ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಬಿಬಿ ರಸ್ತೆಯ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಉಸಿರಿಗಾಗಿ ಹಸಿರು ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಕೃತಿ, ಭೂಮಿ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ. ಪರಿಸರದಲ್ಲಿ ನಾವು ಮಾಡುವ ತಪ್ಪುಗಳಿಂದ ಪ್ರಕೃತಿಯ ವಿಕೋಪಕ್ಕೆ ನಾವು ಒಳಗಾಗುತ್ತಿದ್ದೇವೆ. ಪ್ರಕೃತಿಯಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಪ್ರಕೃತಿಯಲ್ಲಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಬಿ.ರಮೇಶ್ ಮಾತನಾಡಿ, ನಮ್ಮ ತತ್ ತಕ್ಷಣದ ಅಗತ್ಯತೆಗಳ ಪೋರೈಕೆಗಾಗಿ ಪರಿಸರದ ನೀರು, ಗಿಡಮರ, ಜೀವವೈವಿದ್ಯಗಳನ್ನು ಅತಿಯಾಗಿ ಬಳಸಿ ಸಂಕಷ್ಟಕ್ಕೆ ಒಳಗಾಗುತ್ತಿದ್ದೇವೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಮರೆಯುತ್ತಿದ್ದೇವೆ. ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪರಿಸರ ಜಾಗೃತಿ ನಿರ್ವಹಿಸುವ ಜವಾಬ್ದಾರಿ ಅರಿಯಬೇಕು ಎಂದು ತಿಳಿಸಿದರು.ಕುಲಸಚಿವ ಪ್ರೋ.ಡಾ.ಎನ್.ಲೋಕನಾಥ್ ಮಾತನಾಡಿ, ಪರಿಸರ ಉಳಿಸಲು ಪ್ರತಿಯೊಬ್ಬರೂ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ಕನಿಷ್ಟ ಮೂರು ಗಿಡಗಳನ್ನಾದರೂ ನೆಟ್ಟು ಪೋಷಿಸ ಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯ ಹತ್ತು ವರ್ಷಗಳ ಕಾರ್ಯಕ್ರಮಗಳ ಸ್ಮರಣ ಸಂಚಿಕೆ ಹಸಿರ ಹಾದಿ ಯನ್ನು ಗಣ್ಯರು ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಡಾ.ಎನ್.ಗಂಗಾಧರ ರೆಡ್ಡಿ, ಕಾರ್ಯದರ್ಶಿ ಸಿ.ಎಲ್.ವೆಂಕಟರೆಡ್ಡಿ ಇದ್ದರು.
ಸಿಕೆಬಿ-2 ನಗರದ ಬಿಬಿ ರಸ್ತೆಯ ಕನ್ನಡ ಭವನದಲ್ಲಿ ನಡೆದ ಉಸಿರಿಗಾಗಿ ಹಸಿರು ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಹತ್ತು ವರ್ಷಗಳ ಕಾರ್ಯಕ್ರಮಗಳ ಸ್ಮರಣ ಸಂಚಿಕೆ ಹಸಿರ ಹಾದಿ ಯನ್ನು ಗಣ್ಯರು ಬಿಡುಗಡೆ ಮಾಡಿದರು