ಸತತ ಪ್ರಯತ್ನದಿಂದ ಭದ್ರಾದಿಂದ ಕೆರೆಗಳಿಗೆ ನೀರು: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ನರಸೀಪುರ ಗ್ರಾಮದ ಪಂಪ್ ಹೌಸ್ ಬಳಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಏತ ನೀರಾವರಿ ಪ್ಯಾಕೇಜ್-1 ಹಾಗೂ 2 ರ ಮುಖಾಂತರ ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳ 50ಕ್ಕೂ ಹೆಚ್ಚು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯದ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಮತ್ತು ನಮ್ಮ ಪ್ರಯತ್ನದಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಲುವೆಯಿಂದ ನೀರು ಹರಿದು ಬರಲು ಅವಕಾಶವಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ಶನಿವಾರ ಸಮೀಪದ ನರಸೀಪುರ ಗ್ರಾಮದ ಪಂಪ್ ಹೌಸ್ ಬಳಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಏತ ನೀರಾವರಿ ಪ್ಯಾಕೇಜ್-1 ಹಾಗೂ 2 ರ ಮುಖಾಂತರ ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳ 50ಕ್ಕೂ ಹೆಚ್ಚು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮ ಚಾಲನೆಯಲ್ಲಿ ಮಾತನಾಡಿದರು.

ಕಾಲುವೆಗೆ ನೀರು ಹರಿಸಲು ತುಂಬಾ ಹೋರಾಟ ಮತ್ತು ಶ್ರಮ ಇದೆ, ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರ ಶಕ್ತಿ ಇದೆ. ಕಾಲುವೆಗಳಿಂದ ಎಷ್ಟು ಬೇಕೋ ಅಷ್ಟು ನೀರನ್ನು ಉಪಯೋಗಿಸಿಕೊಳ್ಳಿ, ಕಾಲುವೆಗಳಲ್ಲಿ 2800 ಕ್ಸಿಸಿಕ್ಸ್ ನೀರು ಹರಿಯುತ್ತದೆ. ಅಮೃತಾಪುರ, ಶಿವನಿ ಮತ್ತು ಅಜ್ಜಂಪುರ ಹೋಬಳಿ ಈ ಭಾಗದ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು. ತರೀಕೆರೆ ತಾಲೂಕಿನ ಓದಿರಾಯನ ಹಳ್ಳಕ್ಕೂ ನೀರು ಹರಿಯಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.

ಯೋಜನೆ ಅನುಮೋದನೆಗೆ ನಾವು ತುಂಬಾ ಹೋರಾಡಿದ್ದೇವೆ, ಉಪವಾಸ ಮಾಡಿದ್ದೇವೆ, ಪ್ರತಿ ಹಂತದಲ್ಲೂ ಹೋರಾಟ ಮಾಡಿದ್ದೇವೆ. ಇದು ಎಲ್ಲರಿಗೂ ಗೊತ್ತಿದೆ, ಅನೇಕ ನೀರಾವರಿ ಸಭೆಗಳಲ್ಲಿ ಭಾಗವಹಿಸಿದ್ದೇನೆ, ನಮ್ಮ ಎಲ್ಲ ಕೆರೆಗಳಿಗೆ ನೀರು ಕೊಡಬೇಕು ಎಂಬುದು ನಮ್ಮ ಹೋರಾಟ. ಚುನಾವಣೆ ಮುಂಜೆ ನಾವು ಭರವರಸೆ ನೀಡಿದ್ದಂತೆ ರೈತರ ಹಿತ ಮುಖ್ಯ. ಅವರ ಎಲ್ಲ ಬೇಡಿಕೆಗಳು ಈಡೇರಬೇಕು ಎಂದು ಹೇಳಿದರು.

ತುಂಗಾ ನದಿಯಿಂದ ಭದ್ರಾ ನದಿಗೆ 15 ಟಿಎಂಸಿ ಸರ್ ಪ್ಲಸ್ ನೀರು ಬರಬೇಕು. ಕಾಮಗಾರಿ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಯುತ್ತದೆ. 6000 ಜನರಿಗೆ ನಿವೇಶನ ಒದಗಿಸುವುದು ಖಂಡಿತ ಎಂದು ಹೇಳಿದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಸಂತೋಷದ ದಿನವಿದು. ತಾಲೂಕಿನಲ್ಲಿ ಬರಗಾಲದಲ್ಲಿ ಕಾಲುವೆಗಳಲ್ಲಿ ನೀರು ಬರುತ್ತಿದೆ. ರೈತರಿಗೋಸ್ಕರ ಇಷ್ಟು ದೊಡ್ಡ ಕೆಲಸವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನಿರ್ವಹಿಸಿದ್ದಾರೆ, ಅವರು ಅಭಿವೃದ್ಧಿಯ ಹರಿಕಾರರು, ಕಟ್ಟ ಕಡೆ ವ್ಯಕ್ತಿಗೂ ಕೆಲಸ ಮಾಡಿಕೊಡುತ್ತಾರೆ. ಸಮಾಜದ ಎಲ್ಲಾ ವರ್ಗದವರಿಗೂ ಕೆಲಸ ಮಾಡಿ ಕೊಡುತ್ತಾರೆ. ಶಾಸಕ ಜಿ.ಎಚ್.ಶ್ರೀನಿವಾಸ್ , ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯನವರ ಬಲಗೈ ಆಗಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಶಕ್ತಿಯಾಗಿ ನಿಲ್ಲೋಣ ಎಂದರು.

ಮುಖಂಡರಾದ ಬಸವರಾಜ್, ಅತ್ತಿಮೊಗ್ಗೆ ಶಿವಣ್ಣ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಾದ ಅವಿನಾಶ್ ಮತ್ತಿತರರು ಮಾತನಾಡಿದರು. ಕಾಂಗ್ರೆಸ್ ಸಮಿತಿ ನಗರಾಧ್ಯಕ್ಷ ಪ್ರಕಾಶ್ ಮರ್ಮ, ಕೆಪಿಸಿಸಿ ಸದಸ್ಯ ನಟರಾಜ, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್, ಮುಖಂಡರಾದ ಗುರುಮೂರ್ತಿ, ಹುಣಸಘಟ್ಟ ಮಲ್ಲಿಕಾರ್ಜುನ್,ಹುಣಸಘಟ್ಟ ಮಲ್ಲಿಕಾರ್ಜುನ್ ಮತ್ತಿತರರು ಭಾಗವಹಿಸಿದ್ದರು.30ಕೆಟಿಆರ್.ಕೆ.4ಃ

ತರೀಕೆರೆ ನರಸೀಪುರ ಗ್ರಾಮದ ಬಳಿ ಏರ್ಪಡಿಸಿದ್ದ ತರೀಕೆರೆ ಅಜ್ಜಂಪುರ ತಾಲೂಕುಗಳ 50ಕ್ಕೂ ಹೆಚ್ಚು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಚಾಲನೆ ನೀಡಿದರು. ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಕಾಂಗ್ರೆಸ್ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕೆಪಿಸಿಸಿ ಸದಸ್ಯ ನಟರಾಜ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ದಯಾನಂದ್ ಮತ್ತಿತರರು ಇದ್ದರು.

Share this article