ಚಳ್ಳಕೆರೆ: ಕರ್ನಾಟಕದಲ್ಲಿ ವಕ್ಫ್ ಆಡಳಿತ ಮಂಡಲಿ ಕಬಳಿಸಿರುವ ಭೂಮಿ, ಇನ್ನಿತರೆ ವಿಚಾರಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಲು ಪಕ್ಷದ ವತಿಯಿಂದ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ನಡೆಸಿ ಮಾಹಿತಿಯನ್ನು ರಾಜ್ಯ ಬಿಜೆಪಿ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್ ತಿಳಿಸಿದ್ದಾರೆ.
ಮಾದಿಗ ಮಹಾಸಭಾ ಹರ್ಷ ಚಳ್ಳಕೆರೆ ನಗರದ ಮಾದಿಗ ಸಮುದಾಯದ ಆಸ್ತಿಯನ್ನು ವಕ್ಪ್ ಮಂಡಳಿ ತಮಗೆ ವರ್ಗಾಯಿಸುವಂತೆ ಮನವಿ ನೀಡಿದ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ತಂಡ ಆಗಮಿಸುತ್ತಿರುವುದನ್ನು ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಎಂ. ಶಿವಮೂರ್ತಿ ಸ್ವಾಗತಿಸಿದ್ದಾರೆ. ಕಳೆದ ಸುಮಾರು 60 ವರ್ಷಗಳಿಂದ ಮಾದಿಗ ಸಮುದಾಯದ ಚರ್ಮ ಉದ್ಯಮದವರಿಗೆ ಈ ಜಾಗ ಮೀಸಲಿದ್ದರೂ, ಇಲ್ಲಿನ ಕೆಲವರು ಜಾಗದ ಪರಾಭಾರೆಗೆ ಯತ್ನಿಸಿದ್ದನ್ನು ಅವರು ಖಂಡಿಸಿದ್ದಾರೆ. ಬಿಜೆಪಿ ಸಂಶೋಧನಾ ತಂಡದ ಆಗಮನದಿಂದ ಸಮುದಾಯಕ್ಕೆ ನ್ಯಾಯಸಿಗಲಿದೆ ಎಂಬ ನಂಬಿಕೆ ನನ್ನದು ಎಂದಿದ್ದಾರೆ.