ಶಿವಮೊಗ್ಗ: ಮನುಷ್ಯನ ನಾಗರಿಕತೆ ಹುಟ್ಟಿರುವುದೇ ನದಿ ಪಾತ್ರದಲ್ಲಿ ಹಾಗಾಗಿ ಪ್ರಕೃತಿ ದತ್ತವಾಗಿ ಬಂದಂತಹ ಗಾಳಿ, ಬೆಳಕು ಹಾಗೂ ನೀರನ್ನು ಮುಂದಿನ ಪೀಳಿಗೆಗೆ ಜಾಗೃತಿಯಾಗಿ ಸಾಗಿಸುವ ಜವಾಬ್ದಾರಿ ನೆಮ್ಮಲ್ಲರ ಮೇಲಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಗಂಗಾ ಸ್ನಾನ- ತುಂಗಾ ಪಾನ, ಶುದ್ಧ ನೀರು ನಮ್ಮೆಲ್ಲರ ಹಕ್ಕು, ಶುದ್ಧ ನೀರು ಕುಡಿಯದ ದೇಹ ಬದುಕುವುದೇ ಸಂದೇಹ, ಶುದ್ಧ ನೀರು ಸ್ವಚ್ಛತೆಯ ಸಂಕೇತ, ನದಿಗಳನ್ನು ಕಾಪಾಡಿ ಎಂಬ ಘೋಷಣೆಯ ಭಿತ್ತಿಪತ್ರ ಹಿಡಿದು ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಪರಿಸರವಾದಿ ಬಿ.ಎಂ.ಕುಮಾರಸ್ವಾಮಿ, ಆರ್.ಎಸ್.ಎಸ್. ಮುಖಂಡ ಪಟ್ಟಾಭಿರಾಮ್, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ ಇದ್ದರು.ರಾಜ್ಯ ಸರ್ಕಾರ ನದಿಗಳ ರಕ್ಷಣೆಗೆ ಕಾನೂನಿನ ಬಲ ನೀಡಬೇಕು
ಶಿವಮೊಗ್ಗ: ತುಂಗಭದ್ರಾ ನದಿಗಳ ರಕ್ಷಣೆಗೆ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ. ಆದರೆ, ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಕಾನೂನಿನ ಬಲ ನೀಡಬೇಕಿದೆ ಎಂದು ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.ನಗರದ ಕೋರ್ಪಲಯ್ಯನ ಛತ್ರ ಮಂಟಪದಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ವತಿಯಿಂದ ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ‘ತುಂಗಾ ಆರತಿ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ನದಿ ಮಲೀನಗೊಳ್ಳುವುದನ್ನು ತಡೆಯಬೇಕಾದರೆ, ಅದಕ್ಕೆ ಕೃಷಿಯ ಮೂಲಕ ಸೇರುತ್ತಿರುವ ರಾಸಾಯನಿಕವನ್ನೂ ನಿಯಂತ್ರಿಸಬೇಕು. ನದಿ ಪಾತ್ರದಲ್ಲಿ ಮರಗಳ ರಕ್ಷಣೆ ಆಗಬೇಕು. ಭೂಮಿಗೆ ನೀರು ಇಂಗಿಸುವ ಮರಗಳನ್ನು ನೆಟ್ಟು ಕಾಪಾಡಬೇಕು ಎಂದು ಸಲಹೆ ನೀಡಿದರು.ನೀರಿನ ಸೆಲೆಗಳನ್ನು ರಕ್ಷಿಸಬೇಕಾದರೆ ಪೂರಕ ಕಾನೂನುಗಳನ್ನು ಮಾಡಬೇಕು. ಅದು ಸರಕಾರದಿಂದ ಮಾತ್ರ ಸಾಧ್ಯ. ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಸರಕಾರವನ್ನೇ ಮೋಸ ಮಾಡುವ ಮನಸ್ಥಿತಿ ಜನರಲ್ಲಿದ್ದು, ಅದೂ ಬದಲಾಗಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಶಂಕರ್, ವಿವೇಕ್ ತ್ಯಾಗಿ, ಪುಷ್ಪಾವತಿ, ಆರ್.ಕೆ.ಸಿದ್ದರಾಮಣ್ಣ, ಎಚ್.ಸಿ.ಯೋಗೇಶ್ ಇತರರಿದ್ದರು.