ಮಂಗಳೂರು: ‘ನಮ್ಮವರು’ ವಿಪ್ರಕೂಟ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಕುಟುಂಬದೊಂದಿಗೆ ಜೊತೆಗೂಡಿ ಶಿಕಾರಿಪುರ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ವಿಷ್ಣು ಸಹಸ್ರನಾಮ ಪಠಣ, ಪುಷ್ಪಾರ್ಚನೆ ಸಹಿತ ಯುಗಾದಿಯ ಮಹಾಪೂಜೆಯನ್ನು ಮಂಗಳೂರಿನ ಕರಂಗಲ್ಪಾಡಿಯ ಶ್ರೀ ಸುಬ್ರಹ್ಮಣ್ಯ ಸಭಾಂಗಣದಲ್ಲಿ ಭಾನುವಾರ ಆಚರಿಸಲಾಯಿತು.
ಸ್ಪಂದನಾ ವೆಂಕಟೇಶ್ ಪ್ರಸಾದ್ ರಿಂದ ಗಾಯನ, ಶ್ರೀ ಲಕ್ಷ್ಮಿ, ಶ್ರೀ ಗೌರಿ, ಮತ್ತು ಧಾತ್ರಿ ಮಾಧವರಿಂದ ಭಗವದ್ಗೀತೆ ಪಠಣ ನೆರವೇರಿತು.ಶ್ರೀಶಾ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಕುಟುಂಬಕ್ಕೆ ಒಂದರಂತೆ ಪಂಚಾಂಗವನ್ನು ಉಚಿತವಾಗಿ ಸೊಸೈಟಿಯ ಅಧ್ಯಕ್ಷರು ಮತ್ತು ನಮ್ಮವರು ಸಂಘದ ಉಪಾಧ್ಯಕ್ಷ ಗುರುರಾಜ್ ಎಂ. ಎಸ್. ವಿತರಿಸಿದರು. ಸಂಘದ ಅಧ್ಯಕ್ಷ ಸಂಜಯ್ ಕಾರಂತ್ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಎಸ್.ಮಾಧವ ಶಿವಮೊಗ್ಗ ವಂದಿಸಿದರು. ಖಜಾಂಚಿ ವೆಂಕಟೇಶ್ ಪ್ರಸಾದ್ ನಿರೂಪಿಸಿದರು.ಸಂಘದ ಉಪಾಧ್ಯಕ್ಷೆ ಸಂಜನಾ ಮೂರ್ತಿ, ಸಹ ಕಾರ್ಯದರ್ಶಿಗಳಾದ ನೇತ್ರಾ ಕುಮಾರ್, ಅನಿಲ್ ಶಾಸ್ತ್ರಿ, ಶ್ರೀಧರ ಹಾಗೂ ಹಿರಿಯ ಸದಸ್ಯರಾದ ಡಾ. ಶ್ರೀನಿವಾಸ್, ಡಾ. ಮುರಳೀಧರ್ ಇದ್ದರು.