ಪಿವಿಎಸ್‌ ಬಸ್‌ಸ್ಟಾಪ್‌ನಲ್ಲಿ ಕುಡಿವ ನೀರು ಘಟಕಕ್ಕೆ ಶಾಸಕ ಚಾಲನೆ

KannadaprabhaNewsNetwork |  
Published : Apr 26, 2026, 03:45 AM IST
ಪಿವಿಎಸ್‌ ಬಸ್‌ ಸ್ಟಾಪ್‌ನಲ್ಲಿ ಕುಡಿವ ನೀರು ಘಟಕಕ್ಕೆ ಶಾಸಕ ವೇದವ್ಯಾಸ್‌ ಕಾಮತ್‌ ಚಾಲನೆ ನೀಡಿದ ಕ್ಷಣ | Kannada Prabha

ಸಾರಾಂಶ

ಗುರುವಾರ ನಗರದ ಪಿವಿಎಸ್ ವೃತ್ತದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಅಳವಡಿಸಲಾದ ಶುದ್ದ ಕುಡಿಯು ನೀರಿನ ಘಟಕಕ್ಕೆ ಚಾಲನೆ

ಮಂಗಳೂರು: ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸುವಲ್ಲಿ ಸೇವಾ ಮನೋಭಾವ ಹೊಂದಿರುವ ಜನರು ಮತ್ತು ಸಂಘ ಸಂಸ್ಥೆಗಳುಸಹಭಾಗಿತ್ವ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಅವರು ಗುರುವಾರ ನಗರದ ಪಿವಿಎಸ್ ವೃತ್ತದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಅಳವಡಿಸಲಾದ ಶುದ್ದ ಕುಡಿಯು ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೇವಾ ಚಟುವಟಿಕೆಯನ್ನೇ ಧ್ಯೇಯವಾಗಿರಿಸಿಕೊಂಡಿರುವ ರೋಟರಿ ಸಂಸ್ಥೆ ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ಸ್ಥಳೀಯಾಡಳಿತದ ಜೊತೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ದಿವಾಕರ್ ಕದ್ರಿ, ಮಾಜಿ ಮನಪಾ ಸದಸ್ಯೆ ಲೀಲಾವತಿ ಪ್ರಕಾಶ್, ಪಾಲಿಕೆ ಉಪ ಆಯುಕ್ತ ನರೇಶ್ ಶೆಣೈ, ಎಂಜಿನಿಯರ್ ರಾಜೇಶ್, ಮಾಜಿ ರೋಟರಿ ಗವರ್ನರ್ ಡಾ.ದೇವದಾಸ ರೈ, ಅಸಿಸ್ಟೆಂಟ್ ಗವರ್ನರ್ ಪ್ರೊ.ಚಿನ್ನಗಿರಿ ಗೌಡ, ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ರೈ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಮಂಗಳೂರು ರೋಟರಿ ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ರೋಟರಿ ಘಟಕದ ಪದಾಧಿಕಾರಿಗಳಾದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನಿಕಟ ಪೂರ್ವ ಅಧ್ಯಕ್ಷ ಬ್ರಿಯಾನ್ ಪಿಂಟೊ, ಪೂರ್ವಾಧ್ಯಕ್ಷ ಸಾಯಿಬಾಬ ರಾವ್, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಡಾ.ಶಿವ ಪ್ರಸಾದ್, ರಾಜೇಶ್ ಸೀತಾರಾಮ್ ಖಜಾಂಚಿ, ಡಾ.ರಂಜನ್ ರಾವ್, ಪ್ರಮೀಳಾ ಹೆಗಡೆ, ಗೀತಾ ರೈ, ಜಾಕ್ಸನ್ ಸಲ್ಡಾನಾ ಪ್ರವೀಣ್ ಕುಟಿನ್ಹೊ, ಮುರಳಿ ಹೊಸಮಜಲು, ಮಾಧವ ಅಡ್ಪಂಗಾಯ, ವಸಂತ್ ಅಂಚನ್, ಸ್ಥಳೀಯರಾದ ಪ್ರಭಾವತಿ ಶೆಟ್ಟಿ, ವಾರಿಜ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಮಾನ್‌ನಲ್ಲಿ ತುಂಬೆ ಹೆಲ್ತ್‌ಕೇರ್‌ ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಘಟಕ ಉದ್ಘಾಟನೆ
15 ದಿನದೊಳಗೆ ನಗರದ ರಸ್ತೆ ಹಂಪ್‌ಗಳಿಗೆ ಬಣ್ಣ: ಡಿಸಿ ಭರವಸೆ