ಸರ್ಕಾರದಿಂದ ಎಲ್ಲಾ ಕಾರ್ಯ ನಿರೀಕ್ಷಿಸಲು ಸಾಧ್ಯವಿಲ್ಲ

KannadaprabhaNewsNetwork |  
Published : May 23, 2026, 01:45 AM IST
21 ಟಿವಿಕೆ 1 - ತುರುವೇಕೆರೆ ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಟ್ರಸ್ಟ್ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ವಜನಿಕರಿಗೆ ಸಹಕಾರಿಯಾಗಿರಬೇಕೆಂದು ನಿರೀಕ್ಷಿಸುವುದು ಸಾಧುವಲ್ಲ ಎಂದು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ತುರುವೇಕೆರೆ

ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ವಜನಿಕರಿಗೆ ಸಹಕಾರಿಯಾಗಿರಬೇಕೆಂದು ನಿರೀಕ್ಷಿಸುವುದು ಸಾಧುವಲ್ಲ ಎಂದು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ರೋಟರಿ ಟ್ರಸ್ಟ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಸರ್ಕಾರದ ಕಣ್ಣಿಗೆ ಬೀಳದ ನೂರಾರು ಸೇವಾ ಕಾರ್ಯಗಳನ್ನು, ಯೋಜನೆಗಳನ್ನು ಟ್ರಸ್ಟ್ ಗಳು, ಸಂಘ ಸಂಸ್ಥೆಗಳು ತಾಲೂಕಿನಲ್ಲಿ ಮಾಡುತ್ತಿವೆ. ಸರ್ಕಾರ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗೂ ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಿ ಎಂದು ಕೂರುವುದು ಸರಿಯಲ್ಲ. ಸಮಾಜದಲ್ಲಿ ಸುಸ್ಥಿರ ಕಾಪಾಡುವ ಸಾಮಾಜಿಕ ಕೆಲಸಗಳನ್ನು ಪ್ರತಿಯೊಬ್ಬರು ಮಾಡಬಹುದು. ಅದನ್ನು ತನ್ನ ಕರ್ತವ್ಯ ಎಂದು ಭಾವಿಸಬೇಕು. ಪಟ್ಟಣದಲ್ಲಿ ರೋಟರಿ ಟ್ರಸ್ಟ್ ಪ್ರಾರಂಭವಾಗಿ ಕೆಲವೇ ವರ್ಷಗಳು ಸಂದಿದೆ. ಈಗಾಗಲೇ ಹಲವು ರೀತಿಯ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡು ತಾಲೂಕಿನಲ್ಲಿ ಹೆಸರುವಾಸಿಯಾಗಿದೆ. ತಾಲೂಕಿನಾದ್ಯಂತ ಆರೋಗ್ಯ ಸೇವೆ ಜೊತೆಗೆ ಶಾಶ್ವತ ಯೋಜನೆಗಳನ್ನು ಸಮಾಜಕ್ಕೆ ನೀಡಲು ಎಲ್ಲಾ ರೋಟರಿ ಟ್ರಸ್ಟ್ ನ ಪದಾದಿಕಾರಿಗಳ ಸಹಕಾರ ಅಗತ್ಯ ಎಂದು ತಿಳಿಸಿದರು.ರೋಟರಿ ಟ್ರಸ್ಟ್ ನೂತನ ಅಧ್ಯಕ್ಷ ಸಾ.ಶಿ.ದೇವರಾಜು ಮಾತನಾಡಿ ರೋಟರಿ ಕ್ಲಬ್ ಪ್ರಾರಂಭವಾಗಿ 12 ವರ್ಷಗಳು ಸಂದಿದೆ. ಅಂದಿನಿಂದಲೂ ನೂರಾರು ಸೇವಾ ಕಾರ್ಯ ಮಾಡಿಕೊಂಡು ಬರುತ್ತಿದೆ. ರೋಟರಿ ಕುಟುಂಬದ ಜೊತೆ ಟ್ರಸ್ಟ್ ಜೊತೆಗೂಡಿ ಉತ್ತಮವಾದ ಸಮಾಜ ಸೇವೆಯನ್ನು ಮಾಡಲು ಪಣ ತೊಡಬೇಕಿದೆ. ರೋಟರಿ ಭವನದಲ್ಲಿ 2 ಅಂತಸ್ತು ನಿರ್ಮಿಸಲಾಗಿದೆ. ಮೂರನೇ ಅಂತಸ್ತು ನಿರ್ಮಿಸುವ ಯೋಜನೆ ಇದೆ. ದಾನಿಗಳು, ರೋಟರಿ ಕ್ಲಬ್ ಸದಸ್ಯರುಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ರೋಟರಿ ಟ್ರಸ್ಟ್ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಗುಪ್ತ ವಹಿಸಿದ್ದರು. ರೋಟರಿ ಕ್ಲಬ್ ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ಇನ್ನರ್ ವೀಲ್ ಸಂಕಲ್ಪ ಅಧ್ಯಕ್ಷೆ ಇಂದಿರಾ ಪ್ರಭಾಕರ್, ರೋಟರಿ ಟ್ರಸ್ ಉಪಾಧ್ಯಕ್ಷ ಕೆ.ಸಿ.ಜಯರಾಮ್, ಕಾರ್ಯದರ್ಶಿ ಗ್ಯಾಸ್ ಪ್ರಭು ಸ್ವಾಮಿ, ಖಜಾಂಚಿ ಗಂಗಾಧರ್, ನಿರ್ದೇಶಕರಾದ ಡಾ.ಚೇತನ್, ಎಸ್.ಎಲ್.ಎನ್.ರಾಜಣ್ಣ, ರಾಜಪ್ಪ, ತುಕಾರಾಮ್, ಗಿರೀಶ್, ಶಿವರಾಜು, ತ್ರಿಜಯ್ ಸೇರಿದಂತೆ ರೋಟರಿಕ್ಲಬ್ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಬೀಜ, ಗೊಬ್ಬರ ಮಾರಾಟ ಮಾಡಿದರೆ ಕಾನೂನು ಕ್ರಮ: ಡಿಸಿ
ಧಾರವಾಡ ಪ್ರತ್ಯೇಕ ಪಾಲಿಕೆಗೆ 7 ದಿನದ ಗಡುವು!