ಎಲ್ಲರೂ ಸೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕೈ ಜೋಡಿಸೋಣ, ಭವಿಷ್ಯದಲ್ಲಿ ಎದುರಾಗುವ ಸ್ಥಳೀಯ, ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು ಪಣ ತೊಡೋಣ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಎಲ್ಲರೂ ಸೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕೈ ಜೋಡಿಸೋಣ, ಭವಿಷ್ಯದಲ್ಲಿ ಎದುರಾಗುವ ಸ್ಥಳೀಯ, ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು ಪಣ ತೊಡೋಣ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.ಸ್ಥಳೀಯ ಗಂಜ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಹೊಸ ಅಧ್ಯಕ್ಷ ಕೆ.ಶಾಂತಪ್ಪ ಅವರ ಪದಗ್ರಹಣದ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿಯನ್ನು ಮುನ್ನಡೆಸುವಲ್ಲಿ ಕೆ.ಶಾಂತಪ್ಪ ಅವರು ಸಮರ್ಥರಾಗಿದ್ದು, ಎಲ್ಲರನ್ನೂ ಒಗ್ಗೂಡಿಕೊಂಡು ಹೋಗಲಿದ್ದಾರೆ. ನಾವೆಲ್ಲರೂ ಅವರಿಗೆ ಸಹಕಾರ ನೀಡಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ಕೆ.ಶಾಂತಪ್ಪ ಅವರು ನಾನು ಒಂದೇ ಕಾಲದಲ್ಲಿ ಅವರ ಜೊತೆ ರಾಜಕೀಯಕ್ಕೆ ಬಂದಿದ್ದೇವೆ, ಪಕ್ಷ ತನ್ನದೇ ಆದ ಸುದೀರ್ಘ ಇತಿಹಾಸ ಹೊಂದಿದೆ.ದೇಶದ ಸ್ವಾತಂತ್ರ್ಯ ಚಳವಳಿಯಿಂದ ಆರಂಭವಾಗಿ 50 ವರ್ಷಗಳ ಅಧಿಕಾರಾ ವಧಿಯಲ್ಲಿ ಅನೇಕ ಅಭಿವೃದ್ಧಿ ಮಾಡಿದೆ ಎಂದರು. ಕೆ.ಶಾಂತಪ್ಪ ಅವರು ಪಕ್ಷ ನೀಡಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಲಿದ್ದಾರೆ. ಸಾಕಷ್ಟು ಸವಾಲುಗಳಿದ್ದು ಪ್ರಾಮಾಣಿವಾಗಿ ಮಾಡಲಿದ್ದು ನಾವೆಲ್ಲರೂ ಸಹಕಾರ ನೀಡುತ್ತೇವೆ, ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡಲಿ ಎಂದರು.ಹೊಸ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ, ಎನ್ ಎಸ್ ಬೋಸರಾಜು, ವಸಂತ ಕುಮಾರ ಸೇರಿ 8 ಜನರು ನನ್ನ ಮುಂದೆಯೇ ಅಧ್ಯಕ್ಷರಾಗಿ ವಿವಿಧ ಹುದ್ದೆ ಅಲಂಕರಿಸಿದ್ದಾರೆ ನನಗೆ ಅನೇಕ ಅವಕಾಶಗಳು ಕೈತಪ್ಪಿ ದರೂ ನಿರಾಶರಾಗದೇ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ನನ್ನ ಮುಂದೆ ಅನೇಕ ಸವಾಲುಗಳಿವೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಣ ರಾಜಕೀಯ ಬಿಟ್ಟು ಎಲ್ಲರೊಟ್ಟಿಗೆ ಕೆಲಸ ಮಾಡಿ ಪಕ್ಷ ಸಂಘಟಿಸುವೆ ಯಾರೇ ಅಡೆತಡೆ ಮಾಡಿದರೂ ಕಿವಿಕೊಡುವುದಿಲ್ಲ , ಪಕ್ಷದ ವಿವಿಧ ಸೆಲ್ ಗಳನ್ನು ಗಟ್ಟಿಗೊಳಿಸಿ ಯುವಕರಿಗೆ ಸರಿಯಾದ ಸ್ಥಾನಮಾನ ನೀಡಲು ಪ್ರಯತ್ನಿಸೋಣ ಎಂದು ಮನವಿ ಮಾಡಿದರು.
ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಹಂಪಯ್ಯ ನಾಯಕ ಸಾಹುಕಾರ್,ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ,ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮುಖಂಡರಾದ ಮೊಹಮ್ಮದ್ ಶಾಲಂ, ಜಯಣ್ಣ, ರುದ್ರಪ್ಪ ಅಂಗಡಿ, ಮತ್ತಿತರರು ಇದ್ದರು.