ಬಿರುಸುನಡಿಗೆ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಅವಶ್ಯಕ ವ್ಯಾಯಾಮವಾಗಿದ್ದು, ಯಾವುದೇ ಖರ್ಚು ಇಲ್ಲದೆ ದೇಹದಲ್ಲಿ ಹೆಚ್ಚಾಗಿ ಶೇಖರಿಸಲ್ಪಟ್ಟ ಕೊಬ್ಬು ಅಥವಾ ಕ್ಯಾಲರಿಗಳನ್ನು ಕರಗಿಸುವ ಬಹಳ ಸುಲಭವಾದ ವ್ಯಾಯಾಮವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಎಲ್ಲ ವೈದ್ಯರುಗಳು ಹಾಗೂ ಜಿಮ್ ತರಬೇತುದಾರರು ಒಮ್ಮತದಿಂದ ಅಂಗೀಕರಿಸಿದ್ದಾರೆ. ಇತ್ತೀಚೆಗೆ ಯುವಜನರು ಮತ್ತು ಫಿಟ್‌ನೆಸ್‌ಪ್ರಿಯ ವ್ಯಕ್ತಿಗಳು ಈ ಸುಲಭದ ದಾರಿಗೆ ಒಲವು ತೋರುತ್ತಿದ್ದಾರೆ ಮತ್ತು ಇದೊಂದು ಜನಪ್ರಿಯ ದೈಹಿಕ ಗುರಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹತ್ತು ಸಾವಿರ ಹೆಜ್ಜೆ ಅಂದರೆ ಸುಮಾರು ೭.೫ಕಿ.ಮೀ ನಿಂದ ೮ ಕಿ.ಮೀಟರ್ (೫ ಮೈಲಿ)ಗಳ ದೂರಕ್ಕೆ ಸಮನಾಗಿರುತ್ತದೆ ಮತ್ತು ಇಷ್ಟು ದೂರ ಕ್ರಮಿಸಲು ಸರಿಸುಮಾರು ೯೦ ರಿಂದ ೧೦೦ ನಿಮಿಷಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಚುರುಕಾಗಿ ನಡೆದಲ್ಲಿ ಹತ್ತು ನಿಮಿಷಗಳಲ್ಲಿ ಸುಮಾರು ೧೦೦೦ ಹೆಜ್ಜೆಗಳನ್ನು ಕ್ರಮಿಸಬಹುದಾಗಿದೆ. ನಿರಂತರವಾಗಿ ಹತ್ತು ಸಾವಿರ ಹೆಜ್ಜೆಗಳನ್ನು ಒಂದೇ ಬಾರಿಗೆ ಮುಗಿಸಲು ಸಮಯದ ಅಭಾವ ಇರಬಹುದು ಮತ್ತು ಮಾಡಲು ಬೇಸರವಾದಲ್ಲಿ ಈ ಹತ್ತು ಸಾವಿರ ಹೆಜ್ಜೆಗಳನ್ನು ನಾಲಕ್ಕು ಭಾಗಗಳಾಗಿ ವಿಂಗಡಿಸಿ ಒಟ್ಟು ಹತ್ತು ಸಾವಿರ ಹೆಜ್ಜೆಗಳನ್ನು ಪೂರ್ತಿ ಮಾಡಬಹುದಾಗಿದೆ. ೧ ಬೆಳಿಗ್ಗೆ ಎದ್ದ ತಕ್ಷಣ ಪ್ರಾತಃವಿಧಿಗಳನ್ನು ತೀರಿಸಿದ ಬಳಿಕ ಒಳಾಂಗಣದಲ್ಲಿ ಅಥವಾ ರಸ್ತೆಯಲ್ಲಿ ೨೦ ನಿಮಿಷಗಳ ಕಾಲ ಬಿರುಸು ನಡಿಗೆ ಮಾಡಿದ್ದಲ್ಲಿ ಎರಡು ಸಾವಿರ ಹೆಜ್ಜೆ ಪೂರ್ತಿಯಾಗುತ್ತದೆ.
೩ ದೈನಂದಿನ ಕೆಲಸಗಳನ್ನು ಮಾಡುವಾಗ, ಫೋನಿನಲ್ಲಿ ಮಾತನಾಡುವಾಗ ಮತ್ತು ಕಚೇರಿ ಕೆಲಸ ಮಾಡುವಾಗ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನಡೆದಾಡಿದ್ದಲ್ಲಿ, ಮತ್ತೆ ಮೂರುಸಾವಿರ ಹೆಜ್ಜೆ ಮುಗಿಯುತ್ತದೆ.
೪ ರಾತ್ರಿ ಮಲಗುವ ಮೊದಲು ಕನಿಷ್ಟ ೨೦ ನಿಮಿಷಗಳ ಕಾಲ ನಡೆದಲ್ಲಿ ಮತ್ತೆ ಎರಡು ಸಾವಿರ ಹೆಜ್ಜೆ ಪೂರ್ತಿಯಾಗಿ ದಿನದ ಹತ್ತು ಸಾವಿರ ಹೆಜ್ಜೆಗಳ ಕೋಟಾ ಸುಲಭದಲ್ಲಿ ಮುಗಿಯುತ್ತದೆ.ಹತ್ತು ಲಾಭಗಳು ಏನು?:೧ ನಿರಂತರ ನಡಿಗೆಯಿಂದ ಹೃದಯದ ರಕ್ತನಾಳಗಳ ಆರೋಗ್ಯ ವೃದ್ಧಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿತಗೊಳಿಸುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.
೩ ನಮ್ಮ ದೇಹದ ಸ್ನಾಯುಗಳನ್ನು ಶಕ್ತಿಯುತಗೊಳಿಸಿ, ಸ್ನಾಯುಗಳ ಸಾಂದ್ರತೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
೫ ನಡಿಗೆಯಿಂದಾಗಿ ನಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹ ಸದಾಕಾಲ ಉಲ್ಲಸಿತವಾಗಿರುವಂತೆ ಮಾಡುತ್ತದೆ.
೭ ನಿರಂತರ ನಡಿಗೆಯಿಂದ ಖಿನ್ನತೆ ಇಲ್ಲದಾಗುತ್ತದೆ. ಆತಂಕವನ್ನು ದೂರಮಾಡಿ ದೇಹಕ್ಕೆ ಹೊಸ ಹುರುಪು ಮತ್ತು ಶಕ್ತಿಯನ್ನು ತುಂಬುತ್ತದೆ. ಧನಾತ್ಮಕ ಯೋಚನೆಗಳು ಮೂಡುವಂತೆ ಪ್ರಚೋದಿಸುತ್ತದೆ.
೯ ಪ್ರತಿದಿನ ನಡೆಯುವುದರಿಂದ ಇನ್ಸುಲಿನ್ ರಸದೂತಗಳ ಸಂವೇದನೆ ಸುಧಾರಿಸುತ್ತದೆ ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಟೈಪ್ ೨ ಮಧುಮೇಹ ತಡೆಯುವಲ್ಲಿ ನಿರಂತರ ನಡಿಗೆ ಅತೀ ಅವಶ್ಯಕ.
ಆರಂಭದಲ್ಲಿ ದಿನಕ್ಕೆ ೩೦೦೦ ನಂತರ ೪೦೦೦ ಹಾಗೇ ನಿಧಾನವಾಗಿ ಹೆಜ್ಜೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಬಳಸಿ ಯಾವುದಾದರೂ ಆ್ಯಪ್ ಬಳಸಿ ಹೆಜ್ಜೆಗಳ ಸಂಖ್ಯೆಗಳನ್ನು ದಾಖಲಿಸುವುದು ಉತ್ತಮ. ಒಂದೇ ಬಾರಿ ಹತ್ತು ಸಾವಿರ ಹೆಜ್ಜೆ ಹಾಕುವುದರ ಬದಲು ಎರಡು ಮೂರು ಭಾಗಗಳಲ್ಲಿ ಮಾಡಬಹುದು. ಹೆಜ್ಜೆ ಹಾಕುವುದನ್ನು ಆನಂದಿಸುತ್ತಾ, ಅನುಭವಿಸತ್ತಾ ಮಾಡುವುದು ಉತ್ತಮ. ನಡಿಗೆಯ ವೇಗ, ನಡಿಗೆಯ ಗಾತ್ರ ಮತ್ತು ನಡೆಯುವ ಜಾಗ, ವ್ಯಕ್ತಿಯ ತೂಕಕ್ಕೆ ಅನುಗುಣವಾಗಿ ಒಬ್ಬ ವ್ಯಕ್ತಿ ಹತ್ತು ಸಾವಿರ ಹೆಜ್ಜೆ ಹಾಕಿದ್ದಲ್ಲಿ, ೪೦೦ ರಿಂದ ೬೦೦ ಕ್ಯಾಲರಿ ಪ್ರತಿದಿನ ಕರಗಿಸಲು ಸಾಧ್ಯವಾಗಬಹುದು. ವಿಶ್ವಸಂಸ್ಥೆ ಒಬ್ಬ ವ್ಯಕ್ತಿಗೆ ವಾರದಲ್ಲಿ ೧೫೦ ರಿಂದ ೨೦೦ ನಿಮಿಷಗಳ ದೈಹಿಕ ವ್ಯಾಯಾಮ ಅತೀ ಅವಶ್ಯಕ ಎಂದು ವರದಿ ಮಾಡಿದೆ. ದಿನದಲ್ಲಿ ಹತ್ತು ಸಾವಿರ ಹೆಜ್ಜೆ ಹಾಕಿದ್ದಲ್ಲಿ ಈ ಮಾನದಂಡವನ್ನು ಸುಲಭವಾಗಿ ತಲುಪಬಹುದು ಮತ್ತು ನಾವು ನಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಂಡು ನೂರು ವರುಷ ಬದುಕಲು ಸಾಧ್ಯವಾಗಲೂಬಹುದು ಮತ್ತು ಅದರಲ್ಲಿಯೇ ನಮ್ಮ ಮತ್ತು ಸಮಾಜದ ಹಿತ ಅಡಗಿದೆ.
೯೮೪೫೧೩೫೭೮೭