ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ವರ ೧೩೪ ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್‌ವರು ಪಕ್ಷಾತೀತವಾಗಿ ಸಂವಿಧಾನ ಬರೆದಿದ್ದಾರೆ. ನಾನು ಆಯ್ಕೆಗೊಂಡಿರುವುದು ಸಂವಿಧಾನದ ಪ್ರಕಾರವಾಗಿದೆ. ದೇಶದ ಹಿಂದುಳಿದ ಮತ್ತು ತುಳಿತಕ್ಕೊಳಗಾದ ದೀನ ದಲಿತರಿಗೆ ಸಮಾನತೆಯನ್ನು ನೀಡಿದ್ದಾರೆ ಎಂದರು.
ಬೀದರ್ ಸಂಸದ ಸಾಗರ ಖಂಡ್ರೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಸಮಾನತೆಯ ನ್ಯಾಯ ಕೊಟ್ಟಿರುವುದಕ್ಕಾಗಿ ಸಂತೋಷ, ಶಾಂತಿಯಿಂದ ಬದುಕುತ್ತಿದ್ದೇವೆ. ಕಾನೂನಿನ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು, ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ಕೊಡಬೇಕು. ನಾನು ಚಿಕ್ಕ ವಯಸ್ಸಿನಲ್ಲಿಯೇ ಬೀದರ್ ಲೋಕಸಭೆ ಸದಸ್ಯನಾಗಿದ್ದೇನೆ. ನಾವೆಲ್ಲರೂ ಒಗಟ್ಟಾಗಿ ಕೆಲಸವನ್ನು ಮಾಡಬೇಕಾಗಿದೆ ಎಂದರು.ಮಹಾರಾಷ್ಟ್ರದ ದಿವ್ಯಾ ಸಿಂಧೆ ಮಾತನಾಡಿ, ಕೇಂದ್ರದ ಗೃಹ ಸಚಿವರು ದಲಿತರ ಮನೆಯಲ್ಲಿರುವ ಅಂಬೇಡ್ಕರ್‌ರವರ ಹಾಗೂ ಬುದ್ದನ ಭಾವಚಿತ್ರವನ್ನು ನೋಡಿದರೆ ನಿಮಗೆ ಸ್ವರ್ಗ ಸಿಗಲಿದೆ. ಅಂಬೇಡ್ಕರ್ ಜೀವನ ಚರಿತ್ರೆ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ. ಅಂಬೇಡ್ಕರ್ ಕತ್ತಲಿನಲ್ಲಿ ಜೀವನ ಸಾಗಿಸುವವರಿಗೆ ಬೆಳಕು ನೀಡಿ ಶಕ್ತಿ ತುಂಬಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಅನಂದಕುಮಾರ ಟೈಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ್ಯುತ್ಸವ ಸಮಾರಂಭದಲ್ಲಿ ವಿಠಲ ವಗ್ಗನ ವಿಶೇಷ ಉಪನ್ಯಾಸ ನೀಡಿದರು. ದಲಿತ ಮುಖಂಡರಾದ ಸಂಜೀವನ್ ಯಾಕಾಪೂರ, ಸಮಿತಿ ಅಧ್ಯಕ್ಷ ವಿಶ್ವನಾಥ ಬೀರನಳ್ಳಿ, ಗೋಪಾಲರವ ಕಟ್ಟಿಮನಿ ಡಾ. ಬಿ.ಆರ್.ಅಂಬೇಡ್ಕರ್‌ರವರ ವಿಚಾರ ತತ್ವಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸುಭಾಷ ರಾಠೋಡ, ಶಾಮರಾವ ಕೊರವಿ, ಶ್ರೀಮಂತ ಕಟ್ಟಿಮನಿ, ಆರ್.ಗಣಪತರಾವ, ಜಗನ್ನಾಥ ಕಟ್ಟಿ, ಜಗನ್ನಾಥ ಗುತ್ತೆದಾರ, ಲಕ್ಷ್ಮಣ ಆವಂಟಿ, ಅಬ್ದುಲ್ಲ ಬಾಸೀತ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಅಮರ ಲೊಡನೋರ, ವೈಜನಾಥ ಮಿತ್ತ, ಸಂತೋಷ ಗುತ್ತೆದಾರ, ಪಾಂಡುರಂಗ ಲೊಡನೋರ, ವಾಮನರಾವ ಕೊರವಿ, ಇಂದುಮತಿ ದೇಗಲಮಡಿ, ಅನೀಲ ಜಮಾದಾರ ಮಾರುತಿ ಗಂಜಗಿರಿ, ಹಾಗೂ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು. ಪೂಜ್ಯ ಭಂತೆಜ್ಞಾನ ಸಾಗರ ಅಣದೂರ ಸಾನಿಧ್ಯವನ್ನು ವಹಿಸಿದ್ದರು. ಪುರಸಭೆ ಅಧ್ಯಕ್ಷ ಆನಂದಕುಮಾರ ಸ್ವಾಗತಿಸಿದರು. ಸುರೇಶ ಕೊರವಿ ನಿರೂಪಿಸಿದರು.ದೇವೇಂದ್ರಪ್ಪ ಹೋಳ್ಕರ ವಂದಿಸಿದರು. ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವನ್ನು ಬಸವೇಶ್ವರ ಚೌಕ್‌ನಿಂದ ಅಂಬೇಡ್ಕರ್ ವೃತ್ತದವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ವಿವಿಧ ಗ್ರಾಮಗಳಿಂದ ದಲಿತ ಸಂಘೆಟನೆಗಳ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.