ಹುಲಿ ಉಗುರು ನಕಲಿ, ಅಸಲಿ ಎಂದು ನಮಗೆ ಗೊತ್ತಾಗಲ್ಲ: ಮಧು ಬಂಗಾರಪ್ಪ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಇದು ಒಮ್ಮೆಲೆ ವಿಷಯ ಬಂದು ಬಿಟ್ಟಿದೆ. ಹುಲಿಯುಗುರು ಶೋಕಿಗಾಗಿ ಕೆಲವರು ಹಾಕಿಕೊಳ್ಳುತ್ತಾರೆ. ಸದ್ಯ ನಾನು ಈವರೆಗೂ ಹಾಕಿಕೊಂಡಿಲ್ಲ. ಅದು ಒರಿಜಿನಲ್ಲಾ, ಡೂಪ್ಲಿಕೇಟಾ ಎಂಬುದು ನಮಗೆ ಗೊತ್ತಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿಕಾರಿಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಕಾನೂನಿನ ಪರಿಜ್ಞಾನ ಎಲ್ಲರೂ ಇಟ್ಟುಕೊಳ್ಳಬೇಕು. ಜನಪ್ರತಿನಿಧಿಗಳಾದವರು ಸ್ವಲ್ಪ ಹುಷಾರಿಗಿರಬೇಕು. ದೊಡ್ಡ ಮನುಷ್ಯರಾಗರಲೀ, ಚಿಕ್ಕವರಾಗಿರಲೀ ನಾವು ಸ್ವಲ್ಪ ಹುಷಾರಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.
ಶಿಕಾರಿಪುರದಲ್ಲಿ ಸುದ್ದಿಗಾರರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇದು ಒಮ್ಮೆಲೆ ವಿಷಯ ಬಂದು ಬಿಟ್ಟಿದೆ. ಹುಲಿಯುಗುರು ಶೋಕಿಗಾಗಿ ಕೆಲವರು ಹಾಕಿಕೊಳ್ಳುತ್ತಾರೆ. ಸದ್ಯ ನಾನು ಈವರೆಗೂ ಹಾಕಿಕೊಂಡಿಲ್ಲ. ಅದು ಒರಿಜಿನಲ್ಲಾ, ಡೂಪ್ಲಿಕೇಟಾ ಎಂಬುದು ನಮಗೆ ಗೊತ್ತಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿಕಾರಿಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಕಾನೂನಿನ ಪರಿಜ್ಞಾನ ಎಲ್ಲರೂ ಇಟ್ಟುಕೊಳ್ಳಬೇಕು. ಜನಪ್ರತಿನಿಧಿಗಳಾದವರು ಸ್ವಲ್ಪ ಹುಷಾರಿಗಿರಬೇಕು. ದೊಡ್ಡ ಮನುಷ್ಯರಾಗರಲೀ, ಚಿಕ್ಕವರಾಗಿರಲೀ ನಾವು ಸ್ವಲ್ಪ ಹುಷಾರಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು. ನಾವು ಎನ್‌.ಇಪಿ ವಿರೋಧಿಸುತ್ತೇವೆ ಎಂದರೆ ಬಿಜೆಪಿಯವರು ಪಠ್ಯದಲ್ಲಿ ಕೇಸರಿಕರಣ, ಭಾವನಾತ್ಮಕ ವಿಚಾರಗಳನ್ನು ತರುತ್ತಾರೆ. ಚುನಾವಣೆ ಬಂದಾಗಲೆಲ್ಲಾ ಈ ರೀತಿ ಪ್ರಯತ್ನಗಳು ಮಾಡ್ತಾರೆ. ಕೇಂದ್ರ ಸರ್ಕಾರದವರು ಅಲ್ಲಿಯೇ ಕೂತು ಲಗಾಮು ಹಿಡಿಯುವ ಕೆಲಸ ಮಾಡುತ್ತಾರೆ. ಆ ಲಗಾಮು ಅವರ ಕೈಯಲ್ಲಿ ಇರಬಾರದೆಂಬ ಉದ್ದೇಶದಿಂದ ನಾವು ವಿರೋಧಿಸುತ್ತೇವೆ. ಮಕ್ಕಳ ಹಿತದೃಷ್ಟಿ ಬಗ್ಗೆ ಯಾರು‌ ಯೋಚನೆ ಮಾಡ್ತಾರೋ ಅವರ ಕೈಯಲ್ಲಿ ಲಗಾಮು ಇರಬೇಕು. ಅಂತಹ ಒಳ್ಳೆಯ ಯೋಚನೆ ನಮ್ಮ ಸರ್ಕಾರದಲ್ಲಿದೆ. ಭಾರತನೂ ಒಪ್ಪೋಣ, ಇಂಡಿಯಾನೂ ಒಪ್ಪೋಣ. ಇಷ್ಟು ದಿನ ಇದ್ದುದ್ದನ್ನ ಯಾಕೆ ಬದಲಾಯಿಸಬೇಕು ? ಎಂದ ಪ್ರಶ್ನಿಸಿದರು. ಬಿಜೆಪಿಯವರು ಮೊನ್ನೆ ಯೋಚನೆ ಮಾಡ್ತಾರೆ, ಇವತ್ತು ಪೇಪರ್ ನಲ್ಲಿ ಬಂದು ಬಿಡುತ್ತೆ. ಸಂಪ್ರದಾಯವನ್ನೇ ಬದಾಯಿಸಿ ಬಿಡ್ತಾರೆ. ಹೀಗಾಗಿ ಸ್ಟೇಟ್ ಎಜುಕೇಶನ್ ಪಾಲಿಸಿ ಜಾರಿಗೆ ತರುತ್ತಿದ್ದೆವೆ. ನಮ್ಮ ಸಂಪ್ರದಾಯ, ನಮ್ಮ ವ್ಯವಸ್ಥೆ ಇರುತ್ತದೆ. ನಮ್ಮ ಕರ್ನಾಟಕದ ಸಂಪ್ರದಾಯ, ಭಾಷೆ ಪಠ್ಯದಲ್ಲಿ ಇರಬೇಕು. ಬೇರೆ ರಾಜ್ಯದ್ದು, ಅವರ ಸಂಪ್ರದಾಯ, ಅವರ ಭಾಷೆ ಇರುತ್ತದೆ. ಕೇಂದ್ರದವರು ಕಾನೂನನ್ನು ಅವರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಅದಾಗಬಾರದೆಂದೆ ಎನ್ಇಪಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. ಮಕ್ಕಳಲ್ಲಿ ಗೊಂದಲ, ಧಾರ್ಮಿಕ ಭಾವನೆ ಸೃಷ್ಟಿ ಮಾಡುವಂತದ್ದು, ಸಮಾಜದಲ್ಲಿ ಗೊಂದಲ, ಅಸುರಕ್ಷತೆ ತರುವಂತಹದ್ದು, ಮಕ್ಕಳಲ್ಲಿ ಅಸಮಾನತೆ ತರುವುದು ತಪ್ಪು. ಮಕ್ಕಳಲ್ಲಿ ಶುದ್ಧ ಭಾವನೆ ಮೂಡಿಸಬೇಕು. ತಂದೆ ಸಿಎಂ ಆಗಿದ್ದಾಗ ಒಂದು ಯೋಜನೆ ಮಾಡಿದ್ದರು. ಶಾಲೆಗೆ ಬರೋ ಮಕ್ಕಳಿಗೆ 1 ರು. ಕೊಡುವ ಯೋಜನೆ ಮಾಡಿದ್ರು. ಇವತ್ತು ನಾನು ಕೂಡ ಶಿಕ್ಷಣ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಬದಲಾವಣೆ ತರಹ ಕೆಲಸ ಆರಂಭಿಸಿದ್ದೇನೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ತಂದೆಯ ಜನ್ಮದಿನ ಮಾಡಿದ್ದೇವೆ. ಮಕ್ಕಳ ಜೊತೆಗೆ ಊಟ ಮಾಡಿ, ಕಾಲ ಕಳೆದಿದ್ದೇವೆ ಎಂದು ತಿಳಿಸಿದರು. ಬರದ ನಡುವೆ ಡಿಸಿಎಂ ಕಚೇರಿ ನವೀಕರಣ, ಸರ್ಕಾರದಲ್ಲಿ ಹೊಸ ಕಾರು ಖರೀದಿ ವಿಚಾರವಾಗಿ ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಈ ಮುಂಚೆ ಅವರು ನಮ್ಮಂತೆಯೇ ಆಡಳಿತ ನಡೆಸಿದ್ದರು ಎಂಬುದನ್ನು ಮರೆಯಬಾರದು. ವಿರೋಧ ಪಕ್ಷದಲ್ಲಿರುವವರು ಕಾವೇರಿ, ಜಿಎಸ್ಟಿ, ಶರಾವತಿ ಸೇರಿದಂತೆ ಯಾವುದರ ಬಗ್ಗೆಯು ಕೇಂದ್ರದೊಂದಿಗೆ ಮಾತನಾಡಲ್ಲ. ಕೇಂದ್ರವು ಶಿಕ್ಷಣ ವಿಚಾರದಲ್ಲಿ ನಮ್ಮ‌ ರಾಜ್ಯದ ಮಕ್ಕಳಿಗೆ 2.800 ರು. ನೀಡುತ್ತಿದ್ದಾರೆ. ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ಮಕ್ಕಳಿಗೆ 5.200 ರು. ಕೊಡುತ್ತಿದ್ದಾರೆ. ಈ ಬಗ್ಗೆ ಒಮ್ಮೆಯೂ ಅವರು ಮಾತನಾಡಿಲ್ಲ ಎಂದು ಹರಿಹಾಯ್ದರು.

Share this article