ಯುದ್ಧವೇ ಪರಿಹಾರವಲ್ಲ: ಎಸ್. ನಂಜಯ್ಯನಮಠ

KannadaprabhaNewsNetwork | Published : May 20, 2025 1:46 AM
Follow Us

ಸಾರಾಂಶ

ಯುದ್ಧ ಎಂಬ ಶಬ್ಧ ಅಪಾಯಕಾರಿಯಾಗಿದ್ದು, ಎರಡೂ ದೇಶಗಳ ಅಭಿವೃದ್ಧಿಗೆ ಮಾರಕವಾಗಿದೆ. ನೆರೆಯ ರಾಷ್ಟ್ರ ಪಾಕಿಸ್ತಾನ ಇದನ್ನು ಅರ್ಥೈಸಿಕೊಂಡು ಜನರ ಹಿತ ಬಯಸಿ ರಾಜಕಾರಣ ಮಾಡಬೇಕು ಎಂದು ಕಾಂಗ್ರೆಸ್ ಕಮಿಟಿ ಜಿಲ್ಲಾಧ್ಯಕ್ಷ ಎಸ್. ನಂಜಯ್ಯನಮಠ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಯುದ್ಧ ಎಂಬ ಶಬ್ಧ ಅಪಾಯಕಾರಿಯಾಗಿದ್ದು, ಎರಡೂ ದೇಶಗಳ ಅಭಿವೃದ್ಧಿಗೆ ಮಾರಕವಾಗಿದೆ. ನೆರೆಯ ರಾಷ್ಟ್ರ ಪಾಕಿಸ್ತಾನ ಇದನ್ನು ಅರ್ಥೈಸಿಕೊಂಡು ಜನರ ಹಿತ ಬಯಸಿ ರಾಜಕಾರಣ ಮಾಡಬೇಕು ಎಂದು ಕಾಂಗ್ರೆಸ್ ಕಮಿಟಿ ಜಿಲ್ಲಾಧ್ಯಕ್ಷ ಎಸ್. ನಂಜಯ್ಯನಮಠ ಸಲಹೆ ನೀಡಿದರು.

ಭಾನುವಾರ ಜಿಎಲ್ಬಿಸಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದೆಂದಿಗೂ ಶಾಂತಿ ಬಯಸಿ ಬದುಕು ಸಾಗಿಸುವ ದೇಶ ನಮ್ಮದು. ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ, ಏನೇ ಇದ್ದರೂ ಮಾತುಕತೆಗಳ ಮೂಲಕ ತಾರ್ಕಿಕ ಅಂತ್ಯ ಕಾಣಬೇಕು. ಇದಕ್ಕೆ ನಮ್ಮ ದೇಶದ ಪ್ರಧಾನಿಗಳು ಮಾನವೀಯ ನೆಲೆಯಲ್ಲಿ ಸಮ್ಮತಿಸಿದ್ದಾರೆ. ಇಷ್ಟಾಗಿಯೂ ಪಾಕಿಸ್ತಾನ ಕದನ ವಿರಾಮ ಧಿಕ್ಕರಿಸಿ ಮತ್ತೆ ಮತ್ತೆ ಸೆಲ್ ದಾಳಿ ಮಾಡುವ ಮೂಲಕ ದೇಶದ ಭದ್ರತೆಗೆ ಸವಾಲು ಹಾಕುತ್ತಿದೆ.

ಇಷ್ಟಕ್ಕೆ ಇದು ಸೀಮಿತಗೊಳ್ಳದೆ ಹೋದರೆ ನಮ್ಮ ದೇಶವೂ ಕೂಡ ೧೯೭೧ರಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಆದೇಶದಂತೆ ಭಾರತೀಯ ಸೇನೆ ಲಾಹೋರ್‌ ಪ್ರತೀಕಾರ ತೀರಿಸಿಕೊಂಡಿತೋ, ಹಾಗೆಯೇ ಮತ್ತೊಮ್ಮೆ ಅವರಿಗೆ ಕೇಂದ್ರ ಪಾಠ ಕಲಿಸಬೇಕು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ.

ಈ ವಿಷಯಕ್ಕೆ ನಮ್ಮ ಕೇಂದ್ರೀಯ ಎ.ಐ.ಸಿ.ಸಿ ಮತ್ತು ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಇದಕ್ಕೆ ರಾಜ್ಯ ಸಂಪುಟವೂ ಸಮ್ಮತಿ ಸೂಚಿಸಿದೆ. ಕೇಂದ್ರ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಮತ್ತು ಆಮದು, ರಪ್ತು ಸ್ತಗಿತದ ನಿರ್ಧಾರ ಕಾರಣದಿಂದ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕ್ಕೊಳ್ಳನವೆಂಬ ವಾದಕ್ಕೆ ಪಾಕಿಸ್ತಾನ ಬಂದಿದೆ. ಇದು ಸಹ ನಮ್ಮ ದೇಶದ ಜಯ.

ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ನಮ್ಮ ದೇಶದ ಷರತ್ತುಗಳಿಗೆ ಮನ್ನಣೆ ಸಿಕ್ಕರೆ ಮಾತ್ರ ಯುದ್ಧಕ್ಕೆ ತಿಲಾಂಜಲಿ. ಇಲ್ಲವಾದರೆ ಅವರಿಗೆ ತಕ್ಕ ಪಾಠ ಕಲಿಸಲು ದೇಶ ಸನ್ನದ್ಧವಾಗಬೇಕು. ಈ ಸಮಯ ನಾವು ರಾಜಕಾರಣ ಮಾಡದೆ ಸೇನೆಗೆ ಬಲ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರಕಾಶ ಉತ್ತೂರು, ತೇರದಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಪಾದ ಗುಂಡಾ ಮುಖಂಡರಾದ ಪ್ರಕಾಶ ಮಮದಾಪೂರ, ಆನಂದ ಹಟ್ಟಿ, ವಿಠ್ಠಲ ಹೊಸಮನಿ ಇದ್ದರು.