ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿ । ಮಾತೃದೇವೋಭವ- ಪಿತೃದೇವೋಭವ ಕಾರ್ಯಕ್ರಮ
ಮಕ್ಕಳು ಬದಲಾಗಬೇಕೆಂದು ಬಯಸುವ ನಾವು ಮೊದಲು ಬದಲಾಗಬೇಕು. ಮಕ್ಕಳು ಅನುಕರಣೆಯ ಮೂಲಕ ಬೆಳೆಯುವುದರಿಂದ ನಮ್ಮ ವಾತಾವರಣ, ಸಂಸ್ಕೃತಿ, ಜೀವನ ಶೈಲಿ ಮಕ್ಕಳ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಅಕ್ಷಯ ಗೋಖಲೆ ಹೇಳಿದರು.
ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ಮಾತೃದೇವೋಭವ- ಪಿತೃದೇವೋಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಕ್ಕಳು ದಾರಿ ತಪ್ಪುತ್ತವೆ ಎಂದು ಆತಂಕ ಪಡುವ ಬದಲು ಆಂತರಿಕ ಚಿಂತನೆ ಮಾಡಿದರೆ ಮಕ್ಕಳನ್ನು ಬದಲಾಯಿಸಲು ಸಾಧ್ಯ. ಮಗು ಜನಿಸಿದಾಗ ತಾಯಿ ಆ ನೋವಲ್ಲಿಯೂ ಕಣ್ಣೀರ ಹರಿಸುತ್ತ ಸಂತಸ ಪಡುತ್ತಾಳೆ. ಆದರೆ ಮುಂದೆ ನಮ್ಮಿಂದ ಕಣ್ಣೀರು ಹಾಕಿಸದಂತೆ ನೋಡಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ತಂದೆ-ತಾಯಿಯರ ಪಾದ ಪೂಜೆ ಮಾಡಿಸಲಾಯಿತು. ಸಂಸ್ಥೆಯ ವತಿಯಿಂದ ಆಯ್ಕೆಯಾದ ಹತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಶ್ರವಣ ಕುಮಾರ ಪ್ರಶಸ್ತಿಯನ್ನು ಹಾಗೂ ಶಿಕ್ಷಕಿಯಾದ ಹುವಿ ಅನಿತ ಅವರಿಗೆ ಆಚಾರ್ಯದೇವೋಭವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ಮಾತೃದೇವೋಭವ- ಪಿತೃದೇವೋಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.