ತಾಂಬಾ: ಗ್ರಾಮದ ಜನರಿಗೆ ಅಭಿವೃದ್ಧಿ ಜೊತೆಗೆ ದೇವಸ್ಥಾನ ಮಶೀದಿ ಮಂದಿರಗಳಿಗೆ ಅನುದಾನ ನೀಡಲಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಿರಂತರವಾಗಿ ಕೆಲಸ ಮಾಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು. ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಯೋಜನೆ ಅಡಿಯಲ್ಲಿ ಶಿರಾಡೋಣ -ಲಿಂಗಸೂರ ರಸ್ತೆ ಸುಧಾರಣೆಯ ₹163 ಲಕ್ಷ ಮೊತ್ತದ 1.40 ಕಿ.ಮೀ ಕಾಮಗಾರಿಗೆ ಭೂಮಿ ಪೂಜೆ ನೇರವರಿಸಿ ಮಾತನಾಡಿದರು, ನಿಮ್ಮೆಲ್ಲರ ಆಶಿರ್ವಾದದೊಂದಿಗೆ ಶಾಸಕನಾಗಿದ್ದೇನೆ. ತಾಂಬಾ ಗ್ರಾಮ ಅಂದರೆ ನಮ್ಮ ತಂದೆಯವರಿಗೆ ಅಚ್ಚುಮೆಚ್ಚಿನ ಗ್ರಾಮ. ಅದೇ ತರ ನಾನು ರಾಜಕೀಯ ಜೀವನದಲ್ಲಿ ಮುಂದುವರಿಸಿಕೊಂಡು ಹೊಗುತ್ತೇನೆ ಎಂದರು. ಇವತ್ತು ನಾನು ಚುನಾವಣೆಯಲ್ಲಿ ಗೆದ್ದು ಒಂಬತ್ತು ತಿಂಗಳು ಅಗಿವೆ. ಈ ಕಾಲವಧಿಯಲ್ಲಿ ತಾಂಬಾ ಗ್ರಾಮಕ್ಕೆ ವಿಶಿಷ್ಟ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ರೈತರು ಈ ಭಾಗದ 480 ದಿನಗಳ ಕಾಲ ನಿರಂತರವಾಗಿ ಗುತ್ತಿಬಸವಣ್ಣ ಏತನೀರಾವರಿಗೆ ಹೋರಾಟದ ಫಲವಾಗಿ ನೀರಾವರಿ ಸಚಿವರು 145 ಕಿ.ಮೀ ಸ್ಕಾಡ್ ಗೇಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಎಲ್ಲ ಅನುಮೋದನೆಯಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಜೆ.ಎಸ್.ಹತ್ತಳ್ಳಿ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ನಾಗಪ್ಪ ಕುರಬುತಳ್ಳಿ, ಸಿದ್ದು ಹತ್ತಳ್ಳಿ, ಪರಸು ಬಿಸನಾಳ, ಮಾಶೀಮ ವಾಲಿಕಾರ, ಎಗಪ್ಪ ಹೊರಪೇಟಿ, ರವಿ ನಡುಗಡ್ಡಿ, ಮಹಮ್ಮದ ದಡೇದ, ಮಲ್ಲನಗೌಡ ಬಿರಾದಾರ, ಕಾಂತನಗೌಡ ಪಾಟೀಲ ಬಸವರಾಜ ಅವಟಿ, ಶಾಂತಪ್ಪ ಹಂಚಿನಾಳ, ಶಿವಪುತ್ರ ಗಂಗನಳ್ಳಿ, ದಯಾನಂದ ಮಠ, ಗುತ್ತಿಗೆದಾರ ಲಕ್ಷ್ಮಣ ಮಡಗೊಂಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.೪ತಾಂಬಾ೧ಪೋಟೊ ಪೈಲ್: ತಾಂಬಾ ಗ್ರಾಮದ ೨೦೨೩-೨೪ನೇ ಸಾಲಿನ ೫೦೫೪-ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಯೋಜನೆ ಅಡಿಯಲ್ಲಿ ಶಿರಾಡೋಣ -ಲಿಂಗಸೂರ ರಸ್ತೆಯ ಭೂಮಿ ಪೂಜೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ನೇರವೆರಿಸಿದರು.