ಮನರೇಗಾ ಹೆಸರು ಬದಲು ಖಂಡಿಸಿ ಐಕ್ಯ ಹೋರಾಟ

KannadaprabhaNewsNetwork |  
Published : Feb 09, 2026, 02:00 AM IST
ಕ್ಯಾಪ್ಷನ5ಕೆಡಿವಿಜಿ33 ದಾವಣಗೆರೆಯಲ್ಲಿಂದು ಕೃಷಿ ಕೂಲಿ ಕಾರ್ಮಿಕರ ದಾವಣಗೆರೆ 2ನೇ ಜಿಲ್ಲಾ ಸಮ್ಮೇಳನವನ್ನು ಎಚ್.ಎಂ.ಸಂತೋಷ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸುವುದರೊಂದಿಗೆ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಬೇಕೆಂದು (ಬಿಕೆಎಂಯು) ಕೃಷಿ ಕಾರ್ಮಿಕರ ಸಂಘದ ರಾಜ್ಯ ಉಸ್ತುವಾರಿ ಎಚ್.ಎಂ. ಸಂತೋಷ್ ಹೇಳಿದ್ದಾರೆ.

- ಕೃಷಿ ಕಾರ್ಮಿಕರ ಸಂಘದ ರಾಜ್ಯ ಉಸ್ತುವಾರಿ ಎಚ್.ಎಂ. ಸಂತೋಷ್ ಹೇಳೀಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸುವುದರೊಂದಿಗೆ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಬೇಕೆಂದು (ಬಿಕೆಎಂಯು) ಕೃಷಿ ಕಾರ್ಮಿಕರ ಸಂಘದ ರಾಜ್ಯ ಉಸ್ತುವಾರಿ ಎಚ್.ಎಂ. ಸಂತೋಷ್ ಹೇಳಿದರು.

ನಗರದ ಪಂಪಾಪತಿ ಭವನದಲ್ಲಿ ಗುರುವಾರ ನಡೆದ ಕೃಷಿ ಕೂಲಿ ಕಾರ್ಮಿಕರ ದಾವಣಗೆರೆ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಹೆಸರು ಬದಲಾಯಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ನಾಯಕರು ನಮಗೆ ಸ್ಫೂರ್ತಿ ನೀಡಿರುವುದನ್ನು ಮನವರಿಕೆ ಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕೆಂದರು.

ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಉದ್ಯೋಗ ಭದ್ರತೆಗಾಗಿ ಯುಪಿಎ 1 ಸರ್ಕಾರದಲ್ಲಿ ಮನರೇಗಾ ಜಾರಿಗೆ ಬಂದಿತು. ಸಣ್ಣ ರೈತರು ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿಕೊಂಡು ಪಟ್ಟಣಗಳಿಗೆ ವಲಸೆ ಹೋಗಬಾರದೆಂದು ಅವರು ಇರುವ ಗ್ರಾಮಗಳಲ್ಲಿಯೇ ಉದ್ಯೋಗ ದೊರಕಬೇಇಉ ಎನ್ನುವ ದೃಷ್ಟಿಯಿಂದ ಮನರೇಗಾ ಜಾರಿಗೆ ಬಂದಿತ್ತು. ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ವರ್ಷಕ್ಕೆ 200 ದಿನಗಳಿಗೆ ಏರಿಸಬೇಕೆಂದು ಕೃಷಿ ಕೂಲಿ ಕಾರ್ಮಿಕರ ಸಂಘಟನೆ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ,

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೆಲಸದ ದಿನಗಳನ್ನು 125 ದಿನಗಳಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಪಾತವನ್ನು ಶೇಕಡಾ 50, 40 ಮಾಡಿ ರಾಜ್ಯಗಳಿಗೆ ಆರ್ಥಿಕ ಹೊರೆ ಮಾಡಿದೆ. ಗ್ರಾಮಗಳಿಗೆ ತೆರಳಿ ಕೃಷಿ ಕೂಲಿ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಕೊಡಿಸಲು ಮುಂದಾಗುವುದರ ಮೂಲಕ ಕಾರ್ಯಕರ್ತರು ಶ್ರಮಿಸಬೇಕೆಂದರು.

ಸಮ್ಮೇಳನದ ಆರಂಭದಲ್ಲಿ ಸುರೇಶ್, ಶೇಖರಪ್ಪ ಪಂಪಾಪತಿ ಟ್ರಸ್ಟಿನ ಖಜಾಂಚಿ ಜಿ.ಯಲ್ಲಪ್ಪ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ.ಉಮೇಶ್, ಹಾವೇರಿ ಜಿಲ್ಲಾ ಎಐಟಿಯುಸಿ ಅಧ್ಯಕ್ಷ ಹನುಮಂತಪ್ಪ ಅಗಸಿಬಾಗಿಲು, ಸಿಪಿಐ ದಾವಣಗೆರೆ ತಾಲೂಕು ಕಾರ್ಯದರ್ಶಿ ಕೆರನಹಳ್ಳಿ ರಾಜು, ರಾಷ್ಟ್ರೀಯ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜಾ, ಸಿಪಿಐ ಜಿಲ್ಲಾ ಮಂಡಳಿ ಸದಸ್ಯೆ ಬೆಳಲಗೆರೆ ರುದ್ರಮ್ಮ, ನರೇಗಾ ರಂಗನಾಥ್, ಎ.ತಿಪ್ಪೇಶ್, ಕೆ.ಬಾನಪ್ಪ ಇತರರು ಇದ್ದರು.

- - -

(ಕೋಟ್‌) ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿ ತರುವವರೆಗೂ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ.

- ಎಚ್‌.ಎಂ. ಸಂತೋಷ್‌, ಮುಖಂಡ.

- - -

-5ಕೆಡಿವಿಜಿ33: ದಾವಣಗೆರೆಯಲ್ಲಿ ಗುರುವಾರ ಕೃಷಿ ಕೂಲಿ ಕಾರ್ಮಿಕರ ದಾವಣಗೆರೆ 2ನೇ ಜಿಲ್ಲಾ ಸಮ್ಮೇಳನವನ್ನು ಕೃಷಿ ಕಾರ್ಮಿಕರ ಸಂಘದ ಎಚ್.ಎಂ.ಸಂತೋಷ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ