ವಿಶ್ವದಲ್ಲೇ ಬಲಿಷ್ಠ ಸಂವಿಧಾನ ನಮ್ಮ ಹೆಗ್ಗಳಿಕೆ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Apr 15, 2025, 12:54 AM IST
ಹಾನಗಲ್ಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಮ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಶ್ರೀನಿವಾಸ್ ಮಾನೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಶೋಷಿತ ಸಮಾಜದ ಉನ್ನತಿ, ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ.

ಹಾನಗಲ್ಲ: ಧ್ವನಿ ಇಲ್ಲದವರ ಧ್ವನಿಯಾಗಿ, ವಿಶ್ವದಲ್ಲಿಯೇ ಬಲಿಷ್ಠ ಸಂವಿಧಾನ ಭಾರತಕ್ಕೆ ನೀಡಿ, ವಿಭಿನ್ನ ಸಂಸ್ಕೃತಿ ಭಾಷೆಗಳ ನಡುವಿನ ದೇಶಕ್ಕೆ ಸಮಾನತೆ ಹಾಗೂ ಶಾಂತಿದೂತನಾಗಿ ಅಪ್ರತಿಮ ಸೇವೆ ಸಲ್ಲಿಸಿದ ಡಾ. ಬಿ.ಆರ್. ಅಂಬೇಡ್ಕರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರು ಭಾರತದ ಹೆಮ್ಮೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಸೋಮವಾರ ಹಾನಗಲ್ಲಿನ ಡಾ. ಬಿ.ಆರ್. ಅಂಬೇಡ್ಕರ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೇ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಸಮಾನತೆಯನ್ನು ತರುವ ಮೂಲಕ ಈ ಇಬ್ಬರೂ ಮಹಾತ್ಮರಿಗೆ ಗೌರವ ಸಲ್ಲಿಸಬೇಕಾಗಿದೆ. ಶೋಷಿತ ಸಮಾಜದ ಉನ್ನತಿ, ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ದೇಶದಲ್ಲಿ ಮುಂದೆಂದೂ ಅಸ್ಪೃಶ್ಯತೆಗೆ ಅವಕಾಶವಾಗಬಾರದು. ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸಿವೆ. ನಮ್ಮ ಒಗ್ಗಟ್ಟೂ ಗಟ್ಟಿಯಾಗಬೇಕು. ಯುವಪೀಳಿಗೆ ಇದನ್ನು ಅರ್ಥೈಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಸಂಚಿಗೆ ನಾವು ಬಲಿಯಾಗುವುದು ಬೇಡ. ಸಮರ್ಥ ಯುವ ಜನಾಂಗದ ಮೂಲಕ ಸಮರ್ಥ ಭಾರತ ಕಟ್ಟೋಣ ಎಂದರು.ತಾಲೂಕು ಪಂಚಾಯಿತಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿಯ ಬಳಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಅವರು ಡಾ. ಬಿ.ಆರ್. ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವ ಬಿಂಬಗಳ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ ಭವನ ತಲುಪಿತು. ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ತಹಸೀಲ್ದಾರ್ ಎಸ್. ರೇಣುಕಾ, ಹನುಮಂತಪ್ಪ ಯಳ್ಳೂರ, ಜಗದೀಶ ಹರಿಜನ, ವಿಜಯಕುಮಾರ ದೊಡ್ಡಮನಿ, ಪರಶುರಾಮ ಹುಳ್ಳೀಕಾಸಿ, ಉಮೇಶ ಮಾಳಗಿ, ಹುನುಮಂತಪ್ಪ ಕೋಣನಕೊಪ್ಪ, ಪುಟ್ಟಪ್ಪ ನರೇಗಲ್ಲ, ಎಂ.ಎನ್. ಕಾಳೇರ, ಕೊಟ್ರಪ್ಪ ಕುದರಿಸಿದ್ದನವರ, ಶಿವಾನಂದ ಭಜಂತ್ರಿ, ರಾಜೇಶ ಚವ್ಹಾಣ, ರಾಜೇಶ ಮಡ್ಲೂರ, ಗುರುನಾಥ ಗವಾಣಿಕರ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಜಿ.ಬಿ. ಹಿರೇಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಹೊನ್ನಪ್ಪ ಭೋವಿ, ಎಚ್.ಎಸ್. ಬಾರ್ಕಿ ಮಾತನಾಡಿದರು.

ಬಾಲಚಂದ್ರ ಅಂಬಿಗೇರ ಹಾಗೂ ಸಂಗಡಿಗರು ಹಾಗೂ ನಿಖಿತಾ ಮಾಳಗಿ ಪ್ರಾರ್ಥನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಗೀತೆ ಹಾಡಿದರು. ಜಿ.ಬಿ. ಹಿರೇಮಠ ಸ್ವಾಗತಿಸಿದರು. ಸಿದ್ದು ಗೋರಣ್ಣನವರ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ