ಹಾರಂಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಬಹುತೇಕ ಕುಸಿತ

KannadaprabhaNewsNetwork |  
Published : Feb 11, 2026, 03:00 AM IST
ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ದೃಶ್ಯ | Kannada Prabha

ಸಾರಾಂಶ

ಫೆಬ್ರುವರಿ ತಿಂಗಳ ಆರಂಭದಲ್ಲಿಯೇ ಹಾರಂಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಬಹುತೇಕ ಕುಸಿತ ಕಂಡಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಫೆಬ್ರುವರಿ ತಿಂಗಳ ಆರಂಭದಲ್ಲಿಯೇ ಹಾರಂಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಬಹುತೇಕ ಕುಸಿತ ಕಂಡಿದೆ.ಬೇಸಿಗೆಯ ಆರಂಭದಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ಈ ಬಾರಿ ಆರು ಅಡಿಗಳಷ್ಟು ಕಡಿಮೆ ಸಂಗ್ರಹ ಕಂಡುಬಂದಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ 2830.65 ಅಡಿಗಳಿಗೆ ಇಳಿದಿದೆ.ಕಳೆದ ಮಳೆಗಾಲದ ಅವಧಿಯಲ್ಲಿ ಜಲಾಶಯಕ್ಕೆ ಒಟ್ಟು 48 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ಇದರಲ್ಲಿ 39.3 ಟಿಎಂಸಿ ಪ್ರಮಾಣದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ಕಾಲುವೆ ಮೂಲಕ 10.23 ಟಿಎಂಸಿ ನೀರು ಹರಿಸಲಾಗಿದೆ. ಗರಿಷ್ಠ 8.5 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸಕ್ತ 3.37 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಕಾಣಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯಾಳುವಿಗೆ ಕೆಜಿ ಭೋಪಯ್ಯ ಸಾಂತ್ವನ
ನೀರಿನ‌ ಮಿತ ಬಳಕೆ ಎಲ್ಲರ ಜವಾಬ್ದಾರಿ: ರಾಜೇಶ್ ನಾಯ್ಕ್