ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣರಿಗೆ ಈ ನನ್ನ ಕ್ಷೇತ್ರದಲ್ಲಿ ಅತಿಹೆಚ್ಚು ಮತಗಳನ್ನು ನೀಡಬೇಕು, ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಮತಗಳಿಗಿಂತಲೂ ಅಧಿಕ ಮತಗಳನ್ನು ಪ್ರಜ್ವಲ್ ರಿಗೆ ನೀಡಲು ಎ.ಮಂಜು ಕೋರಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಮಾತನಾಡಿ, ಈ ೯೨ನೇ ವಯಸ್ಸಿನಲ್ಲೂ ನನ್ನ ಹೋರಾಟ ಮುಂದುವರೆದಿದ್ದು, ತಮಿಳುನಾಡು ನಮ್ಮ ನೀರಾವರಿ ಹಕ್ಕನ್ನು ಕಸಿದುಕೊಳ್ಳುತ್ತಿದೆ. ತಮಿಳುನಾಡಿನ ಅಣತಿಯಂತೆ ನೀರು ಬಿಟ್ಟು ಸಿದ್ದರಾಮಯ್ಯ ಸರ್ಕಾರ ನಮ್ಮ ರೈತರ ಹಿತವನ್ನು ಮರೆತಿದೆ, ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ನೀರಿಗೆ ಹಾಹಾಕಾರವಿದೆ. ಇದರ ಬಗ್ಗೆ ನಾನು ಪ್ರಧಾನಮಂತ್ರಿಯವರ ಬಳಿ ಚರ್ಚಿಸಿದ್ದು, ರಾಜ್ಯಕ್ಕೆ ನ್ಯಾಯದ ಭರವಸೆ ಸಿಕ್ಕಿದೆ. ಇದನ್ನು ಸರಿಪಡಿಸಲು ಶ್ರಮಿಸುತ್ತೇನೆ. ಅಲ್ಲದೇ, ಮೇಕೆದಾಟು ಯೋಜನೆಗೂ ಪ್ರಧಾನಮಂತ್ರಿಯವರಿಂದ ಚುನಾವಣೆ ನಂತರ ಹಸಿರು ನಿಶಾನೆಗೆ ಪ್ರಯತ್ನಿಸುತ್ತೇನೆ. ದೇಶದ ಹಿತಕ್ಕಾಗಿ ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕು, ಅಲ್ಲದೇ, ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಮಂತ್ರಿಯಾಗಿ ದೇಶದ ನಿರ್ವಹಣೆ ಮಾಡುವ ಸಾಮರ್ಥ್ಯ ಯಾರಿಗೂ ಇಲ್ಲವಾಗಿದೆ. ದೇಶದ ಭದ್ರತೆಗಾಗಿ ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣರಿಗೆ ಮತ ನೀಡುವಂತೆ ಕೋರಿದರು.ಅರಕಲಗೂಡು ಶಾಸಕ ಎ.ಮಂಜು, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಬ್ರಿಗೇಡ್‌ನ ರಮೇಶ್, ಎಸ್.ಆರ್ ಕೇರಳಾಪುರ ಮಾಜಿ ಗ್ರಾಪಂ ಅಧ್ಯಕ್ಷ ಕರೀಗೌಡ ಮತ್ತು ಸದಸ್ಯ ಶಿವಣ್ಣ ಕೃಷಿಪತ್ತಿನ ಸಂಘದ ನಿರ್ದೇಶಕ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಂತೋಷ್‌ಗೌಡ ಇನ್ನು ಹಲವಾರು ಕಾರ್ಯಕರ್ತರು ಹಾಜರಿದ್ದರು.