಡಿಯಾರ ಕಂಬ, ಸಿದ್ದೇಶ್ವರ ಸರ್ಕಲ್, ಸಾಲಾರ್ ಜಂಗ್ ರಸ್ತೆ, ಮುಂಡರಗಿ ಭೀಮರಾಯ ವೃತ್ತ ಹಾಗೂ ಗಂಜ್ ಸರ್ಕಲ್ ಮೂಲಕ ಕೆ.ಎಸ್. ಆಸ್ಪತ್ರೆ ತಲುಪಿತು.

ಹಿರಿಯರು, ಕಿರಿಯರು, ವಿದ್ಯಾರ್ಥಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಜಾಗೃತಿ ಫಲಕ ಮತ್ತು ಘೋಷಣೆಗಳೊಂದಿಗೆ ಪಾಲ್ಗೊಂಡರು. ಉತ್ತಮ ಫಲಕ, ಉತ್ತಮ ಘೋಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗೌರವ ನೀಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸಂಸ್ಥೆಗಳಿಗೂ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಈಶ್ವರ ಸವಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ. ರುದ್ರೇಶ್ ಮೆಳ್ಳಿಕೇರಿ, ಡಾ. ಧಾನರೆಡ್ಡಿ, ವೆಂಕಟೇಶ್ ರಾಥೋಡ್, ಮೌನೇಶ್ ಪತ್ತಾರ, ಮಂಜುಳಾ ವಿಶ್ವನಾಥ, ಶಿವಯ್ಯ ಬಿ. ಸ್ವಾಮಿ, ಉದಯ್ ಕುಲಕರ್ಣಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ: ಡಿಸಿ ಶ್ರೀಧರ್
ಪಂಚಪೀಠಗಳು ಜ್ಞಾನ, ಸಂಸ್ಕಾರ ನೀಡುವ ಕೇಂದ್ರ; ರಂಭಾಪುರಿ ಶ್ರೀ