ಕನ್ನಡಪ್ರಭ ವಾರ್ತೆ ಮದ್ದೂರು
ಸಿಪಿಐಎಂ ಪಕ್ಷ ಸೆ.22ರಂದು ಪಟ್ಟಣದ ಆಯೋಜಿಸಿರುವ ಸೌಹಾರ್ದ ನಡಿಗೆಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.ಗಣೇಶೋತ್ಸವದಲ್ಲಿ ನಡೆದ ಅಶಾಂತಿಯ ನಂತರ ಪಟ್ಟಣ ಸಹಜ ಸ್ಥಿತಿಗೆ ಮರಳಿದ್ದರೂ ಸೌಹಾರ್ದ ನಡಿಗೆ ಸಿಪಿಐಎಂ ಪಕ್ಷದ ರಾಜಕೀಯ ಅಜೆಂಡಾದ ಭಾಗ ಮಾತ್ರ. ಇಂತಹ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಅಸಾಮರಸ್ಯಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ.
ಧರ್ಮಾಚರಣೆ ಪ್ರತಿಯೊಬ್ಬರ ಸ್ವಾತಂತ್ರ್ಯದ ಭಾಗ. ಅದಕ್ಕೆ ಅಡ್ಡಿಯಾದವರಿಗೆ ಕಾನೂನು ಬದ್ಧ ಶಿಕ್ಷೆ ಆಗಬೇಕು ಎಂಬುದು ಒಕ್ಕೂಟದ ಆಗ್ರಹವಾಗಿದೆ. ಒಕ್ಕೂಟ ಸೆ.22ರ ಸೌಹಾರ್ದ ನಡಿಗೆಗೂ ನಮಗೂ ಸಂಬಂದವಿಲ್ಲ. ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಷಯ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ವಿವರಿಸಿದ್ದಾರೆ ಎಂದು ಹೇಳಿದ್ದಾರೆ.ಈ ವೇಳೆ ವಿಸಿ ಉಮಾಶಂಕರ, ಪ್ರಧಾನ ಸಂಚಾಲಕ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಾರ್ಗದರ್ಶಕ ನ.ಲಿ.ಕೃಷ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ, ಜಿಲ್ಲಾ ರೈತ ಸಂಘಟನೆ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್, ಗ್ರಾಪಂ ಸದಸ್ಯರ ಒಕ್ಕೂಟದ ಎಸ್.ದಯಾನಂದ, ವಿ.ಜೆ.ಸುನಿಲ್ ಕುಮಾರ್, ವಿ.ಎಚ್.ಶಿವಲಿಂಗಯ್ಯ, ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ರೈತ ಮುಖಂಡರಾದ ಲಿಂಗರಾಜು, ವೆಂಕಟೇಶ್, ಕಜವೇ ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ದೇವು ಸಂಘಟನಾ ಕಾರ್ಯದರ್ಶಿ ಎಂ.ವೀರಪ್ಪ, ವಿ.ಟಿ.ಕೆಂಚಪ್ಪ, ಗೂಡ್ಸ್ ವಾಹನ ಮಾಲೀಕರ ಸಂಘದ ಎಸ್ಐ ಕೋಡಿಹಳ್ಳಿ ಪ್ರಭಾಕರ್, ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘದ ಅಧ್ಯಕ್ಷ ಮನ ಪ್ರಸನ್ನ ಕುಮಾರ್, ಗೊರವನಹಳ್ಳಿ ಪ್ರಸನ್ನ, ಮಣಿ, ಅಯ್ಯಪ್ಪ ಹಾಜರಿದ್ದರು.ಸೆ.22ರ ಹೋರಾಟಕ್ಕೆ ಮುಸ್ಲಿಂ ಸಮುದಾಯ ಬೆಂಬಲ
ಮದ್ದೂರು:ಪಟ್ಟಣದಲ್ಲಿ ನಡೆದ ಗಣೇಶಮೂರ್ತಿ ಮೆರವಣಿಗೆ ವೇಳೆ ಗಲಾಟೆ ವಿಚಾರವಾಗಿ ಸೆ.22ರಂದು ಹಮ್ಮಿಕೊಂಡಿರುವ ಪ್ರಗತಿಪರರ ಹೋರಾಟಕ್ಕೆ ಮುಸ್ಲಿಂ ಸಮುದಾಯ ಬೆಂಬಲ ನೀಡಿದೆ.
ಕಲ್ಲು ತೂರಾಟ ಘಟನೆ ಮುಂದಿಟ್ಟುಕೊಂಡು ಕೋಮು ಸಂಘರ್ಷ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ಹಾಗೂ ಹಿಂದು ಸಂಘಟನೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಪೂರ್ವಭಾವಿ ಸಭೆಯಲ್ಲಿ ಪ್ರಗತಿಪರರ ಹೋರಾಟಕ್ಕೆ ಮುಸ್ಲಿಂ ಸಮುದಾಯ ಬೆಂಬಲ ಘೋಷಣೆ ಮಾಡಿದೆ.ಬೆಂಬಲ ನೀಡುವ ಜೊತೆಗೆ ಹಣ ನೀಡುವುದಾಗಿ ಮುಸ್ಲಿಂ ಮುಖಂಡ ಆದೀಲ್ ಖಾನ್ ಹೇಳಿದ್ದಾರೆ. ಹೋರಾಟಕ್ಕೆ ಖರ್ಚು ವೆಚ್ಚ ಅಗತ್ಯ ಇದೆ. ಅದಕ್ಕೆ ಹಣ ಕೊಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ತಮ್ಮ ಸಮುದಾಯದಿಂದಲೇ ತಪ್ಪಾಗಿದೆ ಎಂದು ಶಾಂತಿ ಸಭೆಯಲ್ಲಿ ಹೇಳಿದ್ದ ಆದೀಲ್ ಖಾನ್ ಈಗ ಸೆ.22 ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.