ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಯುದ್ಧದಿಂದಾಗುವ ಸಾವು-ನೋವುಗಳು ಸೇಡಿಗೆ ತಿರುಗಿ ಮತ್ತೊಂದು ಯುದ್ಧಕ್ಕೆ ಕಾರಣವಾಗುತ್ತದೆ. ಯುದ್ಧವೆಂದರೆ ವಿನಾಶವೆಂದೇ ಅರ್ಥ. ಯುದ್ಧವನ್ನು ಕುರಿತು ಭಗವಾನ್ ಬುದ್ಧರು ಅಹಿಂಸೆಯ ಹೆಸರಲ್ಲಿ ಸೈನಿಕರು ರಾಜನಿಗೆ ಅಥವಾ ತಮ್ಮ ದೇಶಕ್ಕೆ ಸಲ್ಲಿಸಬೇಕಾದ ಕರ್ತವ್ಯದಿಂದ ತಪ್ಪಿಸಿಕೊಳ್ಳುವುದು ಅಹಿಂಸೆ ಪಾಲನೆಯಲ್ಲ ಎಂದು, ಸೈನಿಕರಿಗೆ ದೀಕ್ಷೆ ಕೊಡುವುದನ್ನು ತಡೆದರು. ಯಾರು ಶಿಕ್ಷೆಗೆ ಅರ್ಹರೋ ಅವರಿಗೆ ಶಿಕ್ಷೆಯಾಗಬೇಕು. ಸಹಾಯದ ಅವಶ್ಯಕತೆಯಿರುವವರಿಗೆ ಸಹಾಯವಾಗಬೇಕು. ಆದರೆ ಯಾವುದೇ ಜೀವಿಗಳಿಗೆ ತೊಂದರೆಯಾಗಬಾರದೆನ್ನು ವುದು ಅವರ ನಿಲುವಾಗಿತ್ತು. ಇದು ವಿರೋಧ ಭಾಸವಲ್ಲ-ತಪ್ಪಿನ ಸಲುವಾಗಿ ಹಿಂಸೆ ಅನುಭವಿಸುವುದು ಹಿಂಸೆಯಲ್ಲ. ಕೆಡುಕಿನಿಂದಾಗಿ ಒಳ್ಳೆಯದು ಪೂರ್ಣವಾಗಿ ಹಾಳಾಗದಂತೆ ಕಾಪಾಡಲು ಹಿಂಸೆ ಅಂತಿಮ ದಾರಿಯಾಗಿರ ಬೇಕೆಂಬುದು ಭಗವಾನರ ಆಶಯವಾಗಿತ್ತು.ಪ್ರಜಾ ಕಲ್ಯಾಣ ಬಯಸುವ ಪ್ರಪಂಚದ ರಾಷ್ಟ್ರಗಳ ಮುಂಚೂಣಿ ನಾಯಕರುಗಳಿಗೆ ಸಾಮ್ರಾಟ್ ಅಶೋಕ್ ಮಾದರಿಯಾಗ ಬೇಕಾದದ್ದು, ಇಂದಿನ ಅನಿವಾರ್ಯತೆವಾಗಿದೆ ಎಂದರು.