ಕನ್ನಡಪ್ರಭವಾರ್ತೆ ತಿಪಟೂರು
ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಆಲೂರು ದೊಡ್ಡನಿಂಗಪ್ಪ ಆಯ್ಕೆ ಮಾಡಲಾಗಿದ್ದು, ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ೯ ಗಂಟೆಗೆ ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ಅರೆವಾದ್ಯ, ಕೊಂಬು ಕಹಳೆ, ನಾಸಿಕ್ ಡೋಲು, ಲಂಬಾಣಿನೃತ್ಯ, ನಂದಿಧ್ವಜ, ಬಸವ ನಗಾರಿ ಜಾನಪದ ಕಲಾ ಪ್ರದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವಯುತ ಮೆರವಣಿಗೆ ನೆಡಯಲಿದೆ.ಬೆಳಿಗ್ಗೆ ೮ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಮೋಹನ್‌ಕುಮಾರ್. ಜಿ.ವಿ, ನಾಡಧ್ವಜಾರೋಹಣವನ್ನು ತಾ ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ , ಪರಿಷತ್ತಿನ ಧ್ವಜಾರೋಹಣವನ್ನು, ಹೊನ್ನವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಎಚ್.ಆರ್. ಪುರುಷೋತ್ತಮ್ ನೆರವೇರಿಸಲಿದ್ದಾರೆ.ಉದ್ಘಾಟನಾ ಸಮಾರಂಭವು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದ್ದು ಕರಿಸಿದ್ದೇಶ್ವರಸ್ವಾಮಿ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಕೆ. ಷಡಕ್ಷರಿ ವಹಿಸಲಿದ್ದು, ಉದ್ಘಾಟನೆಯನ್ನು ವಿಮರ್ಶಕ ಅಗ್ರಹಾರ ಕೃಷ್ಣಮೂರ್ತಿ, ಸ್ಮರಣ ಸಂಚಿಕೆ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಚೇತನ್.ಆರ್, ಪುಸ್ತಕ ಮಳಿಗೆ ಉದ್ಘಾಟನೆಯನ್ನು ಕೆ.ಪಿ.ಸಿ.ಸಿ ಸದಸ್ಯ ಯೋಗೀಶ್.ವಿ, ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ಅಚ್ಯುತಕುಮಾರ್, ಕೃಷ್ಣಮೂರ್ತಿ ಬಿಳಿಗೆರೆ, ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ. ಸಾಹಿತಿ ಟಿ.ಎಸ್.ನಾಗರಾಜಶೆಟ್ಟಿ, ಮೈಸೂರು ಡಾ.ರಾಜಪ್ಪದಳವಾಯಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು, ರಂಗ ನಿರ್ದೇಶಕ ನಟರಾಜು ಹೊನ್ನವಳ್ಳಿ, ಗಂಗಾಧರಯ್ಯ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಆಗಮಿಸಲಿದ್ದಾರೆ.ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಶಿಕ್ಷಣ ಎತ್ತ ಸಾಗುತ್ತಿದೆ, ಹೊನ್ನವಳ್ಳಿ ಅಂದು-ಇಂದು, ಗೋಷ್ಠಿಗಳು ನೇರವೇರಲಿದೆ. ಹಾಗೂ ಕವಿಗೋಷ್ಠಿಯಲ್ಲಿ ೨೭ ಜನ ಕವಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ಎಮ್.ಡಿ.ಶಿವಕುಮಾರ್, ಹೊನ್ನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎನ್.ಚನ್ನಬಸವಣ್ಣ, ಕಾರ್ಯದರ್ಶಿ ಮಂಜಪ್ಪ, ನಾಗರಾಜು, ಸತ್ಯನಾರಾಯಣ್, ಬಸವರಾಜು, ಸೋಮಶೇಖರ್, ಶಾರದಮ್ಮ, ಗೋವಿಂದರಾಜು, ಮಲ್ಲಿಗಪ್ಪಚಾರ್ ಮತ್ತಿತ್ತರು ಹಾಜರಿದ್ದರು.