ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಡಾ.ಪ್ರದೀಪ್ ಅಭಿಮತ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವೇ ವಿಶ್ವ ಜಲ ದಿನ. ಇಂದು ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ಇಲ್ಲವಾದಲ್ಲಿ ಶಾಶ್ವತವಾಗಿ ನಮ್ಮ ಅಳಿವು ಶತಸಿದ್ಧ ಎಂಬಂತಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ವೈಜ್ಞಾನಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ವಿಶೇಷವಾಗಿ ಶಿಕ್ಷಕರಿಗೆ ಈ ರೀತಿಯ ಜ್ಞಾನ ಒದಗಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಿಕ್ಷಕರು ಎಲ್ಲಾ ರೀತಿಯ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲರು. ಆದರೆ ಇಂದು ಶಿಕ್ಷಣ ಕ್ಷೇತ್ರವೂ ಸಹ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಭೂಮಿಯ ಮೇಲೆ ಕುಡಿಯುವ ನೀರಿನ ಲಭ್ಯತೆ ಕೇವಲ 0.003ರಷ್ಟು ಮಾತ್ರ. ಜಾಗತಿಕ ತಾಪಮಾನದ ಏರಿಕೆಯಿಂದ ನೀರ್ಗಲ್ಲುಗಳು ಕರಗಿಹೋಗುತ್ತಿವೆ. ಇಂತಹ ಸ್ಥಿತಿಯಲ್ಲಿ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿ ಮಾಡುವುದು ಸವಾಲಾಗಿ ಪರಿಣಮಿಸುತ್ತಿದೆ. ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ. ಬೋರ್ವೆಲ್ ಗಳ ಅತೀ ಕೊರೆಯುವಿಕೆಯಿಂದಲೂ ಜಲಸಂಪನ್ಮೂಲದ ಅಭಾವ ಎದ್ದು ಕಾಣುತ್ತಿದೆ. ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆಯಿಂದ ಉಂಟಾಗಿರುವ ಜೀವಜಲವನ್ನು ಸಂರಕ್ಷಿಸಿ ಉಳಿಸಬೇಕಿದೆ. ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲ ಸಮರ್ಥ ಬಳಕೆ ಆಗಬೇಕಿದೆ. ನೀರಿನ ಅಭಾವವನ್ನು ತಡೆಗಟ್ಟಲು ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಅಗತ್ಯ. ಭವಿಷ್ಯದ ದೃಷ್ಟಿಯಿಂದ ನೀರನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಚಳ್ಳಕೆರೆ ಯರಿಸ್ವಾಮಿ, ಈ.ರುದ್ರಮುನಿ, ಉಪನ್ಯಾಸಕರಾದ ಡಾ.ಜಿ. ಪಿ.ರಾಜು, ಆರ್.ಎಸ್.ರಾಜು, ನಾಗಲಿಂಗರೆಡ್ಡಿ, ಪ್ರಾಂಶುಪಾಲ ಡಾ.ಕೆ. ಪಿ.ನಾಗಭೂಷಣಶೆಟ್ಟಿ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮುಂತಾದವರು ಹಾಜರಿದ್ದರು.