ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ: ನಟ ಅನಿರುದ್ಧ್‌

KannadaprabhaNewsNetwork |  
Published : Sep 19, 2025, 01:00 AM IST
ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ: ಅನಿರುದ್ಧ್‌ | Kannada Prabha

ಸಾರಾಂಶ

ಇತ್ತೀಚೆಗೆ ವಿಷ್ಣುವರ್ಧನ್‌ ಅವರ ಸಮಾಧಿಯ ಮೇಲಿದ್ದ ಮಂಟಪ ತೆರೆವುಗೊಳಿಸಲಾಗಿದೆ. ಈ ಕುರಿತು ಬಾಲಣ್ಣ ಕುಟುಂಬಕ್ಕೂ ಮನವಿ ಮಾಡಿದ್ದೇವೆ. ಸರ್ಕಾರ ಜಾಗವನ್ನು ವಶಕ್ಕೆ ಪಡೆದಿದೆ. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮೈಸೂರಿನಲ್ಲಿ ಸರ್ಕಾರ 16 ಕೋಟಿ ರು. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳೂ ನಡೆಯುತ್ತಿದೆ ಎಂದು ನಟ ಹಾಗೂ ವಿಷ್ಣುವರ್ಧನ್‌ ಅಳಿಯ ಅನಿರುದ್ಧ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರತ್ನ ಬಂದಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅಭಿಮಾನಿಗಳು ನಮ್ಮ ಜೊತೆಯಲ್ಲಿರಬೇಕು. ಸ್ಮಾರಕ ನಿರ್ಮಾಣ ಸಂಬಂಧ 10 ಗುಂಟೆ ಜಾಗಕ್ಕೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಅಲ್ಲಿನ ಮಂಟಪವನ್ನು ಭಾರತಿಯವರೇ ನಿರ್ಮಿಸಿದ್ದರು. ಈಗ ಮೈಸೂರಿನಲ್ಲಿ ಉತ್ತಮವಾದ ಸ್ಮಾರಕ ನಿರ್ಮಾಣವಾಗಿದೆ ಎಂದರು.

ಇತ್ತೀಚೆಗೆ ವಿಷ್ಣುವರ್ಧನ್‌ ಅವರ ಸಮಾಧಿಯ ಮೇಲಿದ್ದ ಮಂಟಪ ತೆರೆವುಗೊಳಿಸಲಾಗಿದೆ. ಈ ಕುರಿತು ಬಾಲಣ್ಣ ಕುಟುಂಬಕ್ಕೂ ಮನವಿ ಮಾಡಿದ್ದೇವೆ. ಸರ್ಕಾರ ಜಾಗವನ್ನು ವಶಕ್ಕೆ ಪಡೆದಿದೆ. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮೈಸೂರಿನಲ್ಲಿ ಸರ್ಕಾರ 16 ಕೋಟಿ ರು. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿದೆ ಎಂದರು.

ಸರ್ಕಾರ 10 ಗುಂಟೆ ಜಾಗ ಕೊಟ್ಟರೆ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ. ವಿಷ್ಣುವರ್ಧನ್ ಅವರ ಕುಟುಂಬದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಕುಟುಂಬದ ಬಗ್ಗೆ ಗೊತ್ತಿಲ್ಲದವರು ಹಾಗೆ ಮಾತನಾಡುತ್ತಿದ್ದಾರೆ. ಅಭಿಮಾನಿಗಳೆಂದು ಮುಖವಾಡ ಹಾಕಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಎಚ್ಚರಿಕೆ ಕೊಟ್ಟಿರುವುದಾಗಿ ಅವರು ಹೇಳಿದರು.

ಆದರೂ ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲಾತಾಣದಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ನಕಾರಾತ್ಮಕ ಕಾಮೆಂಟ್ ಮಾಡುವವರು ನಮ್ಮ ಅಪ್ಪಾಜಿಯ ಅಭಿಮಾನಿಗಳೇ ಅಲ್ಲ. ನಮ್ಮ ಅಪ್ಪನಿಗೆ ನಕಾರಾತ್ಮಕ ಕಾಮೆಂಟ್ ಇಷ್ಟವಾಗುತ್ತಿರಲಿಲ್ಲ. ನಾವು ಅಭಿಮಾನಿಗಳ ಜೊತೆಯಲ್ಲಿದ್ದೇವೆ. ಏನೇ ಸಂಶಯ ಇದ್ದರೂ ನನ್ನ ಬಳಿ ಬಂದು ನೇರವಾಗಿ ಕೇಳಿ ಪರಿಹರಿಸಿಕೊಳ್ಳಿ ಎಂದರು.

ಮೈಸೂರಿನಲ್ಲಿ ಇಷ್ಟು ದೊಡ್ಡ ಸ್ಮಾರಕ ಆಗಿದೆ. ಈ ರೀತಿ ಯಾರ ಸ್ಮಾರಕವೂ ಇಲ್ಲ. ಕರ್ನಾಟಕ ರತ್ನ ತೆಗೆದುಕೊಳ್ಳಲು ನಮ್ಮ ಅಪ್ಪಾಜಿ ಅರ್ಹರು. ಕೇಳಿ ಪಡೆದುಕೊಳ್ಳುವ ಪ್ರಶಸ್ತಿ ಅಲ್ಲ ಎಂದು ಅವರು ಹೇಳಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ