ಕನ್ನಡಪ್ರಭ ವಾರ್ತೆ ಕೋಲಾರತಾಲೂಕು ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಳ್ಳಿ, ಕೋಟಿಗಾನಹಳ್ಳಿ, ಅಬ್ಬಣಿ, ಅರಳಕುಂಟೆ ಗ್ರಾಮಗಳ ಜಂಟಿ ಸರ್ವೆ ಕಾರ್ಯ ಮುಗಿದಿದ್ದು ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ಬರಲಿದೆ ಎಂದು ಸಂಸದ ಮಲ್ಲೇಶ್‌ಬಾಬು ತಿಳಿಸಿದರು. ಸುಮಾರು ಆರು ತಿಂಗಳಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು. ಈ ವಿಚಾರವಾಗಿ ದಿಶಾ ಸಭೆಯಲ್ಲಿ ರೈತರ ಪರವಾಗಿ ಬಂಗಾರಪೇಟೆ ಶಾಸಕರು ಮುಳಬಾಗಿಲು ಶಾಸಕರು ಮಾಲೂರು ಶಾಸಕರು ಕೋಲಾರ ಶಾಸಕರು ಶ್ರೀನಿವಾಸಪುರ ಶಾಸಕರು ಹಾಗೂ ಎಂಎಲ್ಸಿಗಳು ಒಳಗೊಂಡಂತೆ ಒಕ್ಕರಳಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸರ್ಕಾರಿ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿಕೊಂಡಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಅರಣ್ಯಕ್ಕೆ ಗೋಮಾಳ ಜಮೀನಿ
ಒಕ್ಕಲಿನಿಂದ ಮತ್ತೊಮ್ಮೆ ಜಂಟಿ ಸರ್ವೆ ಮಾಡಿ ಅರಣ್ಯ ಭೂಮಿ ಯಾವುದು ರೈತರ ಭೂಮಿಗಳು ಯಾವುದು ಎಂಬುದನ್ನು ಕೂಲಂಕುಶವಾಗಿ ಅಳತೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ ನೀಡುವಂತೆ ಜಿಲ್ಲಾ ಭೂ ದಾಖಲೆಗಳ ಅಧಿಕಾರಿಗಳಿಗೆ ಆದೇಶ ನೀಡಿದ್ದು ಅದರಂತೆ ಜಂಟಿ ಸರ್ವೆ ಕಾರ್ಯ ಮುಗಿದಿದೆ ಆದರು ಸಹ ರೈತರು ನೀವು ಪ್ರತಿನಿತ್ಯ ಅಧಿಕಾರಿಗಳನ್ನು ಶಾಸಕರನ್ನು ಹಾಗೂ ನನ್ನನ್ನು ಭೇಟಿ ಮಾಡಿ ತಮ್ಮ ತೊಂದರೆಗಳನ್ನು ಹೇಳಿಕೊಂಡಿದ್ದೀರಿ ನಿಮಗೆ ಒಳ್ಳೆಯದಾಗುತ್ತೆ ರೈತರ ಪರವಾಗಿ ನಾವೆಲ್ಲ ಇದ್ದೇವೆ ಎಂಬ ಭರವಸೆ ನೀಡಿದರು.ರೈತ ಮುಖಂಡರಾದ ಆರ್.ಶ್ರೀನಿವಾಸನ್, ಹರಟಿ ಪ್ರಕಾಶ್, ವೆಂಕಟರಣಪ್ಪ, ವೆಂಕಟಸ್ವಾಮಿ, ಮಂಜುನಾಥ, ಶ್ರೀನಿವಾಸ ಇದ್ದರು.