ತಮಿಳುನಾಡಿಗೆ ನೀರು: ಸ್ವಪಕ್ಷೀಯ ಶಾಸಕ ಆಕ್ರೋಶ

KannadaprabhaNewsNetwork |  
Published : Aug 21, 2026, 01:30 AM IST
ಪಿ.ರವಿಕುಮಾರ್‌ | Kannada Prabha

ಸಾರಾಂಶ

ನಮ್ಮ ರೈತರು ಬೆಳೆ ಬೆಳೆಯುವುದಕ್ಕೆ ನೀರಿಲ್ಲವೆಂದು ಹೇಳಿ ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಿ. ಇದರಿಂದ ಪರಿಸ್ಥಿತಿ ಗಂಭೀರವಾಗಲಿದೆ. ತಮಿಳುನಾಡಿನಲ್ಲಿರುವವರು ಮಾತ್ರ ರೈತರು, ನಮ್ಮವರು ರೈತರಲ್ಲವೇ?.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಸ್ವಪಕ್ಷೀಯ ಶಾಸಕರೊಬ್ಬರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ತಮಿಳುನಾಡಿಗೆ ನೀರು ಹರಿಸಿ ನಮ್ಮ ರೈತರಿಗೆ ನೀರಿಲ್ಲವೆಂದರೆ ಏನರ್ಥ. ನೀರಿನ ವಿಚಾರದಲ್ಲಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ ಅಧಿವೇಶನ ಕರೆದು ನೀರಿಲ್ಲ ಅಂತ ಹೇಳಲು ತಜ್ಞರನ್ನು ಕಳುಹಿಸುವಂತೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮೂವರು ಸಚಿವರೆದುರು ಖಡಕ್ಕಾಗಿ ಹೇಳಿದರು.

ನಮ್ಮ ರೈತರು ಬೆಳೆ ಬೆಳೆಯುವುದಕ್ಕೆ ನೀರಿಲ್ಲವೆಂದು ಹೇಳಿ ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಿ. ಇದರಿಂದ ಪರಿಸ್ಥಿತಿ ಗಂಭೀರವಾಗಲಿದೆ. ತಮಿಳುನಾಡಿನಲ್ಲಿರುವವರು ಮಾತ್ರ ರೈತರು, ನಮ್ಮವರು ರೈತರಲ್ಲವೇ?. ಇಲ್ಲಿನವರಿಗೆ ಬದುಕಿಲ್ಲವೇ. ಮಳೆ ಕೊರತೆಯಿಂದ ಉಂಟಾಗಿರುವ ನೀರಿನ ಪರಿಸ್ಥಿತಿಯನ್ನು ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವಿವರಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವಂತೆ ಕಂಡುಬರುತ್ತಿದೆ. ಸರ್ಕಾರ ಕೂಡಲೇ ತಜ್ಞರನ್ನ ಕಳುಹಿಸಿ ಸಮರ್ಥವಾದ

ಮಂಡಿಸುವಂತೆ ಸಚಿವರನ್ನು ಒತ್ತಾಯಿಸಿದರು.

ಮೊದಲು ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ. ಅಧಿವೇಶನ ಕರೆದು ನೀರಿಲ್ಲ ಅಂತ ಹೇಳಲು ತಜ್ಞರನ್ನು ಕಳುಹಿಸಿ.

ಸಮರ್ಥವಾದ ಮಂಡಿಸುವಂತೆ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್‌ ಪ್ರಬಲ ವಾದ ಮಂಡಿಸಿದ್ದಾರೆ.

ನೈಸ್ ರಸ್ತೆಯಲ್ಲಿ ಅಕ್ರಮ ಟೋಲ್ ಸಂಗ್ರಹ ಆರೋಪ: ಕ್ರಮ ಕೈಗೊಳ್ಳಿ ಮಹಾಲಿಂಗೇಗೌಡ ಆಗ್ರಹ

ಮಂಡ್ಯ:ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ನೈಸ್ ರಸ್ತೆಯಲ್ಲಿ ಅಕ್ರಮ ಟೋಲ್ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಂ.ಎಂ.ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದಗಳು, ಟೋಲ್ ಸಂಗ್ರಹದ ಅವಧಿ, ಸರ್ಕಾರ ನಿಗದಿ ಪಡಿಸಿರುವ ಶುಲ್ಕ, ಇದುವರೆಗೆ ಸಂಗ್ರಹಿಸಿರುವ ಮೊತ್ತ ಹಾಗೂ ಸಾರ್ವಜನಿಕರಿಂದ ಟೋಲ್ ಪಡೆಯಲು ಇರುವ ಕಾನೂನುಬದ್ಧ ಅಧಿಕಾರದ ಕುರಿತು ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ತಿಳಿಸಿದ್ದಾರೆ.ಒಪ್ಪಂದದ ಷರತ್ತು ಅಥವಾ ಕಾನೂನುಬದ್ಧ ಅನುಮತಿ ಮೀರಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂಬುದು ತನಿಖೆಯಲ್ಲಿ ಸಾಬೀತಾದರೆ ಅದು ವಾಹನ ಸವಾರರು ಮತ್ತು ಸಾರ್ವಜನಿಕರ ಮೇಲೆ ಅನ್ಯಾಯವಾಗಿ ಆರ್ಥಿಕ ಹೊರೆ ಹೇರುವ ಗಂಭೀರ ಕೃತ್ಯವಾಗುತ್ತದೆ. ಸರ್ಕಾರ ಯಾವುದೇ ಪ್ರಭಾವಕ್ಕೂ ಒಳಗಾಗದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ ಟೋಲ್ ಸಂಗ್ರಹ ನಡೆದಿರುವುದು ದೃಢಪಟ್ಟಲ್ಲಿ ಅದನ್ನು ತಕ್ಷಣ ಸ್ಥಗಿತಗೊಳಿಸುವ ಜೊತೆಗೆ ಸಾರ್ವಜನಿಕರಿಂದ ಅನಧಿಕೃತವಾಗಿ ಸಂಗ್ರಹಿಸಿರುವ ಹಣವನ್ನು ಕಾನೂನಿನ ಪ್ರಕಾರ ಹಿಂದಿರುಗಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸಬೇಕು. ನೈಸ್ ರಸ್ತೆ ಟೋಲ್ ವಿಚಾರದಲ್ಲಿ ಸರ್ಕಾರ ಮೌನ ವಹಿಸದೆ, ವಾಸ್ತವಾಂಶಗಳನ್ನು ಬಹಿರಂಗಪಡಿಸಿ ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಮಹಾಲಿಂಗೇಗೌಡ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ