ಯೋಧರು, ರೈತರು ಎರಡು ಕಣ್ಣುಗಳು ಇದ್ದ ಹಾಗೆ: ಚೆನ್ನಕೇಶವ

KannadaprabhaNewsNetwork |  
Published : Jan 19, 2024, 01:47 AM IST
67 | Kannada Prabha

ಸಾರಾಂಶ

ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ನಮ್ಮೆಲ್ಲರನ್ನು ಸುರಕ್ಷಿತವಾಗಿ ರಕ್ಷಿಸುವ ಯೋಧರು ಹಾಗೂ ದೇಶದ ಬೆನ್ನೆಲುಬು ನಮಗೆಲ್ಲ ಅನ್ನವನ್ನು ನೀಡುವ ರೈತರು ಎರಡು ಕಣ್ಣುಗಳು ಇದ್ದ ಹಾಗೆ. ದೇಶಕ್ಕಾಗಿ ಅಭಿಮಾನ ಗೌರವದ ಜೊತೆಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಮಕ್ಕಳು ಜಾಗೃತವಾಗಬೇಕು. ಮಕ್ಕಳು ಶಿಕ್ಷಕರಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ನಮ್ಮೆಲ್ಲರನ್ನು ಸುರಕ್ಷಿತವಾಗಿ ರಕ್ಷಿಸುವ ಯೋಧರು ಹಾಗೂ ದೇಶದ ಬೆನ್ನೆಲುಬು ನಮಗೆಲ್ಲ ಅನ್ನವನ್ನು ನೀಡುವ ರೈತರು ಎರಡು ಕಣ್ಣುಗಳು ಇದ್ದ ಹಾಗೆ ಎಂದು ರೈತ ಯೋಧ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚೆನ್ನಕೇಶವ ಹೇಳಿದರು.

ಚನ್ನಂಗೆರೆ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಧ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಅಭಿಮಾನ ಗೌರವದ ಜೊತೆಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಮಕ್ಕಳು ಜಾಗೃತವಾಗಬೇಕು. ಮಕ್ಕಳು ಶಿಕ್ಷಕರಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕು ಎಂದರು.

ಅಖಿಲ ಕರ್ನಾಟಕ ವೀರನಾರಿಯ ರಾಜ್ಯಾಧ್ಯಕ್ಷೆ ರಜನಿ ಸುಬ್ಬಯ್ಯ ಮಾತನಾಡಿ, ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀನಿ, ಆದರೆ ಇಂದು ಚನ್ನಂಗೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವು ತುಂಬಾ ಶ್ಲಾಘನೀಯವಾಗಿದೆ ಎಂದರು.

ಮಾಜಿ ಯೋಧರಾದ ಸಿಂಹ ಶಿವುಗೌಡ ಮಾತನಾಡಿ, ತಮ್ಮ ಜೀವನದ ಏಳು ಬೀಳು ಏನೇ ಆದರೂ ಶಿಕ್ಷಣದಿಂದ ನನಗೆ ಎಲ್ಲವೂ ಸಿಗುವಂತೆ ಆಗಿದೆ. ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕು ಎಂದರು.

ಸರ್ಕಾರಿ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯಿತು. ನಿವೃತ್ತ ಯೋಧರನ್ನು ಗೌರವಿಸಲಾಯಿತು. ಮುಖ್ಯಅತಿಥಿಗಳಾಗಿ ಸುಭಾಷ್, ಸತೀಶ್, ವೀರ ನಾರಿಯರ ರಾಜ್ಯಾಧ್ಯಕ್ಷೆ ಚೈತ್ರ ಸುಬ್ಬಯ್ಯ, ವೀರ ನಾರಿಯರ ಘಟಕದ ಕಾರ್ಯದರ್ಶಿ ರೋಪಾವತಿ, ದಯಾನಂದ್, ವಿಜಯ, ರಮೇಶ್, ಲಕ್ಷ್ಮಿ ಪಾಟೀಲ್, ಕೋಮಲ, ಬಸವರಾಜಪ್ಪ, ಶಿವನಂಜಪ್ಪ, ರಂಗಪ್ಪ, ಮುಖ್ಯಶಿಕ್ಷಕ ಶಂಕರ್ ನಾಯಕ್, ಎಚ್.ಪಿ.ಎಸ್ ಸುಭಾಷ್, ರೈತ ಯೋಧ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕುಮಾರ್ ನಾಯಕ್, ಕಾರ್ಯದರ್ಶಿ ಸಿ.ಆರ್‌. ಜಗದೀಶ್, ಪ್ರಕಾಶ್, ಎ.ಟಿ. ಮಂಜು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ