ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಸಂದರ್ಭ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, 3 ವರ್ಷಗಳಲ್ಲಿ ದಾವಣಗೆರೆ ಜೆಲ್ಲೆಯ ರೈತರೊಂದಿಗೆ ಅನೇಕ ಹೋರಾಟಗಳನ್ನು ಮಾಡುತ್ತಿದ್ದು, ಇದರಲ್ಲಿ ಭದ್ರಾ ನಾಲೆ ಸೋರಿಕೆ ಆದಾಗ, ಅಪ್ಪರ್ ಭದ್ರಾಗೆ ನೀರು ಹರಿಸಬಾರದು, ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣೆ ದೃಷ್ಟಿಯಿಂದಲೂ ಯಾವತ್ತೂ ಹೋರಾಟ ಮಾಡಿಲ್ಲ. ನನ್ನ ಹೋರಾಟ ರೈತರ ಹಾಗೂ ಜನಸಾಮಾನ್ಯರಿಗಾಗಿ ಇರುತ್ತದೆ ಎಂದು ತಿಳಿಸಿದರು.
ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾಗೆ ನೀರು ಹರಿಸಲು ಸರ್ಕಾರ ಮುಂದಾದಾಗ ನಾನು ದಾವಣಗೆರೆ ರೈತರೊಂದಿಗೆ ದಾವಣಗೆರೆ ಬಂದ್ ಕಾರ್ಯಕ್ರಮ, ಹೆದ್ದಾರಿ ಬಂದ್ ಕಾರ್ಯಕ್ರಮ, ಡಿಸಿ ಕಚೇರಿ ಮುತ್ತಿಗೆ ಕಾರ್ಯಕ್ರಮ, ಪಾದಯಾತ್ರೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಯಿತು. ಇದರಲ್ಲಿ ಸ್ವಾರ್ಥ ರಹಿತ ಕಾಯಕವಿದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.ಅಪ್ಪರ್ ಭದ್ರಾಗೆ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಮುನ್ನ ತುಂಗಾ ಜಲಾಶಯದಿಂದ ಶಿವಮೊಗ್ಗ ಬಳಿ ಇರುವ ಮುತ್ತಿನಕೊಪ್ಪ ಏತ ನೀರಾವರಿ ಮೂಲಕ 17.4 ಟಿಎಂಸಿ ನೀರನ್ನು ಮಳೆಗಾಲದಲ್ಲಿ ನೀರೇತ್ತಿ ಭದ್ರಾ ಜಲಾಶಯಕ್ಕೆ ಹರಿಸಿ ನಂತರ ಅಪ್ಪರ್ ಭದ್ರಾಗೆ ನೀರು ಕೊಡಿ ಎಂದು ನಾನು ಹೋರಾಟ ಮಾಡಿದ್ದು ನಿಜ. ಇದಕ್ಕೆ ಪಕ್ಷಾತೀತವಾಗಿ ರೈತರು ನನಗೆ ಕೈ ಜೋಡಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.