ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ಕಾಮಸಮುದ್ರ ನಾಡಕಚೇರಿಯಲ್ಲಿ ನೀರಿನ ಸಂಪರ್ಕ ಕಲ್ಪಿಸದ ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕರು ಮತ್ತು ಕಚೇರಿಯ ಸಿಬ್ಬಂದಿ ವರ್ಗ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.ಸರ್ಕಾರ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವಂತಹ ವಿವಿಧ ಯೋಜನೆಗಳು ಸೇರಿದಂತೆ ಸರ್ಕಾರದ ಇತರೆ ಅನುಕೂಲಗಳನ್ನು ನಾಗರಿಕರಿಗೆ ತಲುಪಿಸಲು ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿಗಳನ್ನು ತೆರೆದಿದೆ.ಕಚೇರಿ ಉದ್ಘಾಟಿಸಿದ್ದ ಮುಖ್ಯಮಂತ್ರಿ
ಆದರೆ ಕಾಮಸಮುದ್ರ ಗ್ರಾಮದಲ್ಲಿನ ನಾಡಕಚೇರಿಗೆ ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಾಡಿಗೆ ಕಟ್ಟಡ ಚಿಕ್ಕದಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದ್ದ ಕಾರಣ ಸರ್ಕಾರ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಸುಸಜ್ಜಿತ ಸ್ವಂತ ಕಟ್ಟಡವನ್ನು ನಿರ್ಮಿಸಿ ಕಳೆದ ಒಂದೂ ವರೆ ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯರಗೋಳ್ ಡ್ಯಾಂ ಲೋಕಾರ್ಪಣೆ ಮಾಡುವಾಗ ಇದನ್ನೂ ಉದ್ಘಾಟಿಸಿದ್ದರು.ಈ ಮೂಲಕ ಜನರ ಸೇವೆಗೆ ಉಂಟಾಗಿದ್ದ ತೊಂದರೆ ನೀಗಿದಂತಾಗಿತ್ತು. ನಾಡಕಚೇರಿಯಲ್ಲಿ ಆಧಾರ್ ಕಾರ್ಡ್, ಜನನ ಮತ್ತು ಮರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿವಿಧ ಪಿಂಚಣಿ ಯೋಜನೆಗಳು ಸೇರಿದಂತೆ ೨೦ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಜನ ಇಲ್ಲಿನ ನಾಡಕಚೇರಿಗೆ ಬರುತ್ತಾರೆ. ಕಾಮಸಮುದ್ರ ಹೋಬಳಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾರಣ ಗಡಿ ಗ್ರಾಮಗಳಿಂದ ನೂರಾರು ಜನರು ನಿತ್ಯ ಬಂದು ಹೋಗುತ್ತಾರೆ.
ನೀರಿಲ್ಲದೆ ಶೌಚಾಲಯಕ್ಕೆ ಬೀಗಹೀಗೆ ಬಂದು ಹೋಗುವಂತಹ ಜನರಿಗೆ ಶೌಚಾಲಯವಿಲ್ಲದೆ ಸಮಸ್ಯೆ ಎದುರಾಗಿದೆ. ಕಾಮಸಮುದ್ರ ಗ್ರಾಮಕ್ಕೆ ನೂತನ ಕಟ್ಟಡ ನಿರ್ಮಿಸಿದ್ದಾರೆ ಹೊರತು ಪಂಚಾಯಿತಿ ಅಥವಾ ಇಲಾಖೆಯಿಂದ ಕಟ್ಟಡಕ್ಕೆ ನೀರಿನ ಸಂಪರ್ಕವನ್ನು ಕಲ್ಪಿಸಿಲ್ಲ. ಇದರ ಪರಿಣಾಮ ಸಾರ್ವಜನಿಕರು ಹಾಗೂ ಸಿಬ್ಬಂದಿ ಶೌಚಾಲಯವನ್ನು ಬಳಸಲು ಸಾಧ್ಯವಾಗದೇ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಹ ಶೌಚಾಲಯಕ್ಕೆ ಪರದಾಡುವಂತಾಗಿದೆ. ತಾತ್ಕಾಲಿಕವಾಗಿ ಖಾಸಗಿಯವರಿಂದ ಆಗಾಗ ನೀರಿನ ಟ್ಯಾಂಕರ್ ಮೂಲಕ ನೀರು ಖರೀದಿಸಲಾಗುತ್ತಿದೆ. ಖಾಸಗಿ ಟ್ಯಾಂಕರ್ ನೀರನ್ನು ಬಳಸಲು ಮುಂದಾಗಿರುವ ಕಾರಣ ಸಿಬ್ಬಂದಿ ತಮಗೆ ಮೀಸಲಿಟ್ಟಲಿರುವ ಶೌಚಾಯವನ್ನು ಮಾತ್ರ ಬಳಸುತ್ತಿದ್ದು, ಸಾರ್ವಜನಕರ ಅನುಕೂಲಕ್ಕೆ ಮೀಸಲಿಟ್ಟಿರುವ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ.
ಜನತೆನೆಗೆ ಬಯಲೇ ಗತಿಶೌಚಾಲಯಕ್ಕೆ ಬೀಗ ಜಡಿದಿರುವ ಕಾರಣ ಸಾರ್ವಜನಿಕರು ದೇಹ ಬಾಧೆಯನ್ನು ತೀರಿಸುಕೊಳ್ಳಲು ಬಯಲಿಗೆ ಹೋಗಬೇಕಾದ ಅನಿವಾರ್ಯ ಎದುರಾಗಿದ್ದು ಪಂಃವತಿಯಿಂದ ಈಗಲಾದರೂ ನೀರಿನ ಸಂಪರ್ಕ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.