ನಾದಬ್ರಹ್ಮ ಸಭಾಂಗಣದಲ್ಲಿ ಅಲೆ ಅಲೆಯಾಗಿ ತೇಲಿ ಬಂದ ಭಾವ ತರಂಗ....

KannadaprabhaNewsNetwork |  
Published : Feb 21, 2025, 12:50 AM IST
10 | Kannada Prabha

ಸಾರಾಂಶ

ಬಾ ಇಲ್ಲಿ ಸಂಭವಿಸು, ಎಲ್ಲೋ ಹುಡುಕಿದೆ ಇಲ್ಲದ ದೇವರ, ಸೋಜುಗಾದ ಸೂಜಿ ಮಲ್ಲಿಗೆ, ಕೋಲುಮಂಡೆ ಜಂಗಮದೇವ, ಒಂದಿರುಳು ಕನಸಿನಲ್ಲಿ, ಕಾಣದ ಕಡಲಿಗೆ, ಭಾಗ್ಯದ ಬಳೆಗಾರ, ತೇರ ಏರಿ ಅಂಬರದಾಗೆ- ಇವೇ ಮೊದಲಾದ ಗೀತೆಗಳಿಗೆ ಕಿಕ್ಕಿರಿದ ನೆರೆದಿದ್ದ ಸಭಿಕರಿಂದ ದೀರ್ಘ ಕರತಾಡನದ ಮೂಲಕ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕ ಹಾಗೂ ಜನ ಚೈತನ್ಯ ಫೌಂಡೇಷನ್‌ಆಶ್ರಯದಲ್ಲಿ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತಸಭಾದಲ್ಲಿ ಭಾವ ತರಂಗ- ಚಲನಚಿತ್ರಗಳಲ್ಲಿ ಅಳವಡಿಸಿರುವ ಪ್ರಸಿದ್ಧ ಕವಿಗಳ ಭಾವಗೀತೆಗಳ ಗಾಯನ ಕಾರ್ಯಕ್ರಮ ಬುಧವಾರ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮತ್ತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಮುಖ್ಯ ಅತಿಥಿಗಳಾಗಿದ್ದರು. ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಜನ ಫೌಂಡೇಷನ್‌ ಅಧ್ಯಕ್ಷ ಆರ್‌. ಲಕ್ಷ್ಮಣ್‌, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಇದ್ದರು.

ನಾಡಿನ ಹೆಸರಾಂತ ಕವಿಗಳಾದ ರಾಷ್ಟ್ರಕವಿ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ, ದ.ರಾ. ಬೇಂದ್ರೆ, ಕೆ.ಎಸ್‌. ನರಸಿಂಹಸ್ವಾಮಿ, ಕೆ.ಎಸ್. ನಿಸಾರ್‌ಅಹಮದ್‌, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಎಂ. ಗೋಪಾಲಕೃಷ್ಣ ಅಡಿಗ, ಡಿವಿಜಿ, ಬಿ.ಆರ್‌. ಲಕ್ಷ್ಮಣರಾವ್‌, ಸಂತ ಶಿಶುನಾಳ ಷರೀಫ, ಟಿ.ಪಿ. ಕೈಲಾಸಂ, ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಚಿ. ಉದಯಶಂಕರ್‌, ಋಷಿ, ಜಯ ಸುದರ್ಶನ, ಸೋಸಲೆ ಗಂಗಾಧರ್‌, ಗೋವಿಂದಸ್ವಾಮಿ ಗುಂಡಾಪುರ ಅವರು ರಚಿಸಿದ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಭಾವಗೀತೆ, ಕವಿತೆಗಳನ್ನು ಪ್ರಸ್ತುತಪಡಿಸಲಾಯಿತು.

ಗಾಯಕ ಆರ್‌. ಲಕ್ಷ್ಮಣ್‌ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ಎ.ಡಿ. ಶ್ರೀನಿವಾಸ್‌, ರಾಜೇಶ್‌ಪಡಿಯಾರ್‌, , ಎಸ್‌. ಅಮರ್‌, ಅಶ್ವಿನ್‌ಅತ್ರಿ, ಎನ್‌. ಬೆಟ್ಟೇಗೌಡ, ಶ್ರೀಧರ್‌, ಜಾಯ್ಸ್‌ವೈಶಾಕ್‌, ಡಾ.ಪೂರ್ಣಿಮಾ, ಡಾ. ಸುಮಾ, ಪುಷ್ಪಲತಾ ಶಿವಕುಮಾರ್‌, ಶುಭಾ ಪಲ್ಲವಿ, ವೇದಶ್ರೀ ಅವರು ಹಾಡಿದರು.

ಕೀ ಬೋರ್ಡ್‌ನಲ್ಲಿ ಪುರುಷೋತ್ತಮ್‌, ರಿದಂ ಪ್ಯಾಡ್‌ನಲ್ಲಿ ರಾಘವೇಂದ್ರ ಪ್ರಸಾದ್‌, ತಬಲದಲ್ಲಿ ಇಂದು ಶೇಖರ್‌, ಮ್ಯಾಂಡೋಲಿನ್‌ನಲ್ಲಿ ವಿಶ್ವನಾಥ್‌, ಕೊಳಲಿನಲ್ಲಿ ಪುನೀತ್‌ ಸಾಥ್‌ನೀಡಿದರು.

ಉಪೇಂದ್ರಕುಮಾರ್‌, ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್‌, ವಿಜಯಭಾಸ್ಕರ್‌, ಶ್ರೀಮಧುರಾ, ರಾಜು ಅನಂತಸ್ವಾಮಿ, ರಂಗರಾವ್‌, ಎಂ.ಎಸ್‌. ಮಾರುತಿ, ಆರ್‌ಸುದರ್ಶನಂ, ವಿ. ಮನೋಹರ್‌, ಕೆ. ಯುವರಾಜ್‌, ಹಂಸಲೇಖ, ರಾಜನ್‌ನಾಗೇಂದ್ರ ಸಂಗೀತ ಸಂಯೋಜಿಸಿರುವ ಹಾಗೂ ಸಿ. ಅಶ್ವತ್ಥ್‌., ಮೈಸೂರು ಅನಂತಸ್ವಾಮಿ, ಡಾ. ರಾಜಕುಮಾರ್‌, ಪಿ.ಬಿ. ಶ್ರೀನಿವಾಸ್‌, ಎಸ್‌. ಜಾನಕಿ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ರತ್ನಮಾಲಾ ಪ್ರಕಾಶ್‌, ರಾಜೇಶ್‌ಕೃಷ್ಣನ್‌, ಸುನಿತಾ ಅನಂತಸ್ವಾಮಿ, ಎಂ.ಡಿ. ಪಲ್ಲವಿ, ಅಪೂರ್ವ ಶ್ರೀಧರ್‌, ರಾಜು ಅನಂತಸ್ವಾಮಿ, ಬಿ.ಆರ್‌ .ಛಾಯಾ, ಆರ್‌. ಸುದರ್ಶನಂ, ಅನನ್ಯ ಭಟ್‌, ಸುಪ್ರಿಯಾ ಆಚಾರ್ಯ, ಜಯಚಂದ್ರ, ಕೆ.ಜೆ. ಯೋಸುದಾಸ್‌, ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್‌ ಚಂದ್ರ ಅವರು ಹಾಡಿರುವ ಸುಮಾರು 32 ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿದರು.

ಯಾವ ಮೋಹನ ಮುರಳಿ ಕರೆಯಿತೋ, ದೀಪವು ನಿನ್ನದೇ ಗಾಳಿಯು ನಿನ್ನದೇ, ಎಲ್ಲಿ ಜಾರಿತೋ ಮನವು, ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ, ನಿನ್ನ ಪ್ರೇಮದ ಪರಿಯ. ಒಳಿತು ಮಾಡು ಮನುಸ, ಇಳಿದು ಬಾ ತಾಯೇ ಇಳಿದು ಬಾ, ಅಮ್ಮ ನಿನ್ನ ಎದೆಯಾಳದಲ್ಲಿ, ಹೇ ಭುವಿ ನೀ ಧನ್ಯಳಾದೆ, ಕೊಡಗಾನ ಕೋಳಿ ನುಂಗಿತ್ತಾ, ತರವಲ್ಲ ತಗೀ ನಿನ್ನ ತಂಬೂರಿ, ದೋಣಿ ಸಾಗಲಿ ಮುಂದೆ ಹೋಗಲಿ, ಸೋರುತಿಹುವುದು ಮನೆಯ ಮಾಳಿಗಿ, ಬಾ ಇಲ್ಲಿ ಸಂಭವಿಸು, ಎಲ್ಲೋ ಹುಡುಕಿದೆ ಇಲ್ಲದ ದೇವರ, ಸೋಜುಗಾದ ಸೂಜಿ ಮಲ್ಲಿಗೆ, ಕೋಲುಮಂಡೆ ಜಂಗಮದೇವ, ಒಂದಿರುಳು ಕನಸಿನಲ್ಲಿ, ಕಾಣದ ಕಡಲಿಗೆ, ಭಾಗ್ಯದ ಬಳೆಗಾರ, ತೇರ ಏರಿ ಅಂಬರದಾಗೆ- ಇವೇ ಮೊದಲಾದ ಗೀತೆಗಳಿಗೆ ಕಿಕ್ಕಿರಿದ ನೆರೆದಿದ್ದ ಸಭಿಕರಿಂದ ದೀರ್ಘ ಕರತಾಡನದ ಮೂಲಕ ಅಪಾರ ಮೆಚ್ಚುಗೆ ವ್ಯಕ್ತವಾಯಿತು.ಮೇ 10-11 ಮೈಸೂರಿನಲ್ಲಿ ರಂದು ಸುಗಮ ಸಂಗೀತ ಸಮ್ಮೇಳನ

ಕನ್ನಡಪ್ರಭ ವಾರ್ತೆ ಮೈಸೂರು

ಮುಂದಿನ ಮೇ 10-11 ರಂದು ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ ನಡೆಯಲಿದೆ.

ನಾದಬ್ರಹ್ಮ ಸಭಾದಲ್ಲಿ ಬುಧವಾರ ನಡೆದ ಭಾವತರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ ಈ ವಿಷಯ ಪ್ರಕಟಿಸಿದರು.

ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯಲಾಗಿದೆ. ಕಲಾಮಂದಿರದಲ್ಲಿ ಅಲ್ಲದೇ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ದೊಡ್ಡ ದೊಡ್ಡ ಕಲಾವಿದರನ್ನು ಕರೆಸಿ, ಎರಡು ದಿನಗಳ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಕಾಪಿರೈಟ್‌ ಹೆಸರಿನಲ್ಲಿ ಕೆಲವರು ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡದಂತೆ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು. ಕ್ರಿಮಿನಲ್‌ಗಳು ಮಾತ್ರ ಈ ರೀತಿ ಮಾಡಲು ಸಾಧ್ಯ. ಇದಕ್ಕೆ ಜಗ್ಗದೇ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕಾರ್ಯಕ್ರಮಗಳಿಗೆ ಜನ ಬೆಂಬಲ ಇದೆ ಎಂಬುದಕ್ಕೆ ಇಡೀ ಸಭಾಂಗಣ ಕಿಕ್ಕಿರಿದು ತುಂಬಿರುವುದೇ ನಿದರ್ಶನ ಎಂದು ಅವರು ಮೆಚ್ಚುಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌