ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ?

KannadaprabhaNewsNetwork |  
Published : Mar 05, 2024, 01:35 AM IST
4ಕೆಆರ್ ಎಂಎನ್ 8.ಜೆಪಿಜಿಇಂಡೋನೇಷ್ಯಾ ಸಾರ್ವಜನಿಕ ಸ್ಥಳಗಳಲ್ಲಿರುವ ವಾಷಿಂಗ್ ಮಷೀನ್  | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಬಟ್ಟೆಗಳನ್ನು ತೊಳೆಯಲು ನದಿ ದಡ ಅಥವಾ ಕೆರೆಗಳ ಬಳಿ ಹೋಗುತ್ತಾರೆ. ಮಕ್ಕಳು ಕೂಡ ತೆರಳುತ್ತಾರೆ. ಹಲವೆಡೆ, ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆಗಳೂ ನಡೆದಿವೆ. ಹೀಗಾಗಿ ಮಹಿಳೆಯರ ಅನುಕೂಲಕ್ಕಾಗಿ ಶಾಸಕ ಇಕ್ಬಾಲ್ ಹುಸೇನ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ಮಹಿಳೆಯರು ಇನ್ನು ಮುಂದೆ ಬಟ್ಟೆ ತೊಳೆಯಲು ನದಿ, ಕೆರೆ ಪಕ್ಕ ಹೋಗುವ ಅವಶ್ಯಕತೆ ಇಲ್ಲ. ಚೀನಾ, ಇಂಡೋನೇಷ್ಯಾ ದೇಶಗಳ ಮಾದರಿಯಲ್ಲಿ ರಾಮನಗರದ ಮಹಿಳೆಯರಿಗೆ ಬಟ್ಟೆ ತೊಳೆಯಲು ಸಾರ್ವಜನಿಕ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಯೋಜನೆ ರೂಪಿಸಲಾಗಿದೆ.

ಈ ಬಗ್ಗೆ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ಘೋಷಣೆ ಮಾಡಿದ್ದು, ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ಅಳವಡಿಸಲು ಜಾಗ ಗುರುತಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಬಟ್ಟೆಗಳನ್ನು ತೊಳೆಯಲು ನದಿ ದಡ ಅಥವಾ ಕೆರೆಗಳ ಬಳಿ ಹೋಗುತ್ತಾರೆ. ಮಕ್ಕಳು ಕೂಡ ತೆರಳುತ್ತಾರೆ. ಹಲವೆಡೆ, ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆಗಳೂ ನಡೆದಿವೆ. ಹೀಗಾಗಿ ಮಹಿಳೆಯರ ಅನುಕೂಲಕ್ಕಾಗಿ ಶಾಸಕ ಇಕ್ಬಾಲ್ ಹುಸೇನ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ.

ಇಂತಹ ವ್ಯವಸ್ಥೆ ಚೈನಾ, ಇಂಡೋನೇಷ್ಯಾದಂತಹ ದೇಶಗಳಲ್ಲಿ ಜಾರಿಯಲ್ಲಿವೆ. ಇದೇ ವ್ಯವಸ್ಥೆಯನ್ನು ರಾಮನಗರದಲ್ಲಿ ಅಳವಡಿಸಲು ಚಿಂತಿಸಿರುವ ಶಾಸಕರು, ಐಜೂರು ಸರ್ಕಲ್ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಗುರುತಿಸಿದ್ದಾರೆ. ಪ್ರಾರಂಭಿಕವಾಗಿ 10 ವಾಷಿಂಗ್ ಮಷೀನ್ ಅಳವಡಿಕೆಗೆ ಮುಂದಾಗಿದ್ದಾರೆ. ಸಂಸದ ಡಿಕೆ ಸುರೇಶ್ ‌ಕೂಡ ಯೋಜನೆ ಅನುಷ್ಠಾನದಲ್ಲಿ ಕೈ ಜೋಡಿಸಿದ್ದಾರೆ.

ಕೆಲವೇ ದಿನಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲಾಗುತ್ತಿದೆ. ಶಾಸಕರ ಅನುದಾನ ಸಿಗದಿದ್ದರೂ ತಮ್ಮ ಜೇಬಿನಿಂದ ಅನುಷ್ಠಾನ ಮಾಡಿಸುತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಒಂದು ಮಷೀನ್​ಗೆ 35 ಲಕ್ಷ ರುಪಾಯಿ ಇದ್ದು, ಒಟ್ಟು 10 ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆಗೆ ಅಂದಾಜಿ 2 ಕೋಟಿ ರೂಪಾಯಿ ತಗಲುವ ಸಾಧ್ಯತೆ ಇದೆ. ಚೀನಾ ಮತ್ತು ಇಂಡೋನೇಷ್ಯಾದಲ್ಲಿ ಮಷೀನ್ ಗಳಲ್ಲಿ ಬಟ್ಟೆ ತೊಳೆದುಕೊಳ್ಳುವವರು ಇಂತಿಷ್ಟ ಹಣವನ್ನು ಪಾವತಿಸಬೇಕಾಗುತ್ತದೆ. ಅದೇ ರೀತಿ ಇಲ್ಲಿಯೂ ದರ ನಿಗದಿ ಮಾಡುತ್ತಾರೆ.

ವಾಷಿಂಗ್ ಮಷೀನ್ ಕೇಂದ್ರ ಉದ್ಘಾಟನೆ:

ಪ್ರಾರಂಭಿಕವಾಗಿ 10 ಸಾರ್ವಜನಿಕ ವಾಷಿಂಗ್ ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಲೋಕಸಭಾ ಚುನಾವಣೆ ಬಳಿಕ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ವಾಷಿಂಗ್ ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಚುನಾವಣೆ ಸಮೀಪದಲ್ಲಿರುವುದರಿಂದ ಈ ಯೋಜನೆಗೆ ಯಾವುದೇ ಹೆಸರನ್ನು ಇಟ್ಟಿಲ್ಲ. ಚುನಾವಣೆ ನಂತರ ಯೋಜನೆಗೆ ಹೆಸರು ಇಡಲು ನಿರ್ಧರಿಸಲಾಗಿದೆ.

ಮಕ್ಕಳಿಗೆ ಕಾರ್ಟೂನ್ ನೋಡಲು ಡಿಸ್ಪ್ಲೇ ವ್ಯವಸ್ಥೆ

ಸಾಮಾನ್ಯವಾಗಿ ತಾಯಂದಿರುವ ಬಟ್ಟೆ ತೊಳೆಯಲು ಹೋದಾಗ ಸಣ್ಣ ಮಕ್ಕಳು ಕೂಡ ಹೊರಡುತ್ತಾರೆ. ಹೀಗೆ ವಾಷಿಂಗ್ ಮಷೀನ್ ಕೇಂದ್ರಗಳಿಗೆ ತಾಯಂದಿರ ಜೊತೆ ಬರುವ ಮಕ್ಕಳಿಗೆ ಮನರಂಜನೆ ನೀಡಲು ಕಾರ್ಟೂನ್ ನೋಡಲು ಡಿಸ್ಪ್ಲೇ ಅಳವಡಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ವಾಷಿಂಗ್ ಮಷೀನ್ ಪಕ್ಕದಲ್ಲೇ 10/10 ಡಿಸ್ಪ್ಲೇ ಹಾಕಲಾಗುತ್ತದೆ.

‘ರಾಮನಗರದ ಎರಡು ವಾರ್ಡುಗಳಲ್ಲಿ ಬಟ್ಟೆ ಒಗೆಯುವ 10 ವಾಷಿಂಗ್ ಮಷೀನ್ ಕೇಂದ್ರಗಳ ನಿರ್ಮಾಣಕ್ಕೆ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ವಿನೂತನ ಯೋಜನೆ ಸಾಕಾರವಾಗಲಿದೆ.’

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಹಿತ್ ವೇಮುಲ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ನಿಮ್ಮ ಬ್ಯಾಂಕ್‌ ಖಾತೆ ವಿವರ ಕೊಟ್ಟೀರಾ ಜೋಕೆ!