ಪ್ರಕೃತಿಗೆ ನಾವು ಅನಿವಾರ್ಯವಲ್ಲ: ಮಾಂತೇಶ ಕುಂಬಾರ

KannadaprabhaNewsNetwork |  
Published : Jun 11, 2026, 01:15 AM IST
ಬನವಾಸಿ ಸಮೀಪದ ಕಂತ್ರಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ಪ್ರಕೃತಿಗೆ ನಾವು ಅನಿವಾರ್ಯವಲ್ಲ, ನಮಗೆ ಪಕೃತಿ ಅನಿವಾರ್ಯ ಎಂಬ ಸತ್ಯವನ್ನು ಅರಿತು ನಡೆಯೋಣ.

ಕಂತ್ರಾಜಿ ಶಾಲೆಯಲ್ಲಿ ಪರಿಸರ ದಿನಾಚರಣೆ, ವಿವಿಧ ಹಣ್ಣಿನ ಗಿಡ ನೆಟ್ಟ ಗಣ್ಯರುಕನ್ನಡಪ್ರಭ ವಾರ್ತೆ ಬನವಾಸಿಪ್ರಕೃತಿಗೆ ನಾವು ಅನಿವಾರ್ಯವಲ್ಲ, ನಮಗೆ ಪಕೃತಿ ಅನಿವಾರ್ಯ ಎಂಬ ಸತ್ಯವನ್ನು ಅರಿತು ನಡೆಯೋಣ. ಪರಿಸರದ ಸಂರಕ್ಷಣೆ ಹಾಗೂ ಸಂವರ್ಧನೆಗೆ ನಾವು ಬದ್ಧರಾಗಿ ಬದುಕೋಣ ಎಂದು ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಾಂತೇಶ ಕುಂಬಾರ ಹೇಳಿದರು.

ಸಮೀಪದ ಕಂತ್ರಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬನವಾಸಿ ವಲಯದಿಂದ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಗಿಡ-ಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನಾ ಉಪಾಧ್ಯಕ್ಷ ಸುಧೀರ ನಾಯರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳ ಮಾರಣಹೋಮ ನಡೆಯುತ್ತಿದೆ. ಪ್ರತಿಯೊಬ್ಬರೂ ಹುಟ್ಟಿದ ದಿನದಂದು ಗಿಡ ನೆಟ್ಟು ಪೋಷಿಸಬೇಕು. ಶುಭ ಸಮಾರಂಭಗಳಲ್ಲಿ ಉಡುಗೊರೆಗಳ ಬದಲಾಗಿ ಗಿಡಗಳನ್ನು ನೀಡುವುದರಿಂದ ಪರಿಸರವನ್ನು ಉಳಿಸಬಹುದು ಎಂದರು.

ಶಿಕ್ಷಕ ಪ್ರಸನ್ನ ಕುಮಾರ್ ಮಾತನಾಡಿ, ಪರಿಸರದ ಬಗ್ಗೆ ಅರಿವಿದ್ದರೆ ಸಾಲದು. ಪ್ರಜ್ಞೆ, ಕಾಳಜಿಯೂ ಇರಬೇಕು, ನಾವು ಬದುಕುವ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಂಜುಂಡ ಗೌಡ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ಶಾಲಾ ಆವರಣದಲ್ಲಿ ಗಣ್ಯರು ವಿವಿಧ ಹಣ್ಣಿನ ಗಿಡ ನೆಟ್ಟು ನೀರೆರೆದರು. ಶಾಲಾ ಶಿಕ್ಷಕಿಯರಾದ ಜ್ಯೋತಿ ಪಟಗಾರ, ಖುದ್ಸಿಯಾ ಆಫ್ರೀನ್, ಸಿಎಸ್‌ಸಿ ಸೇವಾದಾರರಾದ ಸುಮಾ ಇದ್ದರು. ಬನವಾಸಿ ವಲಯ ಮೇಲ್ವಿಚಾರಕಿ ಸುನಂದಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಹೆಗಡೆ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಿವಾಜಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು
ಗೋಣಿಕೊಪ್ಪ: ಬಿಜೆಪಿ ವಿರಾಜಪೇಟೆ ಮಂಡಲ ಕಚೇರಿ ಲೋಕಾರ್ಪಣೆ