ಮಲೆನಾಡು ಉತ್ಸವವನ್ನು ಉದ್ಘಾಟಿಸಿ
ಸಾವಿರಾರು ವರ್ಷಗಳಿಂದ ತನ್ನದೆ ಆದ ಪ್ರಾಚೀನತೆ ಹೊಂದಿ ಬಂದಿರುವ ಮಲೆನಾಡಿ ಕಲೆ, ಸಂಸ್ಕೃತಿ ಪರಂಪರೆಗಳು ಇಂದು ಅವನತಿ ಅಂಚಿಗೆ ತಲುಪುತ್ತಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕಿಗ್ಗಾ ಸರ್ಕಲ್ ಬಳಿ ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಲೆನಾಡು ಉತ್ಸವವನ್ನು ಕಡೆಗೋಲಿನಲ್ಲಿ ಮಜ್ಜಿಗೆ ಕಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಲೆ,ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಹೋಗುವ ಕೆಲಸ ಆಗಬೇಕಿದೆ.ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ಮಲೆನಾಡು ಉತ್ಸವ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಕಲಾವಿದರಿಗೆ ಪ್ರೋತ್ಸಾಹ, ಗುರುತಿಸಿ ಅಭಿನಂದಿಸುವ ಕೆಲಸಗಳನ್ನು ಮಾಡುತ್ತಾ ಇಂದಿಗೂ ಉಳಿಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರ,ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಗೆದ್ದೆಮನೆ ವಿಶ್ವನಾಥ್,ನಾಗೇಶ್ ಕಾಮತ್,ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ಪಟ್ಟಣದ ಕಿಗ್ಗಾ ಸರ್ಕಲ್ ಬಳಿ ನಡೆದ ಮಲೆನಾಡು ಉತ್ಸವ ಕಾರ್ಯಕ್ರಮವನ್ನು ಕಡೆಗೋಲಿನಲ್ಲಿ ಮಜ್ಜಿಗೆ ಕಡೆಯುವುದರ ಮೂಲಕ ಶಂ,ನ,ಕೃಷ್ಣಮೂರ್ತಿ ಉದ್ಘಾಟಿಸಿದರು.