- ಪತ್ನಿಗೂ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಒತ್ತಾಯಿಸಿದ ಬಳ್ಳಾರಿ ಸಂಸದ - - -
ನೋಡ್ತಾ ಇರಿ, ಯಾವ ರೀತಿ ಸಂಪುಟ ಇರುತ್ತದೆ. ಎಲ್ಲರೂ ತಿರುಗಿ ನೋಡಬೇಕು ಎಂದು ಬಳ್ಳಾರಿ ಕ್ಷೇತ್ರದ ಸಂಸದ ಇ.ತುಕಾರಾಂ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯ ನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಏನೂ ಇಲ್ಲ. ಎಲ್ಲ ಶಾಂತಿಯುತವಾಗಿದೆ. ಮುಖ್ಯಮಂತ್ರಿ ವಿಚಾರದ ಬಗ್ಗೆ ಹೈಕಮಾಂಡ್ ಇದೆ. ನಮ್ಮ ಪಕ್ಷದ ಹಿರಿಯರೆಲ್ಲಾ ಸೇರಿ ನಿರ್ಧಾರ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಹಿರಿಯರೂ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಜನ ನಮಗೆ ಸಂಪೂರ್ಣ ಬಹುಮತದ ಆದೇಶ ನೀಡಿದ್ದಾರೆ. ಜನರ ಪರ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ. ಜನರ ಭರವಸೆ ಈಡೇರಿಸಿ, ನುಡಿದಂತೆ ನಡೆದುಕೊಂಡಿದ್ದೇವೆ. ಪ್ರೀತಿ, ಅಭಿಮಾನಕ್ಕೆ ತಕ್ಕಂತೆ ಕೆಲಸ ಮಾಡಿ, 2028ಕ್ಕೆ ಮತ್ತೆ ನಾವೇ ರಾಜ್ಯದಲ್ಲಿ ಅಧಿಕಾರಕ್ಕೂ ಬರುತ್ತೇವೆ ಎಂದು ತುಕಾರಾಂ ಹೇಳಿದರು.
- - -
(ಕೋಟ್)ಯಾರಿಗೆ ಕ್ಲೀನ್ ಇಮೇಜ್ ಇದೆ ಅಂತಾನೂ ಪಕ್ಷದ ಹೈಕಮಾಂಡ್ ನೋಡುತ್ತದೆ. ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ.
- ಇ.ತುಕಾರಾಂ, ಸಂಸದ, ಬಳ್ಳಾರಿ ಕ್ಷೇತ್ರ.- - -