ಪುಂಡ ಪೋಕರಿಗಳ ಅಡ್ಡೆಯಾದ ತ್ಯಾಜ್ಯ ವಿಲೇವಾರಿ ಘಟಕ

KannadaprabhaNewsNetwork |  
Published : May 29, 2026, 01:15 AM IST
ಮಧುಗಿರಿ ತಾಲೂಕು ಚಿಕ್ಕಮಾಲೂರು ಗ್ರಾಪಂ ನಿಂದ ಕೆಂಪಾಪುರ ಬಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೇಕಾಬಟ್ಟಿ ಕಸ ಸುರಿಯುತ್ತಿರುವ ಪರಿಣಾಮ ಈ ಭಾಗದ ಗ್ರಾಮಸ್ಥರಿಗೆ ತೊಂದರೆ ಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು ಪ್ಲಾಸ್ಟಿಕ್ ಪೇಪರ್ ಹರಡಿರುವ ದೃಶ್ಯ ಕಾಣಬಹುದಾಗಿದೆ.  | Kannada Prabha

ಸಾರಾಂಶ

ಮಧುಗಿರಿ: ತಾಲೂಕಿನ ಚಿಕ್ಕಮಾಲೂರು ಗ್ರಾಪಂ ವತಿಯಿಂದ ಕೆಂಪಾಪುರ ಗ್ರಾಮದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಇದು ಕೇವಲ ಹೆಸರಿಗಷ್ಟೇ ತ್ಯಾಜ್ಯ ವಿಲೇವಾರಿ ಘಟಕವಾಗಿದ್ದು ರಾತ್ರಿಯ ಸಮಯದಲ್ಲಿ ಪುಂಡ-ಪೋಕರಿಗಳ ಅಡ್ಡೆಯಾಗಿದೆ ಮಾರ್ಪಾಟಾಗಿ ಹೊರಹೊಮ್ಮಿದೆ.

ಮಧುಗಿರಿ: ತಾಲೂಕಿನ ಚಿಕ್ಕಮಾಲೂರು ಗ್ರಾಪಂ ವತಿಯಿಂದ ಕೆಂಪಾಪುರ ಗ್ರಾಮದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಇದು ಕೇವಲ ಹೆಸರಿಗಷ್ಟೇ ತ್ಯಾಜ್ಯ ವಿಲೇವಾರಿ ಘಟಕವಾಗಿದ್ದು ರಾತ್ರಿಯ ಸಮಯದಲ್ಲಿ ಪುಂಡ-ಪೋಕರಿಗಳ ಅಡ್ಡೆಯಾಗಿದೆ ಮಾರ್ಪಾಟಾಗಿ ಹೊರಹೊಮ್ಮಿದೆ.

ಪ್ರತಿದಿನ ಕೆಂಪಾಪುರ ಮತ್ತು ಚಿಕ್ಕಮಾಲೂರು ಗ್ರಾಮಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ತಂದು ಘಟಕದ ಮುಂದೆ ಬೇಕಾಬಿಟ್ಟಿ ಡಂಪ್ ಮಾಡಲಾಗುತ್ತಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡದ ಕಾರಣ ಘಟಕದ ಸುತ್ತಮುತ್ತಲು ಪ್ಲಾಸ್ಟಿಕ್ ಗಳ ರಾಶಿಯೇ ತುಂಬಿಹೋಗಿದೆ.ಅಲ್ಲದೆ ಈ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಕಸದ ವಾಸನೆ ಮೂಗಿಗೆ ಬಡಿಯುತ್ತಿದೆ. ಇದರ ನಿರ್ವಹಣೆ ಮಾಡುವವರು ಇತ್ತ ಗಮನ ಹರಿಸಿ ಸೂಕ್ತ ಕಸ ವಿಲೇವಾರಿ ಮಾಡಬೇಕೆಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಪಿಡಿಒಹಾಗೂ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಂಡಿಲ್ಲ. ಈ ತ್ಯಾಜ್ಯ ಸುರಿಯುವ ಮುಂದಿನ ರಸ್ತೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಕಸ ವಿಲೇವಾರಿಯನ್ನು ಸೂಕ್ತವಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುರಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ