ನಮ್ಮಲ್ಲಿ ಗುಂಪು ಗಾರಿಕೆ ಇಲ್ಲ: ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork |  
Published : Feb 18, 2026, 01:15 AM IST
ಸಿಕೆಬಿ-4 ನಗರ ಹೊರವಲಯದ ಅಗಲಗುರ್ಕಿ ರಾ.ಹೆ.44ರ ಬಳಿ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ನಡೆಯಲಿರುವ ಪ್ರತಿಭಟನಾ ಸ್ಥಳವನ್ನು ಶಾಸಕ ಪ್ರದೀಪ್ ಈಶ್ವರ್ ಪರಿಶೀಲಿಸಿದರು | Kannada Prabha

ಸಾರಾಂಶ

ಅಧ್ಯಯನಕ್ಕೆ ಅಂತ ಶಾಸಕರು ವಿದೇಶಿ ಪ್ರವಾಸ ತೆರಳುತ್ತಿದ್ದಾರೆ. ಆ ಗುಂಪು ಈ ಗುಂಪು ಅನ್ನೋ ಭೇದಭಾವವಿಲ್ಲ. ಯಾರು ಬೇಕಾದರೂ ಈ ಅಧ್ಯಯನ ಪ್ರವಾಸಕ್ಕೆ ಹೋಗಬಹುದಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಧ್ಯಯನಕ್ಕೆಂದು ವಿದೇಶಕ್ಕೆ ಶಾಸಕರು ಇಲಾಖೆಯಿಂದ ಅಧ್ಯಯನ ಪ್ರವಾಸ ಹೋಗುತ್ತಿದ್ದಾರೆ ಅಷ್ಟೇ ವಿನಹಃ ನಮ್ಮಲ್ಲಿ ಗುಂಪುಗಾರಿಕೆ ಇಲ್ಲಾ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರ ಹೊರವಲಯದ ಅಗಲಗುರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರ ಬಳಿ ಮಂಗಳವಾರ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ಫೆ. 23ರಂದು ನಡೆಯುವ ಬೃಹತ್ ಹೋರಾಟದ ವೇದಿಕೆ ಸ್ಥಳವನ್ನು ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಯನಕ್ಕೆ ಅಂತ ಶಾಸಕರು ವಿದೇಶಿ ಪ್ರವಾಸ ತೆರಳುತ್ತಿದ್ದಾರೆ. ಆ ಗುಂಪು ಈ ಗುಂಪು ಅನ್ನೋ ಭೇದಭಾವವಿಲ್ಲ. ಯಾರು ಬೇಕಾದರೂ ಈ ಅಧ್ಯಯನ ಪ್ರವಾಸಕ್ಕೆ ಹೋಗಬಹುದಿತ್ತು. ಹೋಗಿದ್ದಾರೆ ಅಷ್ಟೇ , ಇದೇ ವೇಳೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಲ್ಪ- ಸ್ವಲ್ಪ ಚರ್ಚೆಯಾಗುತ್ತಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರಬಹುದು ಅಷ್ಟೇ ಹೊರತು, ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರು ಚೆನ್ನಾಗಿದ್ದಾರೆ ಎಂದರು.

ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನದ ಅಸಿಂಧು ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಕೊರತೆ ಇದೆ. ಅವರು ಮುಂದೆ ನ್ಯಾಯಾಲಯದ ಮೆಟ್ಟಿಲನ್ನು ಏರುವ ನಿರೀಕ್ಷೆಯಲ್ಲಿ ಇದ್ದಾರೆ. ಸುಬ್ಬಾರೆಡ್ಡಿ ಅವರಿಗೆ ನೈತಿಕ ಬೆಂಬಲವನ್ನು ನಾವು ಸೂಚಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು,ವಿಶ್ವದಲ್ಲೇ ಅತಿ ಹೆಚ್ಚು ಮುನ್ನೆಲೆಗೆ ಬಂದಿರುವ ಎಪ್‌ಸ್ಟೀನ್‌ ಫೈಲ್ ಬಗ್ಗೆ ನಮ್ಮ ದೇಶದ ಗೌರವಾನ್ವಿತ ಪ್ರಧಾನಿಗಳ ಹೆಸರು ಇರುವುದು ನಾಚಿಕೆಗೇಡಿನ ಸಂಗತಿ. ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಬೇಕು. ಇದರ ವಿರುದ್ಧವು ನಮ್ಮ ಧ್ವನಿಯನ್ನು ಸದಾ ಎತ್ತುತ್ತಲೆ ಇರುತ್ತವೆ. ನನಗೂ ಸಚಿವ ಆಗಬೇಕು ಎಂದು ಆಸೆ ಇದೆ. ನಂದಿಯ ಆ ಭೋಗ ನಂದೀಶ್ವರ ಕೃಪೆ ಇದ್ದರೆ ಈಶ್ವರ ಸಚಿವನಾಗುತ್ತಾನೆ. ಅದು ನಮ್ಮ ವರಿಷ್ಠರಿಗೆ ಬಿಟ್ಟಿರುವುದು, ಯಾವ ಕೆಲಸ ಕೊಟ್ಟರು ನಾನು ನಿಷ್ಠೆಯಿಂದ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಯೂಥ್ ಕಾಂಗ್ರೆಸ್ ಮುಖಂಡ ನಾಗೇಶ್, ಮಾಜಿ ಶಾಸಕರಾದ ಶಿವಾನಂದ್, ಅನುಸೂಯಮ್ಮ, ಮುಖಂಡರಾದ ಗಂಗಾರೆಕಾಲುವೆ ನಾರಾಯಣ ಸ್ವಾಮಿ, ಅಡ್ಡಗಲ್ ಶ್ರೀಧರ್, ಸುಧಾ ವೆಂಕಟೇಶ್ ರವರು, ಪುರದ ಗಡ್ಡೆ ಮುನೇಗೌಡ,ಪೆದ್ದಣ್ಣ, ಜಿ.ಉಮೇಶ್, ವಿನಯ್ ಬಂಗಾರಿ , ನಗರ ಸಭೆ ಸದಸ್ಯರು,ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಮತ್ತಿತರರು ಇದ್ದರು.

ಸಿಕೆಬಿ-4 ನಗರ ಹೊರವಲಯದ ಅಗಲಗುರ್ಕಿ ರಾ.ಹೆ.44ರ ಬಳಿ ವಿಬಿ ಜಿ ರಾಮ್ ಜಿ ವಿಧೇಯಕದ ವಿರುದ್ಧ ನಡೆಯಲಿರುವ ಪ್ರತಿಭಟನಾ ಸ್ಥಳವನ್ನು ಶಾಸಕ ಪ್ರದೀಪ್ ಈಶ್ವರ್ ಪರಿಶೀಲಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವೆ: ಬಿ.ವೈ.ವಿಜಯೇಂದ್ರ
ಸುಬ್ಬಾರೆಡ್ಡಿ ಅನರ್ಹ: ಮರು ಚುನಾವಣೆಗೆ ಸಿಪಿಐಎಂ ಒತ್ತಾಯ