ಆನೆಗಳನ್ನು ಸ್ಥಳಾಂತರಿಸಿದರೆ ಉಗ್ರ ಹೋರಾಟ: ಎಚ್ಚರಿಕೆ

KannadaprabhaNewsNetwork |  
Published : Nov 24, 2026, 12:15 AM IST
ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ವಿರೋಧಿಸಿ. ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ವಿರೋದಿಸಿಬೃಹತ್ ಪ್ರತಿಭಟನೆ | Kannada Prabha

ಸಾರಾಂಶ

ತರೀಕೆರೆಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ಜಾರಿಗೊಳಿಸುವ ಹುನ್ನಾರವನ್ನು ಸರ್ಕಾರಿ ತಕ್ಷಣ ಕೈಬಿಡಬೇಕು. ಭದ್ರಾ ಅಭಯಾರಣ್ಯಕ್ಕೆ ಪುಂಡಾನೆಗಳನ್ನು ಸ್ಥಳಾಂತರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಡಿ.ಎಸ್. ಸುರೇಶ್ ಎಚ್ಚರಿಸಿದ್ದಾರೆ.

ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತರೀಕೆರೆ

ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ಜಾರಿಗೊಳಿಸುವ ಹುನ್ನಾರವನ್ನು ಸರ್ಕಾರಿ ತಕ್ಷಣ ಕೈಬಿಡಬೇಕು. ಭದ್ರಾ ಅಭಯಾರಣ್ಯಕ್ಕೆ ಪುಂಡಾನೆಗಳನ್ನು ಸ್ಥಳಾಂತರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಡಿ.ಎಸ್. ಸುರೇಶ್ ಎಚ್ಚರಿಸಿದ್ದಾರೆ.

ಸೋಮವಾರ ಬಿಜೆಪಿ ಮಂಡಲ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮತ್ತು ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆಯನ್ನು ಜಾರಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ನಡೆದ ರಸ್ತೆ ತಡೆ, ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ ಆನೆಗಳು ಕಾಡಿನಿಂದ ಹೊರಬರದಂತೆ ತಡೆಗಟ್ಟುವಲ್ಲಿ ಇಲಾಖೆ ವಿಫಲವಾಗಿದೆ. ಆನೆಗಳ ತಡೆಗೆ ಇಪಿಟಿಗಳನ್ನು ರೈಲ್ವೆ ಬ್ರಾರಿಕೇಡ್ ಗಳನ್ನು ಮಾಡಿಸಿಲ್ಲ, ತಾಲೂಕಿನಲ್ಲಿ ಈಗಾಗಲೇ ತೀವ್ರ ಬರಗಾಲ ಇದೆ, ಅರಣ್ಯ ದಿಂದ ಆನೆಗಳು ತಾಲೂಕಿನ ರೈತರ ತೋಟ ಜಮೀನು ಹೊಲಗದ್ದಗಳಿಗೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ, ಈ ನಡುವೆ ಬೇರೆಡೆಯಿಂದ ತಾಲೂಕಿಗೆ ಹಾಗೂ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಬಿಡುವ ಕಾರ್ಯ ಎಷ್ಟು ಸರಿ ಎಂದರು.

ಯಾವುದೇ ಕಾರಣಕ್ಕೂ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ಜಾರಿಗೆ ನಾವು ಬಿಡಲ್ಲ. ಸರ್ಕಾರ ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇದೇ 30 ರಂದು ನಡೆಯಲಿರುವ ಮುಖ್ಯಮಂತ್ರಿ, ಅರಣ್ಯ ಸಚಿವರ ಸಭೆಯಲ್ಲಿ ಜಿಲ್ಲೆಗೆ ಸಮಸ್ಯೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ. ಈ ಕುರಿತು ತಾಲೂಕಿನ ಸಮಗ್ರ ರೈತರೊಡಗೂಡಿ ಉಗ್ರ ಹೋರಾಟ ಅನಿವಾರ್ಯ ಎಂದರು.

ತಾಲೂಕಿನಲ್ಲೇ ಇರುವ 600 ಆನೆಗಳು ಜಮೀನಿಗೆ ನುಗ್ಗಿ ರೈತರ ಬೆಳೆ ನಾಶ ಪಡಿಸುತ್ತಿವೆ. ಆನೆ ಬಾರದಂತೆ ಕಂದಕಗಳನ್ನು ಮಾಡಿಲ್ಲ ಎಂದು ಗ್ರಾಮಸ್ತರು ದೂರಿದರು.

ಮ್ಯಾಮ್ ಕೋಸ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ ತರೀಕೆರೆಯ ತ್ಯಾಗದಬಾಗಿ ಅರಣ್ಯ ಪ್ರದೇಶದಲ್ಲಿ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಯೋಜನೆ ಸ್ಥಾಪಿಸುವುದಾಗಿ ಅರಣ್ಯ ಸಚಿವರು ತಿಳಿಸಿದ್ದು, ತಾಲೂಕಿನ ಶಾಸಕರು ವಿರೋದಿಸಿಲ್ಲ.ಇದನ್ನು ಶಾಸಕರು ಖಂಡಿಸಬೇಕಿತ್ತು ಎಂದರು.

ಭಾರತೀಯ ಜನತಾ ಪಾರ್ಟಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಮುಖಂಡರಾದ ಬಸವರಕಾಜ್, ಟಿ.ಎಂ.ಬೋಜರಾಜ್, ಗುಳ್ಳದ ಮನೆ ವಸಂತಕುಮಾರ್, ರೇಣುಕಪ್ಪ, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ರಶ್ಮಿ ಎಚ್.ಜೆ. ಎಸಿಎಫ್ ಸಂತೋಷ್ ಸಾಗರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

-

23ಕೆಟಿಆರ್.ಕೆ.1ಃ ತರೀಕರೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೃಜನತ್ಮಕ ಸಾಧ್ಯತೆಗಳ ಗುರುತಿಸಿ ಮುನ್ನಡೆಯಿರಿ
ಖಂಡೇರಾಯನಪಲ್ಲಿಯಲ್ಲಿ ವಿದ್ಯುತ್‌ ಉಪಕೇಂದ್ರ ಉದ್ಘಾಟನೆ