ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಏನೂ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದರು. ಪಟ್ಟಣದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ಪುತ್ರಿಯ ವಿವಾಹದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡುವುದು ಅನಾವಶ್ಯಕ ವಿಷಯ ಎಂದರು.ಅಭಿಮಾನದಿಂದ ಹೇಳಿಕೆ
ಡಾ.ಪರಮೇಶ್ವರ್ ಅತ್ಯಂತ ಹಿರಿಯ ನಾಯಕರಾಗಿದ್ದು, ಅವರಿಗೂ ಸಿಎಂ ಆಗುವ ಆರ್ಹತೆ ಇದೆ ಎಂದು ಆಹಾರ ಸಚಿವ ಕೆಎಚ್. ಮುನಿಯಪ್ಪ ಹೇಳಿಕೆ ನೀಡಿರುವ ಕುರಿತು ಪ್ರಶ್ನಿಸಿದಾಗ ಮುನಿಯಪ್ಪನವರು ಅಭಿಮಾನದಿಂದ ಹಾಗೆ ಹೇಳಿದ್ದಾರೆ. ನಾನೂ ಸಹ ಅವರ ಬಗ್ಗೆನೂ ಹೇಳಿದ್ದೇನೆ. ಒಬ್ಬರ ಮೇಲೆ ಒಬ್ಬರಿಗೆ ಅಭಿಮಾನವಿದೆ ಎಂದರು.ಇನ್ನು ರಾಜ್ಯದಲ್ಲಿ ದಲಿತರ ಸಚಿವರ ಡಿನ್ನರ್ ಮೀಟಿಂಗ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾವು ಊಟ ತಿಂಡಿಗೆ ಸೇರುತ್ತೇವೆ ಅದರಲ್ಲಿ ವಿಶೇಷತೆ ಏನೂ ಇಲ್ಲ. ಮೀಟಿಂಗ್ ಸೇರಿದಾಗ ಇಂಟರನಲ್ ರಿಸರ್ವೇಷನ್, ಎಸ್‌ಇಪಿಟಿಎಸ್ಪಿ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ದಲಿತ ಸಮಾವೇಶ ಮಾಡುತ್ತೇವೆ, ಚುನಾವಣೆಗೂ ಮುನ್ನಾ ಚಿತ್ರದುರ್ಗದಲ್ಲಿ ಮಾಡಿದ್ವಿ, ಮತ್ತೆ ಸಮಾವೇಶ ಮಾಡಲು ತಯಾರಿ ನಡೆಸಲಾಗುತ್ತಿದೆ. ಅದರಲ್ಲಿ ಏನೂ ವಿಶೇಷತೆ ಇಲ್ಲ ಎಂದರು.
ಮಾಧ್ಯಮಗಳಿಗೇ ಪ್ರಶ್ನೆಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅರ್‌ಎಸ್‌ಎಸ್ ಬ್ಯಾನ್ ವಿಚಾರದ ಬಗ್ಗೆ ನೀಡಿರುವ ಹೇಳಿಗೆ ಕುರಿತು ಕೇಳಿದ ಪ್ರಶ್ನೆಗೆ, ಅವರ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ ಎಂದಷ್ಟೇ ಹೇಳಿ ಜಾರಿಕೊಂಡರು. ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನಿಸಿದಾಗ ನಿಮಗೇನಾದ್ರು ಮಾಹಿತಿ ಇದ್ದೀಯಾ ಹೇಳಿ ಎಂದು ಮಾಧ್ಯಮಗಳನ್ನೇ ಗೃಹ ಸಚಿವ ಪರಮೇಶ್ವರ್ ಪ್ರಶ್ನೆ ಮಾಡಿದರು.
ನರಸಾಪುರದಲ್ಲಿ ಠಾಣೆನರಸಾಪುರದಲ್ಲಿ ಪೊಲೀಸ್ ಠಾಣೆ ಆರಂಭಿಸಲು ಪ್ರಸ್ತಾವನೆ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಕೆಜಿಎಫ್‌ನಲ್ಲಿ ಇಂಡಿಯಾ ಮೀಸಲು ಪಡೆ ಬೆಟಾಲಿಯನ್ ಆರಂಭಿಸಲಾಗುತ್ತಿದ್ದು ಶೀಘ್ರವಾಗಿ ಅಡಿಗಲ್ಲು ಹಾಕಲಾಗುತ್ತದೆ ಎಂದರು.