ವಕ್ಫ್ ಆಸ್ತಿ ವಿವಾದ: ಶಾಶ್ವತ ಪರಿಹಾರ ಕಂಡುಕೊಳ್ಳಿ

KannadaprabhaNewsNetwork |  
Published : Nov 07, 2024, 11:45 PM IST
ಶಾಶ್ವತವಾದ ಪರಿಹಾರ ಕಂಡುಕೊಳ್ಳಿ.-2 | Kannada Prabha

ಸಾರಾಂಶ

ವಕ್ಫ್ ಆಸ್ತಿಗೆ ಸಂಬಂಧಿಸಿದ ವಿಚಾರ ಸಂಕೀರ್ಣ ವಿಚಾರ. ರಾಜ್ಯ ಸರ್ಕಾರ, ಕಾನೂನು ತಜ್ಞರು,ವಿರೋಧ ಪಕ್ಷ, ರೈತಸಂಘಟನೆಗಳು ಚಚಿರ್ಸಿ ಇದಕ್ಕೆ ಶಾಶ್ವತ ಪರಿಹಾರ ಕೊಂಡುಕೊಳ್ಳಬೇಕಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಸವರಾಜಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪವಕ್ಫ್ ಆಸ್ತಿಗೆ ಸಂಬಂಧಿಸಿದ ವಿಚಾರ ಸಂಕೀರ್ಣ ವಿಚಾರ. ರಾಜ್ಯ ಸರ್ಕಾರ, ಕಾನೂನು ತಜ್ಞರು,ವಿರೋಧ ಪಕ್ಷ, ರೈತಸಂಘಟನೆಗಳು ಚಚಿರ್ಸಿ ಇದಕ್ಕೆ ಶಾಶ್ವತ ಪರಿಹಾರ ಕೊಂಡುಕೊಳ್ಳಬೇಕಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಸವರಾಜಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶಿರಾಳಕೊಪ್ಪ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿ, ವಕ್ಫ್ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿದ್ದು, ಇನ್ನೂ ಕೆಲವು ರಾಜಕೀಯ ಪಕ್ಷಗಳು ಸುದ್ದಿಗಾಗಿ ಚರ್ಚೆ ಮಾಡುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರಕ್ಕೆ ಅನುರ್ಜಿತ ಮಾಡಲು ಅಧಿಕಾರ ವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಕಾನೂನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಈ ವಿಚಾರದಲ್ಲಿ ಹಿಂದುಗಳ ಆಸ್ತಿ ಮಾತ್ರ ತೊಂದರೆಗೆ ಸಿಲುಕಿಲ್ಲ. ಮುಸ್ಲೀಮರ ಆಸ್ತಿಯೂ ಸಹ ಸೇರಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಖಾಸಗಿ ಆಸ್ತಿ 30 ವರ್ಷಗಳಿಗಿಂತ ಒಬ್ಬ ವ್ಯಕ್ತಿ ಬಳಿ ಸ್ವಾಧೀನದಲ್ಲಿದ್ದರೆ ಅವರದೇ ಆಸ್ತಿ ಎಂದು ಇದೆ. ಹಾಗೆಯೇ ಸರ್ಕಾರಿ ಆಸ್ತಿ 12ವರ್ಷಕ್ಕಿಂತ ಹೆಚ್ಚು ಕಾಲ ಸ್ವಾಧೀನದಲ್ಲಿದ್ದರೆ ಸ್ವಾಧೀನದಾರರದ್ದೇ ಆಸ್ತಿ ಎಂದಿದೆ ಎಂದು ತಿಳಿಸಿದೆ ಎಂದರು.ಈ ಆಸ್ತಿ ವಿಚಾರ ಕಳೆದ ಎರಡು ತಲೆಮಾರಿನಿಂದ ಇದ್ದು, ಎರಡು ಮೂರು ಬಾರಿ ಮಾರಟವಾಗಿವೆ. ಆದರೆ 2000 ಇಸವಿಯಿಂದ ಹೆಸರು ಬದಲಾವಣೆ ಆಗುತ್ತಿವೆ. ಈಗ ರೈತರಿಗೆ ನೋಟೀಸ್ ಕೊಟ್ಟ ನಂತರ ಹೆಸರು ವಕ್ಫ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬದಲಾವಣೆಯಲ್ಲಿ ಎಲ್ಲ ಪಕ್ಷಗಳ ಕೈವಾಡವೂ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಸವಿಮಾ ಕಂಪನಿಗಳ ಮೇಲೆ ಹಿಡಿತವಿರಬೇಕು ಎಂದ ಅವರು, ರೈತರಿಗೆ ಭಿಕ್ಷೆ ರೀತಿಯಲ್ಲಿ ಪರಿಹಾರಕೊಟ್ಟರೆ ಆಗುವುದಿಲ್ಲ. ಯಾವುದೋ ಕಾಲದ ಎಸ್ ಡಿ ಆರ್ ಎಪ್, ಎನ್ ಆರ್ ಎಪ್ ರೂಲ್ಸ್ ನಂತೆ ಕೊಡಬೇಡಿ. ಅದನ್ನು ಕೈಬಿಡಿ. ಕನಿಷ್ಟ ಎಕರೆಗೆ 20 ಸಾವಿರ ಪರಿಹಾರ ಕೊಡಿ ಎಂದರು.

ನವೆಂಬರ್ 24ರಂದು ನಮ್ಮ ರಾಜ್ಯ ರೈತಸಂಘದ ಆಶ್ರಯದಲ್ಲಿ ರಾಜ್ಯಾದ್ಯಂತ ವಕ್ಫ್ ಸೇರಿದಂತೆ ಇತರ ಸಮಸ್ಯೆ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ